ರಹಸ್ಯವಾಗಿ ಮೂರನೇ ಮದುವೆಯಾದ 'ಕಪ್ಪು ವಿಧವೆ' ಸ್ಕಾರ್ಲೆಟ್

ಹಾಲಿವುಡ್ ನ ಖ್ಯಾತ ನಟಿ ಸ್ಕಾರ್ಲೆಟ್ ಜೋಹಾನ್ಸನ್ ಮೂರನೇ ವಿವಾಹವಾಗಿದ್ದಾರೆ. ಇತ್ತೀಚಿಗಷ್ಟೆ ನಟಿ ಸ್ಕಾರ್ಲೆಟ್ ಜೋಹಾನ್ಸನ್ ಖ್ಯಾತ ಕಮಿಡಿಯನ್ ಕಾಲಿನ್ ಜೋಸ್ಟ್ ಜೊತೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಗುಟ್ಟಾಗಿ ನಡೆದ ಮದುವೆ ಸಮಾರಂಭದಲ್ಲಿ ಖ್ಯಾತ ನಟಿ ಸ್ಕಾರ್ಲೆಟ್ ಜೋಹಾನ್ಸನ್ ಮೂರನೇ ಬಾರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಸ್ಕಾರ್ಲೆಟ್ ಜೋಹಾನ್ಸನ್ 'ಬ್ಲಾಕ್ ವಿಡೋ' ಪಾತ್ರದ ಮೂಲಕ ಬಹಳ ಜನಪ್ರಿಯರು. ಕಳೆದ ವರ್ಷ ಮದುವೆ ವಿಚಾರವನ್ನು ಬಹಿರಂಗ ಪಡಿಸಿದ್ದರು. ಈ ವರ್ಷ ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.

35 ವರ್ಷದ ನಟಿ ಸ್ಕಾರ್ಲೆಟ್ ಜೋಹಾನ್ಸನ್ ಮತ್ತು 38 ವರ್ಷದ ನಟ ಹಾಗೂ ಬರಹಗಾರ ಕಾಲಿನ್ ಜೋಸ್ಟ್ ಇಬ್ಬರು ಎರಡು ವರ್ಷಗಳಿಂದ ಡೇಟಿಂಗ್ ನಲ್ಲಿದ್ದರು. ಕಳೆದ ವರ್ಷ 2019ರಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು

Black Widow Fame Actress Scarlett Johansson Married Comedian Colin Jost

ನ್ಯೂಯಾರ್ಕ್ ಮೂಲದ ನಟಿ ಈ ಮೊದಲು ಕೆನಡಾದ ನಟ ರಿಯಾನ್ ರೆನಾಲ್ಡ್ ಅವರನ್ನು ಮೊದಲು ಮದುವೆಯಾಗಿದ್ದರು. ಇಬ್ಬರು ದೂರ ದೂರ ಆದ ಬಳಿಕ ಜೋಹಾನ್ಸನ್ ಫ್ರೆಂಚ್ ಪತ್ರಕರ್ತ ರೊಮೈನ್ ಡೌರಿಯಾಕ್ ಜೊತೆ ವಿವಾಹ ಬಂಧನಕ್ಕೆ ಒಳಗಾಗಿದ್ದರು. ಆದರೆ ಎರಡನೇ ಮದುವೆ ಸಹ ತುಂಬಾ ದಿನ ಉಳಿಯಲಿಲ್ಲ. ಎರಡನೇ ಗಂಡನಿಂದ ದೂರ ಆದ ಬಳಿಕ ಈಗ ಮೂರನೇ ಮದುವೆಯಾಗುತ್ತಿದ್ದಾರೆ.

2003ರಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದು ಬೀಗಿದ್ದ 'ಲಾಸ್ಟ್ ಇನ್ ಟ್ರಾನ್ಸ್ಲೇಷನ್' ಸಿನಿಮಾದಲ್ಲಿ ಜೋಹಾನ್ಸನ್ ನಟಿಸಿದ್ದರು. ಕಳೆದ ವರ್ಷ ಜೋಹಾನ್ಸನ್ ನಟಿಸಿದ್ದ ಎರಡು ಸಿನಿಮಾಗಳು ಆಸ್ಕರ್ ನಾಮನಿರ್ದೇಶನಗೊಂಡಿತ್ತು.

Recommended Video

ಮಗನ ಬರ್ತ್ ಡೇ ಗೆ ಎಮೋಷನಲ್ ಪೋಸ್ಟ್ ಹಾಕಿದ ವಿಜಯಲಕ್ಷ್ಮಿ ದರ್ಶನ್ | Filmibeat Kannada

More from Filmibeat

English summary
Black Widow fame actress Scarlett Johansson married comedian colin jost.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X