For Quick Alerts
  ALLOW NOTIFICATIONS  
  For Daily Alerts

  'ಸ್ಕೂಲ್ ಆಫ್ ರಾಕ್' ಖ್ಯಾತಿಯ ನಟ ಕೆವಿನ್ ಕ್ಲಾರ್ಕ್ ನಿಧನ

  |

  'ಸ್ಕೂಲ್ ಆಫ್ ರಾಕ್' ಸಿನಿಮಾ ಮೂಲಕ ಖ್ಯಾತಿಗಳಿಸಿದ್ದ ಹಾಲಿವುಡ್ ನಟ ಮತ್ತು ಸಂಗೀತಗಾರ ಕೆವಿನ್ ಕ್ಲಾರ್ಕ್ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಬುಧವಾರ (ಮೇ 26) ಬೆಳಗ್ಗೆ ಅಮೆರಿಕದ ಚಿಕಾಗೊ ಬೀದಿಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ಕೆವಿನ್ ಕಾರಿಗೆ ಡಿಕ್ಕಿ ಹೊಡೆದ್ದಾರೆ, ತಕ್ಷಣ ಅವರನ್ನು ಆಸ್ಪತ್ರೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

  32 ವರ್ಷದ ಕೆವಿನ್ ಸಾವಿನ ಬಗ್ಗೆ ಪೊಲೀಸರು ಪ್ರತಿಕ್ರಿಯೆ ನೀಡಿ, ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಕೆವಿನ್ ಕಾರಿನ ಕೆಳಗೆ ಸಿಲುಕಿಕೊಂಡಿದ್ದರು. ತಕ್ಷಣವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಸ್ವಲ್ಪ ಸಮಯದಲ್ಲೇ ಕೆವಿನ್ ನಿಧನಹೊಂದಿದ್ದಾರೆ.

  ದೊರೆಸ್ವಾಮಿ ನಿಧನಕ್ಕೆ ಕಂಬನಿ ಮಿಡಿದ ಸಿನಿತಾರೆಯರುದೊರೆಸ್ವಾಮಿ ನಿಧನಕ್ಕೆ ಕಂಬನಿ ಮಿಡಿದ ಸಿನಿತಾರೆಯರು

  ಕಾರು ಚಲಾಯಿಸುತ್ತಿದ್ದ 20 ವರ್ಷ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರಂತೆ. ಆದರೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲವಂತೆ. ಕೆವಿನ್ 2003ರಲ್ಲಿ ಬಿಡುಗೆಯಾಗಿದ್ದ ಸ್ಕೂಲ್ ಆಫ್ ರಾಕ್ ಚಿತ್ರದಲ್ಲಿ ಬಾಲ ಶಾಲಾ ಹುಡುಗನ ಪಾತ್ರದಲ್ಲಿ ನಟಿಸಿದ್ದರು.

  ಕೆವಿನ್ ನಿಧನದಿಂದ ಶಾಕ್ ಆಗಿರುವ ಸ್ಕೂಲ್ ಆಫ್ ರಾಕ್ ನ ಸಹ ನಟ ಜ್ಯಾಕ್ ಬ್ಲಾಕ್ ಪ್ರತಿಕ್ರಿಯೆ ನೀಡಿ, 'ಕೆವಿನ್ ಇನ್ನಿಲ್ಲ. ಇಷ್ಟು ಬೇಗ ಯಾಕೆ ಹೋದೆ. ಅದ್ಭುತವಾದ ವ್ಯಕ್ತಿ. ಎಷ್ಟು ನೆನಪುಗಳು. ಹೃದಯಛಿದ್ರವಾಗಿದೆ. ಅವರ ಕುಟುಂಬ ಮತ್ತು ಸ್ಕೂಲ್ ಆಫ್ ರಾಕ್ ತಂಡಕ್ಕೆ ನನ್ನ ಪ್ರೀತಿ ಕಳುಹಿಸುತ್ತೇನೆ' ಎಂದಿದ್ದಾರೆ.

  ಇನ್ಯಾವತ್ತೂ Salman Khan ಸಿನಿಮಾ ವಿಮರ್ಶೆ ಮಾಡೋದಿಲ್ಲ ಎಂದ‌ KRK | Filmibeat Kannada

  ಕೆವಿನ್ ಕ್ಲಾರ್ಕ್ ನಟ ಮಾತ್ರವಲ್ಲದೆ ಗಾಯಕ ಕೂಡ ಹೌದು. ಡ್ರಮ್, ಕೀಬೋರ್ಡ್ ಮತ್ತು ಗಿಟಾರ್ ಕೂಡ ನುಡಿಸುತ್ತಿದ್ದರು. ಸ್ಕೂಲ್ ಆಫ್ ರಾಕ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತಾದರೂ ಸಂಗೀತದಲ್ಲಿ ಕೆವಿನ್ ಅಪಾರ ಆಸಕ್ತಿ ಹೊಂದಿದ್ದರು.

  English summary
  School Of Rock fame Actor Kevin Clark dies in accident.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X