»   » 'ಗಂಗ್ನಮ್ ಸ್ಟೈಲ್' ಹಾಡನ್ನ ಹಿಂದಿಕ್ಕಿ ಇತಿಹಾಸ ನಿರ್ಮಿಸಿದ ಹಾಡು

'ಗಂಗ್ನಮ್ ಸ್ಟೈಲ್' ಹಾಡನ್ನ ಹಿಂದಿಕ್ಕಿ ಇತಿಹಾಸ ನಿರ್ಮಿಸಿದ ಹಾಡು

Posted By:
Subscribe to Filmibeat Kannada

ಯ್ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಕರು ನೋಡಿದ ಹಾಡು ಯಾವುದು ಎಂದು ಕೇಳಿದರೇ, 'ಗಂಗ್ನಮ್ ಸ್ಟೈಲ್' ಎಂದು ಬಹುತೇಕರು ಥಟ್ ಅಂತ ಹೇಳುತ್ತಾರೆ. ಹೌದು, ಕೊರಿಯಾ ಮೂಲದ ಈ ಗಾಯನ ಯ್ಯೂಟ್ಯೂಬ್ ನಲ್ಲಿ ಕಳೆದ ಐದಾರು ವರ್ಷಗಳಿಂದ ನಂಬರ್ ವನ್ ಸ್ಥಾನದಲ್ಲಿತ್ತು.

ಈ ದಾಖಲೆಯನ್ನ ಬೇರೆ ಯಾವ ಹಾಡು ಬ್ರೇಕ್ ಮಾಡಲು ಸಾಧ್ಯವಿಲ್ಲ ಎಂಬ ಮಾತುಗಳು ಇತ್ತು. ಆದ್ರೆ, ಈ ಎಲ್ಲಾ ಅಂತೆ-ಕಂತೆಗಳನ್ನ ಮೂಲೆಗುಂಪಾಗಿಸಿದ ಹಾಡೊಂದು 'ಗಂಗ್ನಮ್ ಸ್ಟೈಲ್' ವೀಕ್ಷಕರನ್ನ ಸಂಖ್ಯೆಯನ್ನ ಮೀರಿ ನಂಬರ್ ವನ್ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಯ್ಯೂಟ್ಯೂಬ್ ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ.

ಹಾಗಿದ್ರೆ, 'ಗಂಗ್ನಮ್ ಸ್ಟೈಲ್' ಹಾಡನ್ನ ಹಿಂದಿಕ್ಕಿದ ಆ ಹಾಡು ಯಾವುದು? ಯ್ಯೂಟ್ಯೂಬ್ ನಲ್ಲಿ ಟಾಪ್ 5 ಅತಿ ಹೆಚ್ಚು ವೀಕ್ಷಕರನ್ನ ಹೊಂದಿರುವ ಹಾಡು ಯಾವುದು? ಮುಂದಿದೆ ಓದಿ.....

'ಸೀ ಯು ಅಗೈನ್'

'ಫಾಸ್ಟ್ ಅಂಡ್ ಫ್ಯೂರಿಯಸ್ 7' ಚಿತ್ರದ 'ಸೀ ಯು ಅಗೈನ್' ಹಾಡು ಈಗ ಯ್ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಕರನ್ನ ಹೊಂದಿದೆ. 2,926,385,875 ಕೋಟಿ ಜನರು ಈ ಹಾಡನ್ನ ನೋಡಿದ್ದಾರೆ. ಈ ಮೂಲಕ 'ಗಂಗ್ನಮ್ ಸ್ಟೈಲ್' ಹೆಸರಿನಲ್ಲಿದ್ದ ದಾಖಲೆಯನ್ನ ಮುರಿದಿದೆ.

ಲಿಂಕ್ ಕ್ಲಿಕ್ ಮಾಡಿ, ಹಾಡು ನೋಡಿ

'ಗಂಗ್ನಮ್ ಸ್ಟೈಲ್'

ಇನ್ನು 2012ರಲ್ಲಿ ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡಿದ 'ಗಂಗ್ನಮ್ ಸ್ಟೈಲ್' ಹಾಡು ಯ್ಯೂಟ್ಯೂಬ್ ನಲ್ಲಿ ಕಿಂಗ್ ಎನಿಸಿಕೊಂಡಿತ್ತು. 2,902,337,069 ಕೋಟಿ ವೀಕ್ಷಕರು ಈ ಹಾಡನ್ನ ನೋಡಿದ್ದರು. ಇಷ್ಟು ದಿನ ಮೊದಲ ಸ್ಥಾನದಲ್ಲಿದ್ದ ಈ ಹಾಡು ಈಗ, ಎರಡನೇ ಸ್ಥಾನಕ್ಕೆ ಜಿಗಿದಿದೆ.

ಲಿಂಕ್ ಕ್ಲಿಕ್ ಮಾಡಿ, ಹಾಡು ನೋಡಿ

ಸಾರಿ (Sorry) ಹಾಡು

ಜಸ್ಟಿನ್ Bieber ಅವರ ಸಾರಿ (Sorry) ಹಾಡು ಯ್ಯೂಟ್ಯೂಬ್ ನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಈ ಹಾಡಿನ ವೀಕ್ಷಕರ ಸಂಖ್ಯೆ 2,651,889,061 ಕೋಟಿ.

ಲಿಂಕ್ ಕ್ಲಿಕ್ ಮಾಡಿ, ಹಾಡು ನೋಡಿ

ನಾಲ್ಕನೇ ಸ್ಥಾನದಲ್ಲಿ

ನಾಲ್ಕನೇ ಸ್ಥಾನದಲ್ಲಿ ಲೂಯಿಸ್ fonsi ಅವರ Despacito ft. Daddy Yankee ಹಾಡು ಇದೆ. ಈ ಹಾಡಿನ ವೀಕ್ಷಕರ ಸಂಖ್ಯೆ 2,615,662,106 ಕೋಟಿ.

ಲಿಂಕ್ ಕ್ಲಿಕ್ ಮಾಡಿ, ಹಾಡು ನೋಡಿ

ಮಾರ್ಕ್ ರಾನ್ಸನ್ - Uptown Funk ft

ಇನ್ನು ಐದನೇ ಸ್ಥಾನದಲ್ಲಿ ಮಾರ್ಕ್ ರಾನ್ಸನ್ ಅವರ Uptown Funk ft ಹಾಡು ಇದೆ. ಈ ಹಾಡಿನ ವೀಕ್ಷಕರ ಸಂಖ್ಯೆ 2,557,613,177 ಕೋಟಿ.

ಲಿಂಕ್ ಕ್ಲಿಕ್ ಮಾಡಿ, ಹಾಡು ನೋಡಿ

English summary
Wiz Khalifa and Charlie Puth's music video for See You Again overtakes Gangnam Style to become most viewed video on YouTube

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada