For Quick Alerts
  ALLOW NOTIFICATIONS  
  For Daily Alerts

  ಕಾನ್ಸರ್ಟ್ ಗೆ ಹೋಗುವ ಭರದಲ್ಲಿ ಪ್ಯಾಂಟ್ ಒಳಗೆ 'ಎಲ್ಲ'ವನ್ನೂ ಮಾಡಿಕೊಂಡಿದ್ದ ಗಾಯಕಿ.!

  |

  ನಿದ್ದೆಯಲ್ಲಿ ಗೊತ್ತಾಗದೆ ಕೆಲವರು ಮೂತ್ರ ವಿಸರ್ಜನೆ ಮಾಡಿಕೊಳ್ಳಬಹುದು. ಕೆಮ್ಮಿದರೆ ಅಥವಾ ನಕ್ಕರೆ ಸ್ವಲ್ಪ ಮೂತ್ರ ಹೊರಗೆ ಹೋಗುವ ಸಮಸ್ಯೆ ಕೆಲವರಿಗೆ ಕಾಡಬಹುದು. ಆದ್ರಿಲ್ಲಿ ಹಾಲಿವುಡ್ ನ ಪ್ರಖ್ಯಾತ ಗಾಯಕಿ ಮತ್ತು ನಟಿಯೊಬ್ಬರು ಕಾನ್ಸರ್ಟ್ ಗೆ ಹೋಗುವ ಭರದಲ್ಲಿ ಪ್ಯಾಂಟ್ ಒಳಗೆ ಎಲ್ಲವನ್ನೂ ಮಾಡಿಕೊಂಡಿದ್ದರಂತೆ.!

  ಹೌದು, ಅಮೇರಿಕಾದ ಜನಪ್ರಿಯ ಗಾಯಕಿ ಮತ್ತು ನಟಿ ಸೆಲೆನಾ ಗೊಮೇಝ್ ತಮ್ಮ ಪ್ಯಾಂಟ್ ಒಳಗೆ ಒಮ್ಮೆ ಮಲ ಮತ್ತು ಮೂತ್ರ ವಿಸರ್ಜನೆ ಮಾಡಿಕೊಂಡಿದ್ದರಂತೆ. ಆ ಮುಜುಗರದ ಘಟನೆಯನ್ನ ಸೆಲೆನಾ ಗೊಮೇಝ್ ಇತ್ತೀಚೆಗಷ್ಟೇ 'ಕಿಸ್ ಎಫ್.ಎಂ'ನಲ್ಲಿ ಹೇಳಿಕೊಂಡಿದ್ದಾರೆ.

  ಚಿಕ್ಕವಯಸ್ಸಿನಿಂದಲೂ ಸೆಲೆನಾ ಗೊಮೇಝ್ ಗೆ ಸಂಗೀತದ ಬಗ್ಗೆ ಅಪಾರ ಆಸಕ್ತಿ ಇದೆ. ಕಾನ್ಸರ್ಟ್ ಗಳಿಗೆ ಹೋಗುವುದೆಂದರೆ ಆಕೆಗೆ ಅಚ್ಚುಮೆಚ್ಚು. ಒಮ್ಮೆ ಹಾಲಿವುಡ್ ಬೌಲ್ ನಲ್ಲಿ ಎಡ್ ಶೀರನ್ ರವರ ಕಾನ್ಸರ್ಟ್ ನಡೆಯುತ್ತಿತ್ತು. ಅಲ್ಲಿಗೆ ಹೋಗಲು ಆತುರಾತುರವಾಗಿ ಸೆಲೆನಾ ಗೊಮೇಝ್ ತಯಾರಾದರು. ದಾರಿ ಮಧ್ಯೆ ಟ್ರಾಫಿಕ್ ನಲ್ಲಿ ಬೇರೆ ಸಿಲುಕಿದ್ದ ಕಾರಣ ಶೌಚಾಲಯಕ್ಕೆ ಹೋಗಲು ಸೆಲೆನಾ ಗೊಮೇಝ್ ಗೆ ಸಾಧ್ಯ ಆಗಲಿಲ್ಲ. ಆಗ ವಿಧಿ ಇಲ್ಲದೆ ಆಕೆ ಪ್ಯಾಂಟ್ ನಲ್ಲೇ ಮಲ ಮತ್ತು ಮೂತ್ರ ವಿಸರ್ಜನೆ ಮಾಡಿಕೊಂಡುಬಿಟ್ಟರಂತೆ.

  ''ನನ್ನ ಜೀವಮಾನದಲ್ಲೇ ಪ್ಯಾಂಟ್ ನ ಹೇಸಿಗೆ ಮಾಡಿಕೊಂಡಿದ್ದು ಇದೇ ಮೊದಲು. ಕಾನ್ಸರ್ಟ್ ನಿಂದ ವಾಪಸ್ ಹೋಗಲು ಇಷ್ಟ ಇರಲಿಲ್ಲ. ಹೀಗಾಗಿ, ಪ್ಯಾಂಟ್ ಮೇಲೆ ಸೊಂಟಕ್ಕೆ ಸ್ವೆಟರ್ ಕಟ್ಟಿಕೊಂಡು ಕಾನ್ಸರ್ಟ್ ನಲ್ಲಿ ಪಾಲ್ಗೊಂಡೆ''

  ''ಈ ವಿಚಾರವನ್ನು ನಾನು ಯಾರಿಗೂ ಹೇಳಿಲ್ಲ. ಈಗ ಬಹಿರಂಗ ಪಡಿಸಿರುವುದರಿಂದ ಎಲ್ಲಾ ಕಡೆ ಹೆಡ್ ಲೈನ್ಸ್ ಆಗುವುದು ಪಕ್ಕಾ'' ಅಂತ 'ಕಿಸ್ ಎಫ್.ಎಂ'ನಲ್ಲಿ ಹೇಳಿದ್ದಾರೆ ಸೆಲೆನಾ ಗೊಮೇಝ್.

  English summary
  American Singer, Actress Selena Gomez admits she soiled her pants before Ed Sheeran concert.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X