ಅಮೆರಿಕಾದಿಂದ ಹೊರದಬ್ಬಬೇಡಿ, ಗಳಗಳನೆ ಅತ್ತ ಖ್ಯಾತ ಗಾಯಕಿ...!

ವಲಸೆ ಇಂದು ನಿನ್ನೆಯದ್ದಲ್ಲ. ಶಿಕ್ಷಣ, ಕೆಲಸ, ಅಂತರಿಕ ಸಮಸ್ಯೆ, ಹವಾಮಾನ ವೈಪರೀತ್ಯ, ಹೀಗೆ ನಾನಾ ಕಾರಣಗಳಿಂದ ಅನೇಕ ವರ್ಷಾನುವರ್ಷಗಳಿಂದ ದೇಶದಿಂದ ದೇಶಕ್ಕೆ ವಲಸೆ ಮುಂದುವರೆದಿದೆ. ಒಂದು ಅಧ್ಯಯನದ ಪ್ರಕಾರ ಜಗತ್ತಿನಲ್ಲಿ ಬಹುತೇಕರು ತಾವು ಜನ್ಮ ಪಡೆದ ನೆಲದಲ್ಲಿಯೇ ಜೀವನ ನಡೆಸುತ್ತಿದ್ದು, ಮೂವತ್ತು ಮಂದಿಯಲ್ಲಿ ಒಬ್ಬರು ಮಾತ್ರ ವಲಸಿಗರಾಗಿದ್ದಾರೆ.

ಆದರೂ ಜಾಗತಿಕ ಹಂತದಲ್ಲಿ ವಲಸಿಗರ ಸಂಖ್ಯೆ ದೊಡ್ಡದಾಗಿದ್ದು ವರ್ಷದಿಂದ ವರ್ಷಕ್ಕೆ ಈ ಸಂಖ್ಯೆ ಹೆಚ್ಚಾಗುತ್ತಿದೆ. ಈ ವಲಸಿಗರ ವಿರುದ್ಧ ಅಮೆರಿಕಾದ ನೂತನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸಮರ ಸಾರಿದ್ದಾರೆ. ಇದು ಈಗ ವಿಶ್ವದ ನಾನಾ ಮೂಲೆಗಳಿಂದ ಬಂದು ಅಮೆರಿಕಾವನ್ನು ಸೇರಿಕೊಂಡ ಅನೇಕರ ಆತಂಕವನ್ನು ಹೆಚ್ಚಿಸಿದೆ. ಇದಕ್ಕೆ ಒಂದು ಪುರಾವೆ ಎನ್ನುವಂತೆ ಅಮೆರಿಕಾದ ಸುಪ್ರಸಿದ್ದ ಗಾಯಕಿ ಮತ್ತು ನಾಯಕಿ ಸೆಲೆನಾ ಗೋಮೇಜ್ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ವಿಡಿಯೋ ವೈರಲ್ ಆಗಿದೆ.

Selena Gomez Breaks Down Over Trump s Immigration Crackdown in Deleted Instagram Video

ಹೌದು, ಅಸಲಿಗೆ ಅಮೆರಿಕಾ ಸಂವಿಧಾನದ 14ನೇ ತಿದ್ದುಪಡಿಯು ದೇಶದಲ್ಲಿ ಹುಟ್ಟಿದ ಮಕ್ಕಳಿಗೆ ಪೌರತ್ವ ನೀಡುತ್ತದೆ. ಅಮೆರಿಕಾದಲ್ಲಿ ನೆಲಸಿರುವ ಅಕ್ರಮ ವಲಸಿಗರ ಮಕ್ಕಳಿಗೆ ಇದು ಅನ್ವಯವಾಗುತ್ತೆ. ಆದರೆ ಈ ಕಾಯ್ದೆಯನ್ನು ಬದಲಿಸಲು ಅಣಿಯಾಗಿರುವ ಡೋನಾಲ್ಡ್ ಟ್ರಂಪ್ ಅಕ್ರಮ ವಲಸಿಗರೊಂದಿಗೆ ಅವರ ಮಕ್ಕಳು ಅಮೆರಿಕಾದಲ್ಲಿ ಹುಟ್ಟಿದ್ದರೂ ಕೂಡ ತಮ್ಮ ದೇಶದಿಂದ ಹೊರ ದಬ್ಬಲು ಮುಂದಾಗಿದ್ದಾರೆ.

ಡೋನಾಲ್ಡ್ ಟ್ರಂಪ್ ತೆಗೆದುಕೊಂಡ ಈ ನಿರ್ಧಾರದಿಂದ ಅಮೆರಿಕಾದಲ್ಲಿ ನೆಲೆಸಿರುವ ಲಕ್ಷಾಂತರ ಜನರು ಅತಂತ್ರರಾಗಿದ್ದಾರೆ. ಆತಂಕದಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ಅಕ್ರಮ ವಲಸಿಗರ ಈ ಸಂಕಷ್ಟವನ್ನು ಅರಿತ ಸೆಲೆನಾ ಗೋಮೇಜ್ ವಿಡಿಯೋ ಮೂಲಕ ತಮ್ಮ ನೋವನ್ನು ಹೊರ ಹಾಕಿದ್ದಾರೆ. ಕೆಲ ಸಮಯದ ನಂತರ ವಿಡಿಯೋ ಡಿಲೀಟ್ ಕೂಡ ಮಾಡಿದ್ದಾರೆ. ಆದರೆ ವಿಡಿಯೋವನ್ನು ಆಗಲೇ ಅನೇಕರು ಡೌನ್‌ ಲೋಡ್ ಮಾಡಿಕೊಂಡಿದ್ದ ಕಾರಣ ವಿಡಿಯೋ ವೈರಲ್ ಆಗುತ್ತಿದೆ.

ಸೆಲೆನಾ ಗೋಮೇಜ್ ಬಿಕ್ಕಿ ಬಿಕ್ಕಿ ಹೇಳಿದ್ದೇನು ?

ನಾನು ನಿಮ್ಮೆಲ್ಲರಿಗೆ ಕ್ಷಮೆ ಕೇಳುತ್ತಿದ್ದೇನೆ ಎಂದು ಮಾತು ಪ್ರಾರಂಭ ಮಾಡಿರುವ ಸೆಲೆನಾ ನನ್ನ ಎಲ್ಲ ಜನರು ದಾಳಿಗೆ ಒಳಗಾಗುತ್ತಿದ್ದಾರೆ. ಏನಾಗುತ್ತಿದೆ ಎನ್ನುವುದೇ ನನಗೆ ಗೊತ್ತಾಗುತ್ತಿಲ್ಲ. ನನಗೇನು ಮಾಡಬೇಕೆಂದು ಕೂಡ ತೋಚುತ್ತಿಲ್ಲ, ನಾನು ನಿಮ್ಮೆಲ್ಲರಿಗೆ ಸಹಾಯ ಮಾಡಬೇಕೆಂದುಕೊಂಡಿದ್ದೇನೆ ಆದರೆ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ನನ್ನ ಶಕ್ತಿಮೀರಿ ನಾನು ಸಹಾಯ ಮಾಡುವ ಪ್ರಯತ್ನ ಮಾಡುತ್ತೇನೆ ಎಂಬ ಭರವಸೆಯನ್ನು ನಾನು ನಿಮಗೆ ಕೊಡುತ್ತೇನೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ವಿಡಿಯೋ ಜೊತೆ ಮೆಕ್ಸಿಕೋ ದೇಶದ ಧ್ವಜವನ್ನು ಹಾಕಿದ್ದಾರೆ.

ಸೆಲೆನಾ ಹೇಳಿಕೆಗೆ ಅಮೆರಿಕನ್ನರ ಆಕ್ರೋಶ

ಸೆಲೆನಾ ಗೋಮೇಜ್ ಅಮೆರಿಕಾದ ಖ್ಯಾತ ಗಾಯಕಿ. ಹೆಚ್ಚು ಕಡಿಮೆ ಎರಡೂವರೆ ದಶಕದಿಂದ ಹಾಲಿವುಡ್ ಚಿತ್ರರಂಗದಲ್ಲಿ ಗುರುತಿಸಿಕೊಂಡವರು ಇವರು. ಇನ್ನು ಇವರು ವಾಸ ಮಾಡುವುದು ಕೂಡ ಅಮೆರಿಕಾದ ಟೆಕ್ಸಾಸ್‌ನಲ್ಲಿ. ಅಮೆರಿಕಾದಲ್ಲಿಯೇ ಹುಟ್ಟಿ ಅಮೆರಿಕಾದಲ್ಲಿ ಬೆಳೆದು ಹೆಸರು ಹಣ ಕೀರ್ತಿಯನ್ನು ಸಂಪಾದನೆ ಮಾಡಿರುವ ಸೆಲೆನಾ ಗೋಮೇಜ್ ಈಗ ಅಮೆರಿಕಾದ ನೀತಿಯ ವಿರುದ್ಧ ಮಾತನಾಡಿದ್ದಾರೆ. ಈ ಕಾರಣಕ್ಕೆ ಕೆರಳಿ ಕೆಂಡವಾದ ಅನೇಕರು ಸೆಲೆನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಸೆಲೆನಾ ಅವರ ತಂದೆ ಮೆಕ್ಸಿಕೋ . ಈ ಕಾರಣಕ್ಕೆ ಅನುಕಂಪದಿಂದ ಸೆಲೆನಾ ಮೆಕ್ಸಿಕೋದ ಬಾವುಟವನ್ನು ಸೆಲೆನಾ ತಮ್ಮ ವಿಡಿಯೋ ಜೊತೆ ಹಾಕಿದ್ದಾರೆ. ಸೆಲೆನಾ ಅವರ ಈ ನಡೆ ಕೂಡ ಅನೇಕರನ್ನು ಕೆರಳಿಸಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಅನೇಕ ಅಮೆರಿಕ್‌ನ್ನರು ಸೆಲೆನಾ ಹೇಳಿಕೆಯನ್ನು ವಿರೋಧಿಸಿದ್ದಾರೆ. ಮೆಕ್ಸಿಕನ್ ಜನರ ಬಗ್ಗೆ ಅಷ್ಟೊಂದು ಒಲವು ಮತ್ತು ಪ್ರೀತಿ ಇದ್ದರೆ ನೀವು ಕೂಡ ಅಲ್ಲಿಯೇ ಹೋಗಿ ವಾಸ ಮಾಡಿ ನಮ್ಮದೇನು ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ.

More from Filmibeat

Read more about: hollywood singer filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X