»   » ಚಿತ್ರಗಳು: 'ಹ್ಯಾರಿಪಾಟರ್' ನಟಿ ಸೆಕ್ಸಿ ಎಮ್ಮಾ ವ್ಯಾಟ್ಸನ್ ಭಾವ-ಭಂಗಿ

ಚಿತ್ರಗಳು: 'ಹ್ಯಾರಿಪಾಟರ್' ನಟಿ ಸೆಕ್ಸಿ ಎಮ್ಮಾ ವ್ಯಾಟ್ಸನ್ ಭಾವ-ಭಂಗಿ

By: ಸೋನು
Subscribe to Filmibeat Kannada

ಫೇಮಸ್ ಹಾಲಿವುಡ್ ಸಿನಿಮಾ 'ಹ್ಯಾರಿಪಾಟರ್' ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ನಟಿ ಎಮ್ಮಾ ವ್ಯಾಟ್ಸನ್ ಗೊತ್ತಿರಬೇಕಲ್ವಾ?. ಸಖತ್ ಹಾಟ್ ಅಂಡ್ ಸೆಕ್ಸಿಯಾಗಿ ತುಂಬಾನೇ ಕ್ಯೂಟಿ ಆಗಿರುವ ಎಮ್ಮಾ ವ್ಯಾಟ್ಸನ್ ಅವರು ಇಡೀ ಹಾಲಿವುಡ್ ಚಿತ್ರರಂಗದಲ್ಲಿ ತುಂಬಾ ಸೆಕ್ಸಿ ನಟಿ ಅಂತಾನೇ ಖ್ಯಾತಿ ಗಳಿಸಿದ್ದಾರೆ.

ಅಂದಹಾಗೆ ಈ ಆಕರ್ಷಕ ನಟಿ 2013 ರಲ್ಲಿ 'ದ ಸೆಕ್ಸಿಯೆಸ್ಟ್ ವಿಮೆನ್ ನಟಿ' ಎಂಬ ಪಟ್ಟ ಕೂಡ ಗಿಟ್ಟಿಸಿಕೊಂಡಿದ್ದರು. ಇಲ್ಲಾಂದ್ರೂನೂ ಇವರು ಅತ್ಯಂತ ಸೆಕ್ಸಿ ನಟಿ ಅನ್ನೋದರಲ್ಲಿ ಯಾವುದೇ ಅನುಮಾನ ಇಲ್ಲ ಬಿಡಿ.

ಈ ಸೆಕ್ಸಿ ನಟಿ ಜನಿಸಿದ್ದು ಪ್ಯಾರೀಸ್ ನಲ್ಲಾದರೂ ಬೆಳೆದಿದ್ದು ಆಕ್ಸ್ಫರ್ಡ್ ಶೈರ್ ನಲ್ಲಿ. ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಶಾಲಾ ದಿನಗಳಲ್ಲಿ ಇರುವಾಗಲೇ 'ಹ್ಯಾರಿಪಾಟರ್' ಸೀರಿಸ್ ಚಿತ್ರಗಳಲ್ಲಿ ನಟಿಸಲು ಅವಕಾಶ ಗಿಟ್ಟಿಸಿಕೊಂಡರು.[ವಿಮರ್ಶೆ : ಹ್ಯಾರಿ ಪಾಟರ್ ಅಂಡ್ ದಿ ಹಾಫ್ ಬ್ಲಡ್ ಪ್ರಿನ್ಸ್]

Sensational Pics Of Hollywood Actress Emma Watson

'ಹ್ಯಾರಿಪಾಟರ್' ಸೀರಿಸ್ ಆದ ನಂತರ 'ದ ಪರ್ಕ್ಸ್ ಆಫ್ ಬಿಯಿಂಗ್ ಅ ವಾಲ್ ಫ್ಲವರ್', 'ದ ಬ್ಲಿಂಗ್ ರಿಂಗ್', 'ಇನ್ ದ ಎಂಡ್', 'ನೋಹಾ' ಮುಂತಾದ ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.

ಇಂತಹ ಅಪೂರ್ವ ನಟಿ ಸುಮಾರು 16 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅತ್ಯುತ್ತಮ ನಟಿ, 'ಉತ್ತಮ ಕಿಸ್' ಮತ್ತು 'ಉತ್ತಮ ಫೈಟ್' ಮುಂತಾದ ಪ್ರಶಸ್ತಿಗಳನ್ನು ತಮ್ಮ ಬಗಲಿಗೆ ಹಾಕಿಕೊಂಡಿದ್ದಾರೆ.

ಮಾತ್ರವಲ್ಲದೆ ಮಾಡೆಲಿಂಗ್ ನಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಎಮ್ಮಾ ವ್ಯಾಟ್ಸನ್ ಕೆಲವು ಫ್ಯಾಶನ್ ಶೋ ಗಳಲ್ಲಿ ಭಾಗವಹಿಸಿದ್ದಾರೆ. ಇದರಿಂದಾಗಿ ಇವರು ಬ್ರಿಟಿಷ್ ಎಲ್ಲೆಯಿಂದ 2011 ರಲ್ಲಿ 'ಸ್ಟೈಲ್ ಐಕಾನ್' ಎಂಬ ಪ್ರಶಸ್ತಿ ಪಡೆದಿದ್ದಾರೆ.

ಇವರು ಬರೀ ನಟನೆ, ಮಾಡೆಲಿಂಗ್ ನಲ್ಲಿ ಮಾತ್ರವಲ್ಲದೇ, ಓದುವಿಕೆಯಲ್ಲೂ ಮುಂದಿದ್ದಾರೆ. ಇತ್ತೀಚೆಗಷ್ಟೇ ಇಂಗ್ಲೀಷ್ ಸಾಹಿತ್ಯದಲ್ಲಿ ಪದವಿ ಪೂರೈಸಿದ್ದಾರೆ. ಜೊತೆಗೆ ಯೋಗ ಮತ್ತು ಮೆಡಿಟೇಶನ್ ನ ಕೋರ್ಸ್ ಕೂಡ ಮುಗಿಸಿದ್ದಾರೆ.

ಇವರು ಮಹಿಳಾ ಕಾರ್ಯಗಳಲ್ಲಿ ಹೆಚ್ಚು-ಹೆಚ್ಚು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದು, 2014 ರಲ್ಲಿ ಯುಎನ್ ವಿಮೆನ್ ಗುಡ್ ವಿಲ್ ಸಂಸ್ಥೆಗೆ ರಾಯಭಾರಿಯಾಗಿ ಆಯ್ಕೆಯಾಗಿದ್ದರು. 2014 ರಲ್ಲಿ ನಡೆದ ಮಹಿಳಾ ಪರ ಸೆಲೆಬ್ರಿಟಿ ಎಂಬ ಆನ್ ಲೈನ್ ಮತ ಸಮೀಕ್ಷೆಯ ಪಟ್ಟಿಯಲ್ಲಿ 'ಹ್ಯಾರಿಪಾಟರ್' ಬೆಡಗಿ ಎಮ್ಮಾ ವ್ಯಾಟ್ಸನ್ ಅವರ ಹೆಸರಿತ್ತು.

ಇಷ್ಟೆಲ್ಲಾ ಪ್ರತಿಭೆಯುಳ್ಳ ಅಭೂತಪೂರ್ವ ಚೆಲುವೆ ಇತ್ತೀಚೆಗೆ ಫೋಟೋ ಶೂಟ್ ನಡೆಸಿದ್ದು, ಇವರ ಹಲವು ಭಾವ-ಭಂಗಿ ನೋಡಲು ಸ್ಲೈಡ್ಸ್ ಕ್ಲಿಕ್ಕಿಸಿ..

-
-
-
-
-
-
-
-
-
-
-
-
-
-
-
-
-
English summary
The cute and lively girl Emma Watson, whom we knew from the Harry Potter movies as Hermione Granger, has progressed from 'Cute' to 'Hot'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada