twitter
    For Quick Alerts
    ALLOW NOTIFICATIONS  
    For Daily Alerts

    ಹಾಲಿವುಡ್‌ನಲ್ಲಿ ಮಿಂಚುತ್ತಿರೋ ಬೆಂಗಳೂರಿನ ಸೆಟ್ ಡಿಸೈನರ್ ಹರ್ಷಿತಾ: 'ಕೆಜಿಎಫ್ 2' ಬಗ್ಗೆ ಹೇಳಿದ್ದೇನು?

    |

    ಸಿನಿಮಾ ಅನ್ನುವುದು ಕಲರ್‌ಫುಲ್ ಪ್ರಪಂಚ. ಈ ಕಲರ್‌ಫುಲ್ ಪ್ರಪಂಚದಲ್ಲಿ ಕೆಲಸ ಮಾಡಬೇಕು ಅನ್ನುವುದು ಅದೆಷ್ಟೋ ಮಂದಿಯ ಕನಸು. ಆದರೆ ಸಿನಿಮಾರಂಗಕ್ಕೆ ಬರಬೇಕು ಅಂತಿರುವ ಬಹುತೇಕ ಮಂದಿ ಹೀರೊ, ಹೀರೊಯಿನ್ ಆಗಬೇಕು ಅನ್ನುವ ಕನಸು ಹೊತ್ತು ಬರುತ್ತಾರೆ. ಇಲ್ಲೊಬ್ಬರು ಸೆಟ್‌ ಡೈರೆಕ್ಟರ್ ಆಗಬೇಕು ಅಂತ ಕನಸು ಕಂಡಿದ್ದರು. ಆ ಕನಸನ್ನು ಹಾಲಿವುಡ್‌ನಲ್ಲಿ ಕೆಲಸ ಮಾಡುವ ಮೂಲಕ ನನಸು ಮಾಡಿಕೊಳ್ಳುತ್ತಿದ್ದಾರೆ.

    ಹಾಲಿವುಡ್‌ನಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರಿನ ಆ ಪ್ರತಿಭೆಯೇ ಹರ್ಷಿತಾ ರೆಡ್ಡಿ. ಬಾಲ್ಯದಲ್ಲಿ ಒಂದು ಸಿನಿಮಾ ನೋಡಿ ಸೆಟ್‌ ಡೈರೆಕ್ಟರ್ ಆಗಬೇಕು ಅಂತ ಕನಸು ಕಂಡವರು. ಅಲ್ಲಿಂದ ಸಿನಿಮಾನೇ ಇವರ ಪ್ರಪಂಚ ಆಗಿತ್ತು. ಎಲ್ಲರಂತೆ ಮಗಳನ್ನು ಸಿನಿಮಾಗೆ ಕಳಿಸುವುದು ತಂದೆ-ತಾಯಿಗೂ ಇಷ್ಟವಿರಲಿಲ್ಲ. ಹೀಗಾಗಿ ಬೆಂಗಳೂರಿನ ಯಲಹಂಕದಲ್ಲಿರುವ BMS ಕಾಲೇಜಿನಲ್ಲಿ ಆರ್ಕಿಟೆಕ್ಚರ್ ಮುಗಿಸಿ, ಸೀದಾ ಅಮೆರಿಕಗೆ ಹಾರಿದ್ದರು. ಅಲ್ಲಿನ ಲಾಸ್ ಏಂಜಲೀಸ್‌ನ ಅಮೆರಿಕನ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ತನ್ನ ಕನಸುಗಳನ್ನು ನನಸು ಮಾಡಿಕೊಂಡಿದ್ದಾರೆ.

    ಧನುಶ್ ನಟನೆಯ ಹಾಲಿವುಡ್ ಸಿನಿಮಾ ಟ್ರೇಲರ್ ಬಿಡುಗಡೆ: ಅಭಿಮಾನಿಗಳಿಗೆ ನಿರಾಸೆಧನುಶ್ ನಟನೆಯ ಹಾಲಿವುಡ್ ಸಿನಿಮಾ ಟ್ರೇಲರ್ ಬಿಡುಗಡೆ: ಅಭಿಮಾನಿಗಳಿಗೆ ನಿರಾಸೆ

    ನೆಟ್‌ಫಿಕ್ಸ್, ಡಿಸ್ನಿ+ ಹಾಟ್‌ಸ್ಟಾರ್, ಹೆಚ್‌ಬಿಓ (HBO) ಅಂತಹ ವಿಶ್ವದ ಜನಪ್ರಿಯ ಸಂಸ್ಥೆಗಳ ವೆಬ್ ಸಿರೀಸ್ ಹಾಗೂ ಟಿವಿ ಶೋಗಳಿಗೆ ಸೆಟ್ ಡಿಸೈನ್ ಮಾಡುತ್ತಿದ್ದಾರೆ. ಬೆಂಗಳೂರಿನ ಪ್ರತಿಭೆಯೊಂದು ಹಾಲಿವುಡ್‌ನಲ್ಲಿ ಮಿಂಚುತ್ತಿದ್ದು ತಮ್ಮ ಜರ್ನಿಯ ಬಗ್ಗೆ ಫಿಲ್ಮಿ ಬೀಟ್ ಕನ್ನಡ ಜೊತೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 'ಕೆಜಿಎಫ್ 2' ಸಿನಿಮಾ ಸೆಟ್ಟು, ರಾಜಮೌಳಿ ಸಿನಿಮಾ, ಭಾರತದ ಸಿನಿಮಾಗಳಲ್ಲಿನ ಆಸಕ್ತಿ ಬಗೆ ಮನಬಿಚ್ಚಿ ಮಾತಾಡಿದ್ದಾರೆ.

    ಸೆಟ್ ಡಿಸೈನ್ ಬಗ್ಗೆ ಕ್ರೇಜ್ ಹುಟ್ಟಿದ್ದೇಗೆ?

    ಸೆಟ್ ಡಿಸೈನ್ ಬಗ್ಗೆ ಕ್ರೇಜ್ ಹುಟ್ಟಿದ್ದೇಗೆ?

    "ನಮ್ಮ ಅಜ್ಜ-ಅಜ್ಜಿ ಆಂಧ್ರದವರಾದರೂ, ನಮ್ಮ ತಂದೆ-ತಾಯಿ ಬೆಂಗಳೂರಿನಲ್ಲಿ ನಲೆಸಿದ್ದಾರೆ. ನಾನು ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿಯೇ. ನಾನು ಆವರೇಜ್ ಸ್ಟುಡೆಂಟ್. ಆದರೆ, ಚಿಕ್ಕಂದಿನಿಂದಲೂ ನನಗೆ ಕಲರ್‌ಗಳ ಬಗ್ಗೆ ಆಸಕ್ತಿ ಇತ್ತು. ಸಿನಿಮಾಗಳಲ್ಲಿ ಸೆಟ್ ಡಿಸೈನ್ ಮಾಡಬೇಕು ಅನ್ನುವುದು ನನ್ನ ಆಸೆಯಾಗಿತ್ತು. ಆದರೆ ಮಧ್ಯಮ ವರ್ಗದವರಾಗಿದ್ದ ನಮ್ಮ ಮನೆಯಲ್ಲಿ ಇಂಜಿನಿಯರ್ ಇಲ್ಲವೇ ಡಾಕ್ಟರ್ ಆಗಬೇಕು ಎಂಬ ಆಸೆಯಿತ್ತು. ಅವರ ಆಸೆಯಂತೆ ಆರ್ಕಿಟೆಕ್ಚರ್ ಮುಗಿಸಿ, ನಮ್ಮ ಸಂಬಂಧಿಯೊಬ್ಬರ ಸಹಾಯದಿಂದ ಅಮೆರಿಕದಲ್ಲಿ ಸೆಟ್ ಡಿಸೈನ್‌ ಬಗ್ಗೆ ಕಲಿತು, ಈಗ ಇಲ್ಲಿಯೇ ಕೆಲಸ ಮಾಡುತ್ತಿದ್ದೇನೆ."

    ಹಾಲಿವುಡ್ ಸಿನಿಮಾ 'ಡಾಕ್ಟರ್ ಸ್ಟ್ರೇಂಜ್ 2' ಕಲೆಕ್ಷನ್ ₹6235 ಕೋಟಿ: ದಾಖಲೆಗಳೇನು?ಹಾಲಿವುಡ್ ಸಿನಿಮಾ 'ಡಾಕ್ಟರ್ ಸ್ಟ್ರೇಂಜ್ 2' ಕಲೆಕ್ಷನ್ ₹6235 ಕೋಟಿ: ದಾಖಲೆಗಳೇನು?

    ನಟನೆ, ಸಂಗೀತ ಯಾಕೆ ಬೇಡ ಅಂತ ಅನಿಸಿತು?

    ನಟನೆ, ಸಂಗೀತ ಯಾಕೆ ಬೇಡ ಅಂತ ಅನಿಸಿತು?

    "ನಾನು ಮಹೇಶ್ ಬಾಬು ಅವರ 'ಅರ್ಜುನ್' ಅನ್ನೋ ತೆಲುಗು ಸಿನಿಮಾ ನೋಡಿದ್ದೆ. ಅದರಲ್ಲಿ ಮೀನಾಕ್ಷಿ ದೇವಸ್ಥಾನದ ಸೆಟ್ ಹಾಕಿದ್ದರು. ಅದರ ಮೇಕಿಂಗ್ ಅನ್ನು ಟಿವಿಯಲ್ಲಿ ತೋರಿಸುತ್ತಿದ್ದರು. ಅದನ್ನು ನೋಡಿ ನಾನು ಸೆಟ್ ಡಿಸೈನರ್ ಆಗ್ಬೇಕು ಅಂತ ನಿರ್ಧಾರ ಮಾಡಿದೆ. ಬಳಿಕ ಹಾಲಿವುಡ್‌ನ ನೇತನ್ ಕ್ರಾಲಿ ಡಿಸೈನ್ ಮಾಡಿದ ಬ್ಯಾಟ್ ಮ್ಯಾನ್ ಸಿರೀಸ್ ಸಿನಿಮಾ ನೋಡಿ ಸೆಟ್ ಡಿಸೈನರ್ ಮಾಡಲೇಬೇಕು ಅಂತ ನಿರ್ಧರಿಸಿದೆ."

    ನಿಮ್ಮ ಹಾಲಿವುಡ್‌ ಪ್ರಾಜೆಕ್ಟ್ ಬಗ್ಗೆ ಹೇಳಿ?

    ನಿಮ್ಮ ಹಾಲಿವುಡ್‌ ಪ್ರಾಜೆಕ್ಟ್ ಬಗ್ಗೆ ಹೇಳಿ?

    " ಪ್ರೊಡಕ್ಷನ್ ಡಿಸೈನ್‌ನಲ್ಲಿ ಎರಡು ವರ್ಷ ಮಾಸ್ಟರ್ ಮುಗಿದ 18 ತಿಂಗಳ ಬಳಿಕ ಆರ್ಟ್ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡಿದೆ. HBOದಲ್ಲಿ ಪ್ರಸಾರವಾಗುತ್ತಿದ್ದ ಸೈನ್ಸ್ ಫಿಕ್ಷನ್ 'ವೆಸ್ಟ್ ವುಡ್‌'ನಲ್ಲಿ ಕೆಲಸ ಮಾಡಿದ್ದೇನೆ. ಯುನಿವರ್ಸಲ್ ಅವರ 'ದಿ ಗುಡ್ ಪ್ಲೇಸ್' ಆರ್ಟ್ ಡಿಪಾರ್ಟ್‌ಮೆಂಟ್ ಅಸಿಸ್ಟೆಂಟ್ ಆಗಿ ಮಾಡಿದ್ದೇನೆ. ನೆಟ್‌ಫ್ಲಿಕ್ಸ್ ನಿರ್ಮಿಸಿದ್ದ ವೆಬ್ ಸಿರೀಸ್ ' ದಿ ವುಮನ್ ಇನ್ ದಿ ಹೌಸ್ ಎಕ್ರಾಸ್ ದಿ ಸ್ಟ್ರೀಟ್ ಫ್ರಮ್ ದಿ ಗರ್ಲ್ ಇನ್ ದಿ ವಿಂಡೊ' (The Woman in the house across the street from the girl in the window,) ದಲ್ಲಿ ಮೊದಲ ಬಾರಿ ಸ್ವತಂತ್ರವಾಗಿ ಸೆಟ್ ಡಿಸೈನರ್ ಆಗಿ ಕೆಲಸ ಮಾಡಿದ್ದೇನೆ."

    ಕಾನ್ ಚಿತ್ರೋತ್ಸವ: ಆರಂಭ ಯಾವಾಗ? ನೋಡುವುದು ಎಲ್ಲಿ? ಭಾಗವಹಿಸುವವರು ಯಾರು? ಇಲ್ಲಿದೆ ಮಾಹಿತಿಕಾನ್ ಚಿತ್ರೋತ್ಸವ: ಆರಂಭ ಯಾವಾಗ? ನೋಡುವುದು ಎಲ್ಲಿ? ಭಾಗವಹಿಸುವವರು ಯಾರು? ಇಲ್ಲಿದೆ ಮಾಹಿತಿ

    'ಕೆಜಿಎಫ್ 2' ಬಗ್ಗೆ ಏನಂತಿರಾ?

    'ಕೆಜಿಎಫ್ 2' ಬಗ್ಗೆ ಏನಂತಿರಾ?

    " ಕೆಜಿಎಫ್ 2 ಅಮೆರಿಕದಲ್ಲಿಯೇ ನೋಡಿದ್ದೇನೆ. ಇಡೀ ಸಿನಿಮಾ ಫುಲ್ ಹೈ ಇರುತ್ತೆ. ಸೆಟ್ ಡಿಸೈನಿಂಗ್‌ನಲ್ಲಿ 'ಏಜಿಂಗ್' ಅಂತ ಕರೆಯುತ್ತೇವೆ. ಅದನ್ನು ಕಾಣಬಹುದು. ಜನರು ಎಷ್ಟು ಕಷ್ಟ ಪಟ್ಟಿದ್ದಾರೆ ಅನ್ನುವುದು ಸೆಟ್ ನೋಡಿದರೆ ಗೊತ್ತಾಗುತ್ತೆ. ಸೆಟ್ ಅನ್ನುವುದನ್ನೇ ಮರೆತು ಹೋಗಿ, ಜನರು ಸಿನಿಮಾ ನೋಡಬೇಕು ಅಂತ ನಮ್ಮ ಪ್ರೊಫೆಸರ್ ಹೇಳುತ್ತಿದ್ದರು. ಹಾಗೇ ಮೈನಿಂಗ್ ಸೆಟ್ ತುಂಬಾ ರಿಯಲಿಸ್ಟಿಕ್ ಅಂತ ಅನಿಸುತ್ತಿದೆ. ಕನ್ನಡ ಸಿನಿಮಾಗಳಲ್ಲೂ ಕೆಲಸ ಮಾಡುವ ಆಸೆಯಿದೆ. ಮುಂದೆ ನೋಡೋಣ."

    ರಾಜಮೌಳಿ ಜೊತೆ ಕೆಲಸ ಮಾಡ್ಬೇಕು!

    ರಾಜಮೌಳಿ ಜೊತೆ ಕೆಲಸ ಮಾಡ್ಬೇಕು!

    "ನನಗೆ ಪೌರಾಣಿಕ ಸಿನಿಮಾ ಅಂದರೆ ಇಷ್ಟ. ಅವರು ಮಹಾಭಾರತ ಸಿನಿಮಾ ಶುರು ಮಾಡಿದರೆ, ಅವರ ಮನೆಯ ಮುಂದೆ ಹೋಗಿ ಕೂರುತ್ತೇನೆ. ಈ ಸಿನಿಮಾದಲ್ಲಿ ನಾನೇ ಸೆಟ್ ಡಿಸೈನ್ ಮಾಡುತ್ತೇನೆ ಅಂತ ಹೇಳುತ್ತೇನೆ."

    ಭಾರತದ ಸಿನಿಮಾಗೆ ಕೆಲಸ ಮಾಡಿದ್ದೀರಾ?

    ಭಾರತದ ಸಿನಿಮಾಗೆ ಕೆಲಸ ಮಾಡಿದ್ದೀರಾ?

    "ನನಗೆ ಭಾರತದಲ್ಲಿ ಯಾವ ಭಾಷೆಯ ಸಿನಿಮಾದವರೊಂದಿಗೂ ಲಿಂಕ್ ಇಲ್ಲ. ಆದರೆ ಯಾವುದೇ ಭಾಷೆಯ ಸಿನಿಮಾದಲ್ಲಿ ಅವಕಾಶ ಸಿಕ್ಕರೂ ಮಾಡುತ್ತೇನೆ. ಸದ್ಯ ವೈಜಯಂತಿ ಮೂವೀಸ್ ಸಂಸ್ಥೆಯ ಸಿನಿಮಾವೊಂದಕ್ಕೆ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದೇನೆ. ಇದು ಅಫಿಷಿಯಲ್ ಆಗಿ ಅಲ್ಲ, ಹಾಲಿವುಡ್‌ನಲ್ಲಿ ನನಗೆ ಗೊತ್ತಿರುವ ಟೆಕ್ನಿಷಿಯನ್ಸ್‌ ಅನ್ನು ಇವರಿಗೆ ಲಿಂಕ್ ಮಾಡಿ ಕೊಡುತ್ತಿದ್ದೇನೆ ಅಷ್ಟೆ."

    ಭಾರತದ ಸಿನಿಮಾ ಬಗ್ಗೆ ಏನಂತಿರಾ?

    ಭಾರತದ ಸಿನಿಮಾ ಬಗ್ಗೆ ಏನಂತಿರಾ?

    " ಭಾರತದಲ್ಲಿ 'ಕೆಜಿಎಫ್ 2', 'ಬಾಹುಬಲಿ' ಅಂತಹ ದೊಡ್ಡ ದೊಡ್ಡ ಸಿನಿಮಾ ಬಂದಾಗ ಹಾಲಿವುಡ್ ತರ ಇದೆ ಅಂತ ಜನರು ಕರೀತಾರೆ. ಹಾಲಿವುಡ್ ಜೊತೆನೇ ಕಂಪೇರ್ ಮಾಡುತ್ತಾರೆ. ಅದು ಬೇಡ. ನಮ್ಮ ಸಿನಿಮಾ. ನಮ್ಮ ಸ್ಟೈಲ್. ಅದನ್ನು ನೋಡ ಖುಷಿ ಪಡಬೇಕು. ಸಿನಿಮಾಗಳಲ್ಲಿ ನನಗೆ ಅವಕಾಶ ಸಿಕ್ಕರೆ, ನಮ್ಮ ನಾಡು-ನುಡಿಗೆ ತಕ್ಕಂತೆ ಸೆಟ್ ಡಿಸೈನ್ ಮಾಡುವ ಆಸೆಯಿದೆ. ಮುಂದೆ ಏನಾದರೂ ಅವಕಾಶ ಸಿಕ್ಕರೆ ಅದನ್ನು ಮಾಡುವ ಆಸೆಯಿದೆ."

    English summary
    Set Designer Harshita Reddy From Bengaluru Is Busy Working with Netflix, Disney HBO. She Is More Interested To work in Indian Movies. Know More.
    Wednesday, June 1, 2022, 12:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X