ಶೇನ್ ವಾರ್ನ್ ಬಯೋಪಿಕ್: ಶೃಂಗಾರ ಸನ್ನಿವೇಶ ಚಿತ್ರೀಕರಣ ವೇಳೆ ಪೆಟ್ಟಾಗಿ ನಟ- ನಟಿ ಆಸ್ಪತ್ರೆಗೆ ದಾಖಲು
ಕ್ರಿಕೆಟ್ ಪ್ರೇಮಿಗಳಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಲೆಜೆಂಡ್ ಶೇನ್ ವಾರ್ನ್ ಪರಿಚಯದ ಅವಶ್ಯಕತೆ ಇಲ್ಲ. ವಿಶ್ವ ಕ್ರಿಕೆಟ್‌ನಲ್ಲಿ 1000 ವಿಕೆಟ್‌ಗಳನ್ನು ಪಡೆದ ಮೊದಲ ಬೌಲರ್, ಐಪಿಎಲ್ ಪ್ರಶಸ್ತಿ ಗೆದ್ದ ಮೊದಲ ನಾಯಕನಾಗಿ ಈ ಸ್ಪಿನ್ ಮಾಂತ್ರಿಕ ಜಾದೂ ಮಾಡಿದ್ದರು. ಹಲವು ವರ್ಷಗಳ ಕಾಲ ಆಸ್ಟ್ರೇಲಿಯಾ ತಂಡದ ಪ್ರಮುಖ ಬೌಲರ್ ಆಗಿ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು.
ಶೇನ್ ವಾರ್ನ್ ಕಳೆದ ವರ್ಷ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಇನ್ನು ಈ ಸ್ಪಿನ್ ಮಾಂತ್ರಿಕನ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ವಿವಾದಗಳಿವೆ. ಅದನ್ನೆಲ್ಲಾ ಮೀರಿ ಕ್ರಿಕೆಟ್ ಅಂಗಳದಲ್ಲಿ ತಮ್ಮ ಕೈಚಳಕದಿಂದ ಚಮತ್ಕಾರ ಮಾಡಿದ್ದರು. ಇನ್ನು ಶೇನ್ ವಾರ್ನ್ ಕ್ರಿಕೆಟ್ ಕ್ಷೇತ್ರದಲ್ಲಿ ಹೆಸರು ಮಾಡಿದ ನಂತರ ಸ್ಕ್ಯಾಂಡಲ್‌ನಲ್ಲಿ ಸಿಕ್ಕಿ ಹಾಕಿಕೊಂಡು ಸುದ್ದಿ ಆಗಿದ್ದರು. ಇನ್ನು ಡ್ರಗ್ ಸೇವನೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡು ಒಂದು ವರ್ಷ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿದ್ದರು. ಇದೇ ಕಾರಣಕ್ಕೆ ಆತನ ಬಯೋಪಿಕ್ ಬಗ್ಗೆ ಭಾರೀ ನಿರೀಕ್ಷೆ ಇದೆ.

ಸದ್ಯ 'ವಾರ್ನಿ' ಹೆಸರಿನಲ್ಲಿ ದಿಗ್ಗಜ ಸ್ಪಿನ್ನರ್ ಬಯೋಪಿಕ್ ನಿರ್ಮಾಣ ಆಗುತ್ತಿದೆ. ಈ ಮಿನಿ ವೆಬ್‌ಸೀರಿಸ್ ಶೂಟಿಂಗ್ ವೇಳೆ ಅವಘಡ ಸಂಭವಿಸಿದೆ. ಸದ್ಯ ಇದೇ ಸುದ್ದಿ ಹಾಲಿವುಡ್ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡ್ತಿದೆ. ಸಾಕಷ್ಟು ಸ್ಕ್ಯಾಂಡಲ್‌ಗಳಿಂದ ಶೇನ್ ವಾರ್ನ್ ಸುದ್ದಿ ಆಗಿದ್ದರು. ಹೋಟೆಲ್ ಕೋಣೆಯಲ್ಲಿ ಶೇನ್ ವಾರ್ನ್ ವಿವಿಧ ಭಂಗಿಗಳಲ್ಲಿ ಶೃಂಗಾರದಲ್ಲಿ ತೊಡಗಿದ್ದ ಫೋಟೊಗಳು ಳಿಕ್ ಆಗಿ ಭಾರೀ ಸದ್ದು ಮಾಡಿತ್ತು.
ವಿವಾದಗಳಿಂದ ಸುದ್ದಿಯಾದ ವಾರ್ನ್
ಸಿಮೋನ್ ಕ್ಯಾಲಹನ್ ಜೊತೆ ಮದುವೆ ಆಗಿ 6 ವರ್ಷ ಜೀವನ ನಡೆಸಿದ ಶೇನ್ ವಾರ್ನ್ ನಂತರ ಡಿವೋರ್ಸ್ ಪಡೆದಿದ್ದರು. ಬೇರೆ ಯುವತಿಯರ ಜೊತೆ ಸೆಕ್ಸ್ ವೇಳೆ ಸಾಕಷ್ಟು ಬಾರಿ ಪತ್ನಿಗೆ ಸಿಕ್ಕಿಬಿದ್ದಿದ್ದಾಗಿಯೂ ವಾರ್ನ್ ಹೇಳಿಕೊಂಡಿದ್ದರು. ನಂತರ ಹಾಲಿವುಡ್ ನಟಿ ಎಲಿಜಬೆತ್ ಹರ್ಲಿತೋ ಎಂಗೇಜ್‌ಮೆಂಟ್ ಮಾಡಿಕೊಂಡ ಶೇನ್ ವಾರ್ನ್, ವರ್ಷದ ನಂತರ ಬ್ರೇಕಪ್ ಮಾಡಿಕೊಂಡಿದ್ದರು. ಇನ್ನು ಡೀಜೆ ಎಮಿಲಿ ಸ್ಕಾಟ್ ಜೊತೆ ಕೂಡ ಅಫೇರ್ ಇತ್ತು. 2019ರಲ್ಲಿ ಲಂಡನ್‌ನಲ್ಲಿ ವೇಶ್ಯೆಯರ ಜೊತೆ ಶೃಂಗಾರ ನಡೆಸುವಾಗ ಸಿಕ್ಕಿಬಿದ್ದಿದ್ದರು.
ಬೆಡ್ ರೂಂ ಸನ್ನಿವೇಶ ಚಿತ್ರೀಕರಣ
'ವಾರ್ನಿ' ಬಯೋಪಿಕ್ ಮಿನಿ ವೆಬ್‌ಸೀರಿಸ್ ಲಿ ಶೇನ್ ವಾರ್ನ್ ವಿವಾದಗಳು, ಶೃಂಗಾರ ವಾಂಛೆ, ರಾಸಲೀಲೆಯನ್ನು ಕೂಡ ಸಾಧ್ಯವಾದಷ್ಟು ನೈಜವಾಗಿ ತೋರಿಸುವ ಸಾಹಸ ಮಾಡಲಾಗುತ್ತಿದೆ. ಈ ಬಯೋಪಿಕ್‌ನಲ್ಲಿ ಹಾಲಿವುಡ್ ನಟ ಅಲೆಕ್ಸ್ ವಿಲಿಯಮ್ಸ್, ಶೇನ್ ವಾರ್ನ್ ಪಾತ್ರದಲ್ಲಿ ನಟಿಸುತ್ತಿದ್ದು ಆತನ ಮಾಜಿ ಪತ್ನಿ ಸಿಮೋನ್ ಪಾತ್ರದಲ್ಲಿ ನಟಿ ಮಾರ್ನೆ ಕೆನ್ನಡಿ ನಟಿಸುತ್ತಿದ್ದಾರೆ. ಸದ್ಯ ಇಬ್ಬರು ಒಂದು ಬೆಡ್‌ರೂ ಸೀನ್ ಶೂಟಿಂಗ್ ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಶೂಟಿಂಗ್ ವೇಳೆ ಕೊಂಚ ಮೈಮರೆತ್ತಿದ್ದಕ್ಕೆ ಆಸ್ಪತ್ರೆ ಸೇರುವಂತಾಗಿದೆ.

ಕೂಡಲೇ ಆಸ್ಪತ್ರೆಗೆ ದಾಖಲು
ಪೆಟ್ಟಾದ ಕೂಡಲೇ ಅಲೆಕ್ಸ್ ಹಾಗೂ ಮಾರ್ನೆ ಕೆನ್ನಡಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಥೆಯ ಭಾಗವಾಗಿ ಶೃಂಗಾರ ಸನ್ನಿವೇಶದಲ್ಲಿ ಇಬ್ಬರು ನಟಿಸುತ್ತಿದ್ದರು. ಅಲೆಕ್ಸ್ ತಲೆಗೆ ಪೆಟ್ಟಾಗಿದ್ದರೆ, ಕೆನ್ನಡಿ ಮಣಿಕಟ್ಟಿಗೆ ಗಾಯವಾಗಿದೆ. ಈ ಬಗ್ಗೆ ಕೆನ್ನಡಿ ಪ್ರತಿಕ್ರಿಯೆ ನೀಡಿದ್ದಾರೆ. "ಶೇಮ್ ಹಾಗೂ ಸಿಮೊನ್ ಯವ್ವನದ ದಿನಗಳಲ್ಲಿನ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿತ್ತು"
ಆ ಸನ್ನಿವೇಶ ಏನು ಅಂದ್ರೆ?
"ನಾವು ಕಾರಿಡಾರ್‌ನಲ್ಲಿ ನಡೆದುಕೊಂಡು ಹೋಗುತ್ತಿರುತ್ತೇವೆ. ಅಲ್ಲಿಂದ ಬೆಡ್‌ರೂಂ ಒಳಕ್ಕೆ ತಳ್ಳಿಕೊಂಡು ಹೋಗಿ ಅಲ್ಲಿರುವ ಬೆಡ್‌ಮೇಲೆ ಬೀಳಬೇಕು ಎನ್ನುವುದು ಆ ಸೀನ್ ಆಗಿತ್ತು. ಆದರೆ ನಾವಿಬ್ಬರು ಬೈಡ್ ಮೇಲೆ ಬೀಳದೇ ನೆಲದ ಮೇಲೆ ಬಿದ್ದುಬಿಟ್ಟೆವು. ಕೂಡಲೇ ನಮ್ಮಿಬ್ಬರನ್ನು ಎಮರ್ಜೆನ್ಸಿ ವಾರ್ಡ್‌ಗೆ ಶಿಫ್ಟ್ ಮಾಡಲಾಯಿತು. ಅಲೆಕ್ಸ್ ತಲೆಗೆ ಬ್ಯಾಂಡೇಜ್ ಸುತ್ತಿದ್ದಾರೆ. ನನ್ನ ಮಣಿಕಟ್ಟಿಗೆ ಪೆಟ್ಟಾಗಿದೆ" ಎಂದು ಕೆನ್ನಡಿ ಹೇಳಿದ್ದಾರೆ.


Click it and Unblock the Notifications











