twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ನಡುವೆಯೂ 5 ದಿನಕ್ಕೆ 1020 ಕೋಟಿ ಕಲೆಕ್ಷನ್ ಮಾಡಿದ ಸಿನಿಮಾ!

    |

    ಕೊರೊನಾ ಕಾಲದಲ್ಲಿ ವಿಶ್ವದೆಲ್ಲೆಡೆ ಮನೊರಂಜನಾ ಕ್ಷೇತ್ರ ಬಹುತೇಕ ಸ್ತಬ್ಧವಾಗಿದೆ. ಹಲವು ರಾಷ್ಟ್ರಗಳಲ್ಲಿ ಚಿತ್ರಮಂದಿರಗಳು ಬಂದ್ ಆಗಿವೆ ಅಥವಾ 50% ನಿಯಮಕ್ಕೊಳಪಟ್ಟು ಕಾರ್ಯನಿರ್ವಹಿಸುತ್ತಿವೆ. ಪೂರ್ಣ ತೆರೆದಿರುವ ಕಡೆಯೂ ಕೊರೊನಾ ಭೀತಿಯಿಂದ ಚಿತ್ರಮಂದಿರಗಳತ್ತ ಜನರು ಬರುತ್ತಿಲ್ಲ.

    ಭಾರತದಲ್ಲಿಯಂತೂ ಸಿನಿಮಾಗಳನ್ನು ತೆರೆಗೆ ತರಲು ನಿರ್ಮಾಪಕರು ಹೆದರುತ್ತಿದ್ದಾರೆ. ಸಿನಿಮಾ ಬಿಡುಗಡೆ ಮಾಡಿದರೆ ಕೊರೊನಾ ಭಯಕ್ಕೆ ಜನರು ಚಿತ್ರಮಂದಿರಕ್ಕೆ ಬರುತ್ತಾರೊ ಇಲ್ಲವೊ ಎಂಬ ಭಯ ನಿರ್ಮಾಪಕರನ್ನು, ನಟರನ್ನು ಕಾಡುತ್ತಿದೆ. ಇಂಥಹಾ ಸಂದರ್ಭದಲ್ಲಿ ಹಾಲಿವುಡ್ ಸಿನಿಮಾವೊಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಭಾರಿ ಮೊತ್ತದ ಹಣಗಳಿಸಿದೆ. ಆ ಮೂಲಕ ಇತರ ಸಿನಿಮಾಗಳ ನಿರ್ಮಾಪಕರಿಗೆ ಭರವಸೆಯನ್ನು ನೀಡಿದೆ.

    ಮಾರ್ವೆಲ್ ಸ್ಟುಡಿಯೋಸ್‌ನ 'ಶಂಘ್ ಆಂಡ್ ದಿ ಲಿಜೆಂಡ್ ಆಫ್ ಟೆನ್ ರಿಂಗ್ಸ್' ಸಿನಿಮಾ ಸೆಪ್ಟೆಂಬರ್ 02 ರಂದು ವಿಶ್ವದ ಹಲವು ದೇಶಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆ ಆದ ಕೇವಲ ಐದೇ ದಿನಕ್ಕೆ 1000 ಕೋಟಿಗೂ ಹೆಚ್ಚು ಹಣವನ್ನು ಗಳಿಸಿದೆ.

    ಸಿನಿಮಾವು ಬಿಡುಗಡೆ ಆದ ವೀಕೆಂಡ್‌ನಲ್ಲಿ ವಿಶ್ವದಾದ್ಯಂತ 960 ಕೋಟಿ ಗಳಿಸಿತ್ತು. ಸೋಮವಾರದ ವೇಳೆಗೆ ಈ ಮೊತ್ತವು 1020 ಕೋಟಿಗೂ ಹೆಚ್ಚಾಗಿದೆ. ಅಮೆರಿಕ ಮತ್ತು ಕೆನಡಾಗಳಲ್ಲಿಯೇ ಈ ಸಿನಿಮಾ 610 ಕೋಟಿಗೂ ಹೆಚ್ಚು ಹಣ ಗಳಿಸಿಕೊಂಡಿದೆ. ಇನ್ನುಳಿದ 410 ಕೋಟಿಯು ವಿಶ್ವದ ಇತರೆ ದೆಶಗಳಲ್ಲಿ ಕಲೆಕ್ಷನ್ ಆಗಿದೆ.

    ಭಾರತದಲ್ಲಿ ಎಷ್ಟು ಕಲೆಕ್ಷನ್?

    ಭಾರತದಲ್ಲಿ ಎಷ್ಟು ಕಲೆಕ್ಷನ್?

    ಭಾರತದಲ್ಲಿ 'ಶಂಘ್-ಚಿ' ಸಿನಿಮಾವು ಸೆಪ್ಟೆಂಬರ್ 2ರಂದೇ ಬಿಡುಗಡೆ ಆಗಿದ್ದು, ಹಲವು ರಾಜ್ಯಗಳಲ್ಲಿ ಚಿತ್ರಮಂದಿರಗಳು ಪೂರ್ಣವಾಗಿ ತೆಗೆದಿಲ್ಲವಾದರೂ ಐದು ದಿನಗಳಲ್ಲಿ 10 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಸಿದೆ. ಚಿತ್ರಮಂದಿರದ ಷೇರು ಬಿಟ್ಟು 10 ಕೋಟಿ ಗಳಿಸಿರುವುದು ಕಡಿಮೆ ಸಾಧನೆಯೇನೂ ಅಲ್ಲ. ಅದರಲ್ಲೂ ಅತಿ ಹೆಚ್ಚು ಮಲ್ಟಿಫ್ಲೆಕ್ಸ್‌ ಪರದೆಗಳನ್ನು ಹೊಂದಿರುವ ಮಹಾರಾಷ್ಟ್ರ ರಾಜ್ಯದಲ್ಲಿ ಚಿತ್ರಮಂದಿರಗಳು ಬಂದ್ ಆಗಿರುವ ಸಂದರ್ಭದಲ್ಲಿಯೂ ಇಷ್ಟು ದೊಡ್ಡ ಮೊತ್ತವನ್ನು ಈ ಸಿನಿಮಾ ಗಳಿಸಿದೆ ಎಂಬುದನ್ನು ಗಮನಿಸಬೇಕು.

    ಯಾವ ದೇಶದಲ್ಲಿ ಎಷ್ಟು ಗಳಿಸಿದೆ ಸಿನಿಮಾ?

    ಯಾವ ದೇಶದಲ್ಲಿ ಎಷ್ಟು ಗಳಿಸಿದೆ ಸಿನಿಮಾ?

    'ಶಂಘ್-ಚಿ' ಸಿನಿಮಾವು ಬ್ರಿಟನ್‌ನಲ್ಲಿ 56 ಕೋಟಿ ಗಳಿಸಿದೆ. ದಕ್ಷಿಣ ಕೊರಿಯಾದಲ್ಲಿ 47 ಕೋಟಿ ಗಳಿಸಿದೆ. ಫ್ರಾನ್ಸ್‌ನಲ್ಲಿ 31 ಕೋಟಿ, ರಷ್ಯಾದಲ್ಲಿ 23 ಕೋಟಿ, ಜಪಾನ್‌ನಲ್ಲಿ 20 ಕೋಟಿ ಗಳಿಸಿದೆ. ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆ ಹೊಂದಿರುವ 41 ದೇಶಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿದೆ. ಎಲ್ಲ ಮಾರುಕಟ್ಟೆಗಳಲ್ಲಿಯೂ ಉತ್ತಮವಾದ ಪ್ರದರ್ಶನವನ್ನೇ ಸಿನಿಮಾ ಕಂಡಿದೆ.

    ಚೀನಾದಲ್ಲಿ ಬಿಡುಗಡೆ ಆಗಿಲ್ಲ 'ಶಂಘ್-ಚಿ'

    ಚೀನಾದಲ್ಲಿ ಬಿಡುಗಡೆ ಆಗಿಲ್ಲ 'ಶಂಘ್-ಚಿ'

    ಸಿನಿಮಾಗಳಿಗೆ ವಿಶ್ವದಲ್ಲೇ ಅತಿ ದೊಡ್ಡ ಮಾರುಕಟ್ಟೆ ಎಂದು ಪರಿಗಣಿಸಲಾಗುವ ಚೀನಾ ದೇಶದಲ್ಲಿ 'ಶಾಂಘ್-ಚಿ' ಇನ್ನೂ ಬಿಡುಗಡೆ ಆಗಿಲ್ಲ ಹಾಗಾಗಿ ಸಿನಿಮಾದ ಲಾಭ ಗಳಿಕೆ ಈಗಿನದಕ್ಕಿಂತಲೂ ದ್ವಿಗುಣ ಆಗುವ ನಿರೀಕ್ಷೆ ಇದೆ. ಮತ್ತೊಂದು ದೊಡ್ಡ ಮಾರುಕಟ್ಟೆ ಎನಿಸಿಕೊಂಡಿರುವ ಆಸ್ಟ್ರೇಲಿಯಾದಲ್ಲಿ ಸಹ ಚಿತ್ರಮಂದಿರಗಳು ಪೂರ್ಣವಾಗಿ ತೆರೆದಿಲ್ಲವಾದ್ದರಿಂದ ಅಲ್ಲಿಯೂ ಸಿನಿಮಾ ಬಿಡುಗಡೆ ಆದ ಬಳಿಕ ದೊಡ್ಡ ಮಟ್ಟದ ಲಾಭವನ್ನು ಮಾರ್ವೆಲ್ ನಿರೀಕ್ಷಿಸುತ್ತಿದೆ.

    ಒಟಿಟಿಯಲ್ಲಿ ಬಿಡುಗಡೆ ಯಾವಾಗ?

    ಒಟಿಟಿಯಲ್ಲಿ ಬಿಡುಗಡೆ ಯಾವಾಗ?

    'ಶಂಘ್-ಚಿ' ಸಿನಿಮಾವನ್ನು ಡೆಸ್ಟಿನ್ ಡ್ಯಾನಿಯಲ್ ಕ್ರಿಟನ್ ನಿರ್ದೇಶನ ಮಾಡಿದ್ದಾರೆ. ಮಾರ್ವೆಲ್ ಸ್ಟುಡಿಯೋಸ್‌ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. ಸಿನಿಮಾದ ನಾಯಕನ ಪಾತ್ರದಲ್ಲಿ ಸಿಮು ಲಿ ನಟಿಸಿದ್ದಾರೆ. ನಾಯಕಿ ಪಾತ್ರದಲ್ಲಿ ಅಕ್ವಾಫೀನಾ ನಟಿಸಿದ್ದಾರೆ. ಸಿನಿಮಾವು ಅಕ್ಟೋಬರ್‌ ತಿಂಗಳಿನಲ್ಲಿ ಡಿಸ್ನಿ ಹಾಟ್‌ ಸ್ಟಾರ್‌ ಪ್ಲಸ್‌ನಲ್ಲಿ ಪ್ರಸಾರವಾಗಲಿದೆ. ಸಿನಿಮಾದಲ್ಲಿನ ವಿಷ್ಯುಲ್ ಎಫೆಕ್ಸ್ಟ್ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಮಾರ್ವೆಲ್‌ ಸಿನಿಮ್ಯಾಟಿಕ್ ಯೂನಿವರ್ಸ್‌ಗೆ ಹೊಸ ಅವೆಂಜರ್ ಸೇರಿಕೊಂಡ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

    English summary
    Marvel movie Shang-Chi and the legend of ten rings collects more than 1000 crore rs in first week all over the world.
    Tuesday, September 7, 2021, 17:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X