ಹಾಲಿವುಡ್ ಚಿತ್ರದಲ್ಲಿ ಮಿಂಚುತ್ತಿರುವ ಮಲೆನಾಡ ಪ್ರತಿಭೆ

ಹಾಲಿವುಡ್ ಚಿತ್ರರಂಗದಲ್ಲಿ ಮಲೆನಾಡಿನ ಪ್ರತಿಭೆ ಪೂರ್ವ ಹೊಸ ಸಂಚಲನ ಮೂಡಿಸುತ್ತಿದ್ದಾರೆ. ಮೂಲತಃ ಶಿವಮೊಗ್ಗದ ಗೋಪಾಳದ ಶಿವಕುಮಾರ್ ಹಾಗೂ ವೀಣಾ ದಂಪತಿಯ ಪುತ್ರರಾಗಿರುವ ಪೂರ್ವ ಪ್ರಸ್ತುತ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ.

ಲಾಸ್ ಎಂಜಲೀಸ್ ನಲ್ಲಿ ಎಂಎಫ್ ಎ ಇನ್ ಮಾಸ್ಟರ್ ಕೋರ್ಸ್ ಮುಗಿಸಿರುವ ಪೂರ್ವ ಇದೀಗ ಹಾಲಿವುಡ್ ನ ಹೊಸ ಚಿತ್ರದ ನಾಯಕ ನಟರಾಗಿ ನಟಿಸುತ್ತಿದ್ದಾರೆ.

ಆರಂಭದ ದಿನಗಳಿಂದಲೂ ಹಾಲಿವುಡ್ ಚಿತ್ರರಂಗದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಪೂರ್ವ, ಲಾಸ್ ಎಂಜಲೀಸ್ ನಲ್ಲಿ ಎಂಎಫ್ ಎ ಕೋರ್ಸ್ ಮಾಡಿ ಈಗಾಗಲೇ‌ ಹಾಲಿವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ.

Shivamogga Based Poorva Hero In Hollywood Movie

ಇದೀಗ 'ದ ಬಿಗ್ ರಾಂಟ್' ಚಿತ್ರದಲ್ಲಿ ಚಿತ್ರದಲ್ಲಿ ನಾಯಕ ನಟರಾಗಿ ನಟಿಸುತ್ತಿರುವುದು ಮಲೆನಾಡಿನ ಹೆಮ್ಮೆ. ಈಗಾಗಲೇ 'ದ ಬಿಗ್ ರಾಂಟ್' ಚಿತ್ರದ ಶೇಕಡಾ 70 ರಷ್ಟು ಚಿತ್ರೀಕರಣ ಮುಗಿದಿದ್ದು ಮುಂದಿನ ತಿಂಗಳು ಲಾಸ್ ಎಂಜಲೀಸ್ ನಲ್ಲಿ ನಡೆಯಲಿರುವ ಫಿಲ್ಮಂ ಫೆಸ್ಟಿವಲ್ ನಲ್ಲಿ ಈ ಚಿತ್ರ ಬಿಡುಗಡೆಗೊಳ್ಳಲಿದೆ.

ಹಾಲಿವುಡ್ ಚಿತ್ರರಂಗದಲ್ಲಿ ನಾಯಕ ನಟನಾಗಿ ಪ್ರತಿಭೆ ಹೊರಹಾಕಿರುವ ಮೊದಲ ಮಲೆನಾಡಿಗ ಎಂಬ ಕೀರ್ತಿಗೂ ಪೂರ್ವ ಪಾತ್ರರಾಗಿದ್ದಾರೆ.

ಈಗಾಗಲೇ ಹಾಲಿವುಡ್ ನ ಹಲವು ಕಿರುಚಿತ್ರಗಳು, ಜಾಹಿರಾತುಗಳಲ್ಲಿ ಅಭಿನಯಿಸಿರುವ ಅನುಭವ ಹೊಂದಿರುವ ಪೂರ್ವ ಇದೀಗ ಹಾಲಿವುಡ್ ಹೀರೋ ಆಗಿ ಅಭಿನಯಿಸುತ್ತಿದ್ದಾರೆ.

More from Filmibeat

English summary
Shivamogga based Poorva playing lead role in hollywood movie The Big Rant. its proud news to malenadu people.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X