For Quick Alerts
  ALLOW NOTIFICATIONS  
  For Daily Alerts

  ಚಂದ್ರಮುಖಿ ಶ್ರಿಯಾ ಸರನ್ ನಡುರಾತ್ರಿ ಹಾಟ್ ಸೀನ್

  By Rajendra
  |

  ತೆಲುಗು, ತಮಿಳು ಚಿತ್ರಗಳಲ್ಲಿ ಮಿಂಚುತ್ತಿರುವ ಶ್ರಿಯಾ ಸರನ್ ಕನ್ನಡದ 'ಚಂದ್ರ' ಚಿತ್ರಕ್ಕೆ ಸಹಿ ಹಾಕಿರುವುದು ಗೊತ್ತೇ ಇದೆ. 'ಮುಖಪುಟ' ಖ್ಯಾತಿಯ ರೂಪಾ ಅಯ್ಯರ್ ನಿರ್ದೇಶಿಸುತ್ತಿರುವ ಈ ಚಿತ್ರದ ನಾಯನ ನಟ ಲವ್ಲಿ ಸ್ಟಾರ್ ಪ್ರೇಮ್. ಈಗಾಗಲೆ ಈ ಚಿತ್ರದ ಫೋಟೋ ಶೂಟ್ ನಡೆದಿದ್ದು ಕನ್ನಡ ಚಿತ್ರೋದ್ಯಮದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ.

  ಆದರೆ ವಿಷಯ ಇದಲ್ಲ. ಶ್ರಿಯಾ ಸರನ್ ಈಗ ಮತ್ತೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 'ಮಿಡ್ ನೈಟ್ಸ್ ಚಿಲ್ಡ್ರನ್' ಎಂಬ ಹೆಸರಿನ ಇಂಗ್ಲಿಷ್ ಚಿತ್ರ. ಈ ಚಿತ್ರದ ಹಾಟ್ ಟ್ರೇಲರ್ ಈಗಾಗಲೆ ಬಿಡುಗಡೆಯಾಗಿದ್ದು ಭಾರಿ ಸುದ್ದಿಯಾಗಿದೆ. ಈ ಚಿತ್ರದಲ್ಲಿನ ಹಾಟ್ ಕಿಸ್ಸಿಂಗ್ ಸೀನ್ ಪಡ್ಡೆಗಳ ನಿದ್ದೆಗೆಡಿಸುತ್ತಿದೆ.

  ಹೇಳಿಕೇಳಿ ಈಕೆ ಚೆಂದುಳ್ಳಿ ಚೆಲುವೆ ಇನ್ನು ಹಾಟ್ ಕಿಸ್ಸಿಂಗ್ ಸೀನ್ ಎಂದರೆ ಕೇಳಬೇಕೆ. ಫೆಬ್ರವರಿ 2011ರಂದು ಸೆಟ್ಟೇರಿದ ಈ ಚಿತ್ರ ಮೇ 2011ಕ್ಕೆ ಕಾರಣಾಂತರಗಳಿಂದ ಚಿತ್ರೀಕರಣ ನಿಲ್ಲಿಸಲಾಯಿತು. ಚಿತ್ರಕತೆಯಲ್ಲಿ ವಿವಾದಾತ್ಮಕ ಅಂಶಗಳಿರುವುದೇ ಇದಕ್ಕೆ ಕಾರಣ.

  ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಬರೆದಿರುವ 'ಮಿಡ್ ನೈಟ್ಸ್ ಚಿಲ್ಡ್ರನ್' ಎಂಬ ಕೃತಿ ಆಧಾರವಾಗಿ ಈ ಚಿತ್ರವನ್ನು ಅದೇ ಹೆಸರಿನಲ್ಲಿ ತೆರೆಗೆ ತರಲಾಗುತ್ತಿದೆ. ಚಿತ್ರದ ನಿರ್ದೇಶಕಿ ದೀಪಾ ಮೆಹ್ತಾ. ತಮ್ಮ ಚಿತ್ರಕ್ಕೆ ಇಸ್ಲಾಂ ಮೂಲಭೂತವಾದಿಗಳ ವಿರೋಧವಿರುವ ಕಾರಣ ಈ ಚಿತ್ರದ ಚಿತ್ರೀಕರಣ ಗುಟ್ಟಾಗಿ ನಡೆಸುತ್ತಿದ್ದಾರೆ.

  ಬಹುಶಃ ಈ ಚಿತ್ರ ಅಕ್ಟೋಬರ್ 2012ಕ್ಕೆ ಬಿಡುಗಡೆಯಾಗಬಹುದು. ಅಂದಹಾಗೆ ರಶ್ದಿ ಅವರ ಈ ಕೃತಿ ಪ್ರತಿಷ್ಠಿತ ಬುಕರ್ ಪ್ರಶಸ್ತಿಗೆ ಪಾತ್ರವಾಗಿದೆ. ಒಟ್ಟು 600 ಪುಟಗಳಷ್ಟು ವಿಸ್ತಾರವಾಗಿರುವ ಮೂಲಕೃತಿ 130 ಪುಟಗಳಷ್ಟು ಚಿತ್ರಕತೆಯಾಗಿದೆ.

  2010ರಲ್ಲೇ ಚಿತ್ರಕ್ಕೆ ಕಲಾವಿದರ ಆಯ್ಕೆ ನಡೆದಿತ್ತು. ಚಿತ್ರದ ಸೀಮಿತ ಬಜೆಟನ್ನು ಗಮನದಲ್ಲಿಟ್ಟುಕೊಂಡು ತಾರೆಗಳನ್ನು ಆಯ್ಕೆ ಮಾಡಲಾಗಿದೆ. ಈ ಚಿತ್ರವನ್ನು ಮೊದಲು ಪಾಕಿಸ್ತಾನದಲ್ಲಿ ಚಿತ್ರೀಕರಿಸಲು ಮುಂದಾಗಿದ್ದರು. ಇದಕ್ಕೆ ಮುಸ್ಲಿಂ ಮೂಲಭೂತವಾದಿಗಳ ತೀವ್ರ ವಿರೋಧ ವ್ಯಕ್ತವಾಯಿತು.

  ಸರಿ ಮುಂಬೈನಲ್ಲಿ ಚಿತ್ರೀಕರಿಸೋಣ ಎಂದರೆ ಹಿಂದೂ ಸಂಪ್ರದಾಯವಾದಿಗಳ ವಿರೋಧ ವ್ಯಕ್ತವಾಯಿತು. ವಿಧಿಯಿಲ್ಲದೆ ಚಿತ್ರದ ನಿರ್ದೇಶಕಿ ಮೆಹ್ತಾ ಶ್ರೀಲಂಕಾದ ಕೊಲಂಬಿಯೋದಲ್ಲಿ ಚಿತ್ರೀಕರಣ ಶುರುಮಾಡಿದರು. ಸದ್ಯಕ್ಕೆ ಚಿತ್ರೀಕರಣ ಯಾವ ಹಂತದಲ್ಲಿದೆ ಎಂಬುದು ಗೊತ್ತಿಲ್ಲ.

  ಚಿತ್ರದಲ್ಲಿ ಶ್ರಿಯಾ ಸರನ್ ಅವರದು ಪಾರ್ವತಿ ಪಾತ್ರ. ಚಿತ್ರದ ನಾಯಕ ನಟನೊಂದಿಗೆ ನೆಲದಲ್ಲಿ ಉರುಳಾಡುವ, ಚುಂಬಿಸುವ ಹಾಟ್ ದೃಶ್ಯಗಳಿವೆ. ಚಿತ್ರದ ಒಂದು ಭಾಗವಾಗಿರುವ ಈ ಸನ್ನಿವೇಶವನ್ನು ಟ್ರೇಲರ್ ನಲ್ಲಿ ಬಿಡುಗಡೆ ಮಾಡಿ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. (ಏಜೆನ್ಸೀಸ್)

  English summary
  Actress Shriya Saran's Hot Kiss Scene in Midnight’s Children, is an upcoming film adaptation of Salman Rushdie's 1981 novel of the same name. Written and directed by Deepa Mehta. It is scheduled to release in late 2012.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X