»   » ಹವಾಯಿ ತೀರದಲ್ಲಿ ಉಕ್ಕಿದ ಸೌಂದರ್ಯ ಚಿಲುಮೆ

ಹವಾಯಿ ತೀರದಲ್ಲಿ ಉಕ್ಕಿದ ಸೌಂದರ್ಯ ಚಿಲುಮೆ

Posted By: ರವಿಕಿಶೋರ್
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಈ ತಾರಾ ಜಗತ್ತೇ ಹೀಗೆ. ಸದಾ ಚಾಲ್ತಿಯಲ್ಲಿರಲು ಏನೋ ಒಂದು ತಂತ್ರ ಪ್ರತಿತಂತ್ರಗಳನ್ನು ಹೆಣೆಯುತ್ತಲೇ ಇರುತ್ತದೆ. ಅಮೆರಿಕನ್ ತಾರೆಗಳಲ್ಲಿ ಈ ತಿಕ್ಕಲು ಸ್ವಲ್ಪ ಜಾಸ್ತಿ ಎಂದೇ ಹೇಳಬೇಕು. ಪ್ರಚಾರಕ್ಕಾಗಿ ನಗ್ನರಾಗಲೂ ಹೇಸುವುದಿಲ್ಲ. ಆ ರೀತಿಯ ತಾರೆಗಳಲ್ಲಿ ಅಮೆರಿಕದ ಗಾಯಕಿ ಮಿಲೆ ಸೈರಸ್ ಸಹ ಒಬ್ಬರು.

  ಅಮೆರಿಕದ ಹಾಟ್ ಗಾಯಕಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಮಿಲೆ ಸೈರಸ್ ಈಗ ಬಲು ಬೇಡಿಕೆಯಲ್ಲಿರುವ ಸ್ಟಾರ್. ಯುವಕರು ಆಕೆಯ ಹಾಡುಗಳನ್ನು, ಸ್ಟೇಜ್ ಶೋಗಳನ್ನು ಮುಗಿಬಿದ್ದು ನೋಡುತ್ತಾರೆ.

  ಯುವ ಜನಾಂಗ ಹುಚ್ಚೆದ್ದು ಕುಣಿಯುವಂತೆ ಮಾಡುವ ಶೋಗಳು, ಕಿಕ್ಕೇರಿಸುವ ಸೌಂದರ್ಯ ಪ್ರದರ್ಶನ ಆಕೆಯ ಶೋಗಳ ವಿಶೇಷಗಳು. ಇನ್ನೂ 22ರ ಹರೆಯದ ಈ ಬೆಡಗಿಗೆ ಪ್ರತಿಭೆಯ ಜೊತೆಗೆ ಸ್ವಲ್ಪ ಹುಚ್ಚಾಟವೂ ಇದೆ.

  ಮಿಲೆ ಸೈರಸ್ ಪ್ರಚಾರ ಪ್ರಿಯೆ

  ಬಾಯ್ ಫ್ರೆಂಡ್ಸ್ ಜೊತೆ ಹುಚ್ಚಾಪಟ್ಟೆ ಎಂಜಾಯ್ ಮಾಡುವ ಶೋಕಿಯೂ ಒಂದು. ತಾನು ಎಂಜಾಯ್ ಮಾಡಿದ ಫೋಟೋ ಹಾಗೂ ವಿಡಿಯೋಗಳನ್ನು ಮಾಧ್ಯಮಗಳ ಗಮನಕ್ಕೆ ತಂದು ಬೇಕಾಬಿಟ್ಟಿ ಪ್ರಚಾರ ಪಡೆಯುವ ಕಲೆ ಮಿಲೆಗೆ ಕರಗತ.

  ಸಮುದ್ರತೀರದಲ್ಲಿ ನಗ್ನವಾಗಿ ಜಲಕ್ರೀಡೆ

  ಇತ್ತೀಚೆಗೆ ತನ್ನ ಹೊಸ ಬಾಯ್ ಫ್ರೆಂಡ್ ಪಾಟ್ರಿಕ್ ಷ್ವಾರ್ಜ್ ನೆಗ್ಗರ್ ಜೊತೆ ಹವಾಯಿ ಸಮುದ್ರತೀರದಲ್ಲಿ ನಗ್ನವಾಗಿ ಜಲಕ್ರೀಡೆ ಆಡಿ ಮಿಂದು ಬಂದಿದ್ದಾರೆ. ಈ ದೃಶ್ಯಗಳು ಕ್ಯಾಮೆರಾ ಕಣ್ಣಲ್ಲಿ ಬಂಧಿಯಾಗಿವೆ. ಸ್ಲೈಡ್ ನಲ್ಲಿ ಮಿಲೆ ಅವರ ಜಲಕ್ರೀಡೆ.

  ಗುಟ್ಟಾಗಿ ಉಳಿದಿಲ್ಲ ಮಿಲೆ ಪ್ರೇಮಕಥೆ

  ಕೆಲ ಸಮಯದಿಂದ ಮಿಲೆ ತನ್ನ ಹೊಸ ಬಾಯ್ ಫ್ರೆಂಡ್ ಷ್ವಾರ್ಜ್ ನೆಗ್ಗರೆ ಜೊತೆ ಪ್ರೇಮಗೀತೆ ಹಾಡುತ್ತಿದ್ದಾರೆ. ಈ ನಡುವೆ ಇವರಿಬ್ಬರ ಪ್ರೇಮ ವ್ಯವಹಾರ ಎಲ್ಲರ ಕಣ್ಣಿಗೂ ಬಿದ್ದಿದೆ. ಎಲ್ಲೆಂದರಲ್ಲಿ ಬಹಿರಂಗವಾಗಿಯೇ ಇಬ್ಬರೂ ಅಪ್ಪಿ ಮುದ್ದಾಡುತ್ತಿರುವುದು ಆಗಾಗ ಸುದ್ದಿಯಾಗುತ್ತಲೇ ಇದೆ.

  ಮಿಲೆ ತಾಯಿಯಾಗುತ್ತಿದ್ದಾರೆ ಎಂಬ ಸುದ್ದಿಯೂ ಇದೆ

  ಇವರಿಬ್ಬರಿಗೆ ಸಂಬಂಧಿಸಿದ ಇನ್ನೊಂದು ಸ್ಫೋಟಕ ಸುದ್ದಿಯೂ ಇದೆ. ಇವರಿಬ್ಬರ ಪ್ರೀತಿ ಪ್ರೇಮ ಪ್ರಣಯ ಸ್ವಲ್ಪ ಕಂಟ್ರೋಲ್ ತಪ್ಪಿ ಮಿಲೆ ತಾಯಿಯಾಗುತ್ತಿದ್ದಾರೆ ಎಂಬ ಸುದ್ದಿಯೂ ತೇಲಿ ಬಂದಿತ್ತು.

  ಹಾಲಿವುಡ್ ನ ಅತ್ಯಂತ ದರಿತ್ರ ಸೆಲೆಬ್ರಿಟಿ

  ಮಿಲೆ ಮುಕುಟಕ್ಕೆ ಇನ್ನೊಂದು (ಅ)ಗೌರವವೂ ಮುಡಿಗೇರಿದೆ. ಅದೇನೆಂದರೆ ಹಾಲಿವುಡ್ ನ ಅತ್ಯಂತ ದರಿತ್ರ ಸೆಲೆಬ್ರಿಟಿ ಎಂಬ ಪಟ್ಟ. ಹುಚ್ಚುಚ್ಚಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದು, ಕಂಠಪೂರ್ತಿ ಕುಡಿಯುವುದು ಇವೆಲ್ಲವೂ ಮಿಲೆಯ ಹುಚ್ಚಾಟಗಳ ಕೆಲವು ಉದಾಹರಣೆಗಳು.

  English summary
  By now we all know that Miley Cyrus doesn't like to be covered. She leaves no opportunity to drop those clothes off. Her love to 'feel free', made her go skinny dipping with her beau Patrick Schwarzenegger at a beach in Hawaii recently. She was spotted enjoying topless with Patrick.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more