ಸರಣಿ ಲೈಂಗಿಕ ಅಪರಾಧ: ಗಾಯಕ ಕೆಲ್ಲಿಗೆ 30 ವರ್ಷ ಜೈಲು

ಸರಣಿ ಲೈಂಗಿಕ ಅಪರಾಧ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಹಾಲಿವುಡ್ ಗಾಯಕ ಆರ್.ಕೆಲ್ಲಿಗೆ ಮೂವತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಜೊತೆಗೆ ಒಂದು ಲಕ್ಷ ಡಾಲರ್‌ ಜುಲ್ಮಾನೆಯನ್ನೂ ವಿಧಿಸಿದೆ.

ಸಿಂಗರ್ ಆರ್ ಕೆಲ್ಲಿ ವಿರುದ್ಧ ಒಂಬತ್ತು ಆರೋಪಗಳು ಸಾಬೀತಾಗಿವೆ. ತನ್ನ ಅಭಿಮಾನಿಗಳು ಮಾತ್ರವೆ ಅಲ್ಲದೆ, ಸಣ್ಣ ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಗಾಯಕ ಆರ್.ಕೆಲ್ಲಿ.

ಆರ್.ಕೆಲ್ಲಿ ವಿರುದ್ಧ ಕಳೆದ ವರ್ಷವೇ ನ್ಯೂಯಾರ್ಕ್‌ನ ನಡೆದ ವಿಚಾರಣೆಯಲ್ಲಿ ಆರೋಪ ಸಾಬೀತಾಗಿತ್ತು. ಇದೀಗ ಬ್ರೂಕ್‌ಲಿನ್ ನ್ಯಾಯಾಲಯದಲ್ಲಿಯೂ ಕೆಲ್ಲಿ ವಿರುದ್ಧ ಆರೋಪ ಸಾಬೀತಾಗಿದ್ದು ಶಿಕ್ಷೆ ಪ್ರಕಟಿಸಲಾಗಿದೆ.

Hollywood Singer R Kelly Sentenced 30 Year Of Jail

ಹಲವು ವರ್ಷಗಳ ಕಾಲ ಯುವತಿಯರನ್ನು ಲೈಂಗಿಕತೆಗಾಗಿ ಉದ್ಯೋಗಕ್ಕೆ ಸೇರಿಸಿಕೊಳ್ಳುತ್ತಿದ್ದ ಆರೋಪ ಸೇರಿದಂತೆ, ಸಣ್ಣ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪವೂ ಸೇರಿದಂತೆ ಕೆಲ್ಲಿ ಮೇಲಿದ್ದ ಒಂಬತ್ತು ಆರೋಪಗಳು ಸಾಬೀತಾಗಿವೆ. ಕೆಲ್ಲಿ ಪರ ವಕೀಲರು ಶಿಕ್ಷೆಯನ್ನು ಕಡಿಮೆಗೊಳಿಸಿ 17 ವರ್ಷಕ್ಕೆ ಸೀಮಿತ ಮಾಡುವಂತೆ ಕೇಳಿ ಕೊಂಡರಾದರೂ ಅದು ಫಲಿಸಿಲ್ಲ.

11 ಮಂದಿ ಸಂತ್ರಸ್ತೆಯರು ಸೇರಿದಂತೆ 45 ಮಂದಿ ಸಾಕ್ಷಿಗಳು ಕೆಲ್ಲಿ ವಿರುದ್ಧ ಸಾಕ್ಷ್ಯ ಹೇಳಿದ್ದಾರೆ. ಆರೋಪಗಳಿಗೆ ಸಂಬಂಧಿಸಿದ ಕೆಲವು ವಿಡಿಯೋ ಹಾಗೂ ಇನ್ನಿತರ ಸಾಕ್ಷ್ಯಗಳನ್ನು ನ್ಯಾಯಾಲವು ಪರಿಶೀಲನೆ ಮಾಡಿದೆ. ಆರ್.ಕೆಲ್ಲಿ ಹಲವು ವರ್ಷಗಳಿಂದ ಈ ಅಪರಾಧಗಳನ್ನು ಎಸಗುತ್ತಿದ್ದ ಎಂಬುದು ಸಾಬೀತಾಗಿದೆ.

ಆರ್.ಕೆಲ್ಲಿ ವಿರುದ್ಧ ಮಾಡಲಾದ ಆರೋಪಗಳಲ್ಲಿ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ, ಮಕ್ಕಳನ್ನು ಬಳಸಿ ಪೋರ್ನೋಗ್ರಫಿ, ಮಾದಕ ವಸ್ತು ಸೇವನೆ, ಹಲ್ಲೆ ಯಂಥಹಾ ಗಂಭೀರ ಆರೋಪಗಳಿದ್ದವು.

ಯುವತಿಯರನ್ನು ತನಗಾಗಿ ಕೆಲಸ ಮಾಡುವಂತೆ ಆಹ್ವಾನಿಸುತ್ತಿದ್ದ, ಇನ್ನು ಕೆಲವರನ್ನು ಸಂಗೀತ ಲೋಕದ ಸ್ಟಾರ್ ಮಾಡುವದಾಗಿ ಆಸೆ ಹುಟ್ಟಿಸಿ ಹತ್ತಿರಕ್ಕೆ ಬರಮಾಡಿಕೊಂಡು ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಆತನ ಮೊದಲ ಪತ್ನಿ ಆಲಿಯಾ ಸಹ ಕೆಲ್ಲಿ ವಿರುದ್ಧ ದೂರು ನೀಡಿದ್ದರು. ಆಲಿಯಾ ಇನ್ನೂ ಹದಿನೈದು ವರ್ಷ ವಯಸ್ಸಿನವರಾಗಿದ್ದಾಗಲೇ ಆಕೆಯನ್ನು ಲೈಂಗಿಕತೆಗೆ ಬಳಸಿಕೊಂಡಿದ್ದಲ್ಲದೆ, ಅಪ್ರಾಪ್ತ ವಯಸ್ಸಿನ ಆಕೆಯನ್ನು ನಿಯಮಬಾಹಿರವಾಗಿ ಮದುವೆ ಸಹ ಆಗಿದ್ದರು ಕೆಲ್ಲಿ.

More from Filmibeat

English summary
Hollywood singer R Kelly sentenced 30 year of Jail. He sentenced guilty in several sexual crimes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X