Just In
- 25 min ago
ಡಿ ಬಾಸ್ ಜೊತೆ ಶಿವರಾಜ್ ಕೆ ಆರ್ ಪೇಟೆ ಪುತ್ರನ ಹುಟ್ಟುಹಬ್ಬ ಆಚರಣೆ: ವಿಶೇಷ ಗಿಫ್ಟ್ ನೀಡಿದ ದರ್ಶನ್
- 1 hr ago
'ಇನ್ಸ್ ಪೆಕ್ಟರ್ ವಿಕ್ರಂ' ರಿಲೀಸ್ ಡೇಟ್ ಫಿಕ್ಸ್: ದರ್ಶನ್ ಪಾತ್ರದ ಬಗ್ಗೆ ಪ್ರಜ್ವಲ್ ಹೇಳಿದ್ದೇನು?
- 1 hr ago
ನಿರ್ಮಾಣವಾಗುತ್ತಿದೆ 22 ವರ್ಷ ಹಿಂದಿನ ಸಿನಿಮಾದ ಮುಂದಿನ ಭಾಗ!
- 2 hrs ago
'ರಿಯಲ್ ಹೀರೋ' ಸೋನು ಸೂದ್ ಹೆಸರಿನಲ್ಲಿ ಆಂಬ್ಯುಲೆನ್ಸ್ ಸೇವೆ ಪ್ರಾರಂಭಿಸಿದ ಈಜುಗಾರ
Don't Miss!
- Education
Karnataka Bank PO Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Lifestyle
ಮಹಿಳೆಯರ ಪಾಲಿನ ಸಂಜೀವಿನಿ ಈ ಅಶ್ವಗಂಧ...!
- Automobiles
ಲ್ಯಾಂಬೊರ್ಗಿನಿ ಕಾರಿನ ಬಣ್ಣದಲ್ಲಿ ಮಾಡಿಫೈಗೊಂಡ ಹ್ಯುಂಡೈ ಎಲಾಂಟ್ರಾ
- News
2020ರಲ್ಲಿ 98 ಪೇಟೆಂಟ್ ಪಡೆದುಕೊಂಡ ಟಾಟಾ ಮೋಟಾರ್ಸ್
- Finance
ಕೇಂದ್ರ ಬಜೆಟ್ 2021: ಕೊರೊನಾ ಪೀಡಿತ ಆರ್ಥಿಕತೆ ಚೇತರಿಕೆಗೆ ಏನು ನಿರೀಕ್ಷಿಸಬಹುದು?
- Sports
ಬಾಂಗ್ಲಾ vs ವಿಂಡೀಸ್: ಒಂದೇ ಪಂದ್ಯದಲ್ಲಿ ವಿಂಡೀಸ್ ತಂಡಕ್ಕೆ 6 ಆಟಗಾರರು ಪದಾರ್ಪಣೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ನೀಲಿ ಚಿತ್ರ'ಗಳಿಗೆ ಹಿನ್ನೆಲೆ ಧ್ವನಿ ನೀಡಲು ಗಾಯಕನಿಗೆ 7 ಕೋಟಿ ಆಫರ್!
ಪಾರ್ನ್ ಸಿನಿಮಾಕ್ಕೆ ಕಾಮೆಂಟೆರಿ ಕೊಡಲು ಗಾಯಕನೊಬ್ಬನಿಗೆ 7 ಕೋಟಿ ರೂ ಗೂ ಹೆಚ್ಚು ಸಂಭಾವನೆಯ ಆಫರ್ ಅನ್ನು ನೀಡಲಾಗಿದೆ.
ಖ್ಯಾತ ರ್ಯಾಪರ್ ಸ್ನೂಪ್ ಡಾಗ್ ಈ ಆಫರ್ ಪಡೆದಿರುವ ವ್ಯಕ್ತಿ. ಆಫರ್ ನೀಡಿರುವುದು ಐಮ್‌ಲೈವ್ ಎಂಬ ನೀಲಿ ಚಿತ್ರ ತಯಾರಿಸುವ ಸಂಸ್ಥೆ.
ನೀಲಿ ಚಿತ್ರಕ್ಕೆ ಧ್ವನಿಯ ಅವಶ್ಯಕತೆ ಏನಿದೆ ಎಂದುಕೊಳ್ಳಬೇಡಿ. ಐಮ್‌ಲೈವ್ ಸಂಸ್ಥೆಯು ಅಂದರಿಗಾಗಿ ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದು, ಕಣ್ಣುಕಾಣದವರಿಗೆ ತೆರೆಯ ಮೇಲೆ ಏನು ನಡೆಯುತ್ತಿದೆ ಎಂಬುದನ್ನು ಭಾವನೆ ಸಹಿತ ವಿವರಿಸಿ ಹೇಳಲಾಗುತ್ತದೆ. ಈಗಾಗಲೇ ಈ ರೀತಿಯ ವಿಡಿಯೋಗಳು ಅಂತರ್ಜಾಲದಲ್ಲಿ ಸಾಕಷ್ಟಿವೆ.
ಇದೀಗ ಗಾಯಕ ಸ್ನೂಪ್ ಡಾಗ್‌ಗೆ ಆಫರ್ ಬಂದಿದ್ದು, ನೀಲಿ ಚಿತ್ರದ ದೃಶ್ಯ ವೀಕ್ಷಕ ವಿವರಣೆಯನ್ನು ಅವರು ನೀಡಬೇಕಿದೆ. ಅದೂ ಭಾವನೆಗಳ ಸಹಿತ!
ಕೆಲವು ದಿನಗಳ ಹಿಂದಷ್ಟೆ ಸ್ನೂಪ್ ಡಾಗ್ ಬಾಕ್ಸಿಂಗ್ ಪಂದ್ಯವೊಂದರ ವೀಕ್ಷಕ ವಿವರಣೆ ನೀಡಿದ್ದರು. ಸ್ನೂಪ್ ಡಾಗ್ ನೀಡಿದ್ದ ವೀಕ್ಷಕ ವಿವರಣೆ ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಅದರ ನಂತರ ಸ್ನೂಪ್ ಡಾಗ್ ತಮ್ಮನ್ನು ವೀಕ್ಷಕ ವಿವರಣೆಗಾರರನ್ನಾಗಿ ಕರೆದುಕೊಳ್ಳಿ ಎಂದು ಕೆಲವು ಕ್ರೀಡಾ ಚಾನೆಲ್‌ಗಳಿಗೆ ತಮ್ಮ ಇನ್‌ಸ್ಟಾಗ್ರಾಂ ಮೂಲಕ ಮನವಿ ಮಾಡಿದ್ದರು.
ಇದನ್ನು ಗಮನಿಸಿದ ಐಮ್‌ಲೈವ್ ಸಂಸ್ಥೆಯು ತಮ್ಮ ನೀಲಿ ಚಿತ್ರಗಳಿಗೆ ವೀಕ್ಷಕ ವಿವರಣೆ ನೀಡುವಂತೆ ಬಹಿರಂಗ ಆಫರ್ ಅನ್ನು ನೀಡಿದೆ. ಸ್ನೂಪ್ ಡಾಗ್, ಆ ಆಫರ್ ಅನ್ನು ತೆಗೆದುಕೊಳ್ಳುತ್ತಾರಾ ಅಥವಾ ನಿರಾಕರಿಸುತ್ತಾರಾ ನೋಡಬೇಕಿದೆ.