For Quick Alerts
  ALLOW NOTIFICATIONS  
  For Daily Alerts

  ಕೊಕೇನ್ ಗಾಗಿ ತನ್ನ ದೇಹವನ್ನೇ ಮಾರಿಕೊಂಡ ಕಿರುತೆರೆ ನಟಿ

  By Suneetha
  |

  ಮಾದಕ ವಸ್ತುಗಳನ್ನು ಸೇವಿಸುವ ಕೆಟ್ಟ ಚಟಕ್ಕೆ ಬಿದ್ದು ಅದೆಷ್ಟೋ ಮಂದಿ ತಮ್ಮ ಅಮೂಲ್ಯವಾದ ಜೀವನವನ್ನೇ ಹಾಳು ಮಾಡಿಕೊಂಡಿರುವ ಹಲವಾರು ಪ್ರಸಂಗಗಳು ನಡೆದಿವೆ, ನಡೆಯತ್ತಲೇ ಇದೆ.

  ಮಾತ್ರವಲ್ಲದೇ ಒಮ್ಮೆ ಮಾದಕ ವಸ್ತುಗಳಿಗೆ ಶರಣಾದವರು ಮತ್ತೆ ಮತ್ತೆ ಅದನ್ನು ಪಡೆಯಲು ಯಾವ ಮಟ್ಟದ ಕೆಲಸಕ್ಕೂ ಇಳಿಯುವ ಮನಸ್ಥಿತಿಯಲ್ಲಿರುತ್ತಾರೆ ಅನ್ನೋ ವಿಚಾರ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ.

  ಇದೀಗ ಈ ವಿಚಾರಕ್ಕೆ ಪೀಠಿಕೆ ಹಾಕಲು ಕಾರಣ ಏನಪ್ಪಾ ಅಂದ್ರೆ ,ಜನಪ್ರಿಯ ಟಿವಿ ಸಿರೀಸ್ ಫ್ಯಾಂಟಸಿ ಡ್ರಾಮಾ 'ಗೇಮ್ ಆಫ್ ಥ್ರೋನ್ಸ್' ನ ಖ್ಯಾತ ನಟಿ ಜೋಸೆಫಿನ್ ಗಿಲ್ಲನ್. ಹೌದು ಈ ನಟಿ ಕೂಡ ತಮ್ಮ ಗತಕಾಲದಲ್ಲಿ ಮಾದಕ ವಸ್ತು ಸೇವಿಸುವ ಕೆಟ್ಟ ಚಟವನ್ನು ಅಂಟಿಸಿಕೊಂಡಿದ್ದರಂತೆ.

  ಜನಪ್ರಿಯ ಟಿವಿ ಸಿರೀಸ್ 'Game Of Thrones'ನ ನಟಿ ಜೋಸೆಫಿನ್ ಗಿಲ್ಲನ್ ಅವರು ಒಂದು ಕಾಲದಲ್ಲಿ ಕೊಕೇನ್ ಎಂಬ ಮಾದಕ ವಸ್ತುವನ್ನು ವಿಪರೀತ ಸೇವನೆ ಮಾಡುತ್ತಿದ್ದರಂತೆ. ಈ ದುರಭ್ಯಾಸ ಅವರನ್ನು ಎಲ್ಲಿಯವರೆಗೆ ಕರೆದೊಯ್ಯಿತೆಂದರೆ ಅವರ ದೇಹವನ್ನು ಮಾರಿಕೊಳ್ಳುವ ಹಂತಕ್ಕೆ ತಲುಪಿಸಿತ್ತು.

  ಕೊಕೇನ್ ಇಲ್ಲಾಂದ್ರೆ ಜೀವನವೇ ದುಸ್ತರ ಅಂತ ಅನಿಸಿದ ದಿನಗಳು ಇತ್ತು ಅದಕ್ಕಾಗಿ ಅವರು ವಾರದಲ್ಲಿ 3-4 ಬಾರಿ ತಮ್ಮ ದೇಹವನ್ನು ಮಾರಿಕೊಂಡು ಸಂಪಾದನೆ ಮಾಡಿದ ಹಣವನ್ನು ಕೊಕೇನ್ ಗಾಗಿ ಖರ್ಚು ಮಾಡುತ್ತಿದ್ದರಂತೆ. ಹೀಗಂತ ಖುದ್ದು ಜೋಸೇಫಿನ್ ಗಿಲ್ಲನ್ ಅವರು ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳುತ್ತಾ ಗತಕಾಲದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

  ಇದೀಗ ಹಾಲಿವುಡ್ ಕಿರುತೆರೆ ನಟಿ ಕೊಕೇನ್ ನಿಂದ ದೂರವಾಗಿದ್ದು, ಟಿವಿ ಸಿರೀಸ್ 'Game Of Thrones' ಅವರಿಗೆ ಹೊಸ ಜೀವನನ್ನು ಕಲ್ಪಿಸಿದೆ ಎಂದು ಸಂದರ್ಶನದಲ್ಲಿ ಮನಬಿಚ್ಚಿ ಹೇಳಿಕೊಂಡಿದ್ದಾರೆ.

  English summary
  Actress Josephine Gillan, who plays prostitute Marei in the popular fantasy drama series “Game of Thrones”, says she was earlier addicted to cocaine and for buying it she used to sell her body “three or four times a week".

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X