twitter
    For Quick Alerts
    ALLOW NOTIFICATIONS  
    For Daily Alerts

    ವೈರಸ್‌ಗಳ ಕುರಿತು ನೀವು ನೋಡಲೇಬೇಕಾದ 20 ಕುತೂಹಲಕಾರಿ ಸಿನಿಮಾಗಳಿವು...

    |

    ಕೊರೊನಾ ವೈರಸ್ ಭೀತಿಯಿಂದ ಹೆಚ್ಚಿನ ಜನರು ಮನೆಯೊಳಗೇ ಉಳಿದುಕೊಳ್ಳುವಂತಾಗಿದೆ. ಅನೇಕ ಕಂಪೆನಿಗಳು 'ವರ್ಕ್ ಫ್ರಂ ಹೋಮ್' ಅವಕಾಶ ಕಲ್ಪಿಸಿವೆ. ಮನೆಯೊಳಗೇ ಸುರಕ್ಷಿತವಾಗಿರಲು ಅನೇಕರು ಹೊರಗೆ ಬರುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ಅವರಿಗೆ ಮನರಂಜನೆ ಸಿಗುತ್ತಿಲ್ಲ. ಹೀಗಾಗಿ ಮನೆಯಲ್ಲಿಯೇ ಕುಳಿತು ವಿಭಿನ್ನ ಸಿನಿಮಾಗಳನ್ನು ನೋಡಲು ಬಯಸುತ್ತಿದ್ದಾರೆ. ಈಗ ಹೇಗೂ ಕೊರೊನಾ ವೈರಸ್‌ನದ್ದೇ ಸುದ್ದಿ. ಅದರ ಕುರಿತಾದ ಕುತೂಹಲವೂ ಜಾಸ್ತಿ ಆಗಿದೆ.

    Recommended Video

    ಸೀಕ್ರೆಟ್ ರಿವೀಲ್ ಮಾಡಿದ ದೀಪಿಕಾ ಪಡುಕೋಣೆ | DEEPIKA PADUKONE | NITHYA MENEN | FILMIBEAT KANNADA

    ಮನೆಯಲ್ಲಿ ಬಿಡುವಿನ ಅವಧಿಯಲ್ಲಿ ವೀಕ್ಷಣೆಗೆ ಯೋಗ್ಯವಾದ ವೈರಸ್ ಸಂಬಂಧಿತ ಕಥೆಗಳುಳ್ಳ ಅನೇಕ ಸಿನಿಮಾಗಳಿವೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮುಂತಾದ ಪ್ರಸಾರ ಮಾಧ್ಯಮಗಳಲ್ಲಿ ಇವು ಲಭ್ಯ. ಸಸ್ಪೆನ್ಸ್, ಥ್ರಿಲ್ಲರ್, ಕೌತುಕ, ರಂಜನೆಯ ಸಿನಿಮಾಗಳನ್ನು ಇಷ್ಟಪಡುವವರಿಗೆ ಸೂಕ್ತವಾದ ಕೆಲವು ವಿದೇಶಿ ಸಿನಿಮಾಗಳ ಪಟ್ಟಿ ಇಲ್ಲಿದೆ.

    ದಿ ಸೆವೆಂತ್ ಸೀಲ್, ಐ ಆಮ್ ಲೆಜೆಂಡ್

    ದಿ ಸೆವೆಂತ್ ಸೀಲ್, ಐ ಆಮ್ ಲೆಜೆಂಡ್

    'ದಿ ಸೆವೆಂತ್ ಸೀಲ್'- 1957ರ ಈ ಸಿನಿಮಾ ನಿರ್ದೇಶಕ ಇಂಗ್ಮರ್ ಬರ್ಗ್‌ಮನ್ ಅವರ ಮಾಸ್ಟರ್‌ಪೀಸ್‌ಗಳಲ್ಲಿ ಒಂದು. 1300ರಲ್ಲಿ ಉಂಟಾದ ಪ್ಲೇಗ್‌ ಹಾವಳಿಯಿಂದ ನಡೆದ ಮಾರಣಹೋಮದ ಕಥೆಯನ್ನು ಚೆಸ್ ಆಟದ ಮೂಲಕ ವಿಭಿನ್ನವಾಗಿ ತೋರಿಸಲಾಗಿದೆ.

    'ದಿ ಲಾಸ್ಟ್ ಮ್ಯಾನ್ ಆನ್ ಅರ್ಥ್ (1964 ), ದಿ ಒಮೆಗಾ ಮ್ಯಾನ್ (1971), ಐ ಆಮ್ ಲೆಜೆಂಡ್ (2007), ಚಿತ್ರಗಳು. ಐ ಆಮ್ ಲೆಜೆಂಡ್ ಸಿನಿಮಾ 1954ರಲ್ಲಿ ರಿಚರ್ಡ್ ಮಾಥೆಸನ್ ಬರೆದ ಕಾದಂಬರಿಯನ್ನು ಆಧರಿಸಿದೆ.

    ಡಾನ್ ಆಫ್ ದಿ ಡೆಡ್

    ಡಾನ್ ಆಫ್ ದಿ ಡೆಡ್

    'ದಿ ಆಂಡ್ರೊಮಿಡಾ ಸ್ಟ್ರೇನ್' (1971) ಸಿನಿಮಾ ಮೈಕಲ್ ಕ್ರಿಗ್ಟೊನ್ ಅವರ ಕಾದಂಬರಿ ಆಧರಿಸಿದ್ದು. ಆಕಾಶದಿಂದ ಭೂಮಿಗೆ ಬಿದ್ದ ಸೋಂಕು ಪೀಡಿತ ವಸ್ತುವೊಂದರ ಸುತ್ತ ನಡೆಯುವ ರೋಮಾಂಚನಕಾರಿ ಕಥೆಯನ್ನು ಹೊಂದಿದೆ.

    'ಡಾನ್ ಆಫ್ ದಿ ಡೆಡ್' (1978/2004 ರೀಮೇಕ್). ಜಾರ್ಜ್ ಎ. ರೋಮಿರೊ ನಿರ್ದೇಶನದ ಈ ಚಿತ್ರ ಕೊಳ್ಳಬಾಕ ಸಂಸ್ಕೃತಿಯನ್ನು ಅಣಕಿಸುತ್ತದೆ. ಪ್ಲೇಗ್‌ನಂತಹ ಮಹಾಮಾರಿಯ ಹಾವಳಿಯನ್ನೂ ಚಿತ್ರಿಸುತ್ತದೆ. 2004ರಲ್ಲಿ ರೀಮೇಕ್ ಆದ ಈ ಸಿನಿಮಾ, ಕಾಯಿಲೆಯ ಅಂಶವನ್ನು ಮತ್ತಷ್ಟು ವಿಸ್ತರಿಸಿದೆ.

    ಔಟ್ ಬ್ರೇಕ್, 12 ಮಂಕೀಸ್

    ಔಟ್ ಬ್ರೇಕ್, 12 ಮಂಕೀಸ್

    'ಔಟ್ ಬ್ರೇಕ್' (1995) - ಅಮೆರಿಕದ ಸಣ್ಣ ಪಟ್ಟಣವೊಂದರಲ್ಲಿ ಸಂಭವಿಸುವ ವೈರಸ್ ಸಂಬಂಧಿ ಕಾಯಿಲೆಯ ಸಿನಿಮಾವನ್ನು ವೊಲ್ಫ್ ಗ್ಯಾಂಗ್ ಪೀಟರ್ಸನ್ ನಿರ್ದೇಶಿಸಿದ್ದಾರೆ. 12 ಮಂಕೀಸ್ (1995)- ಟೆರ್ರಿ ಗಿಲಿಯಮ್ ನಿರ್ದೇಶನದ ಸೈನ್ಸ್ ಫಿಕ್ಷನ್ ಸಿನಿಮಾ 1990ರ ಕಾಲಘಟ್ಟದಲ್ಲಿ ಮಾನವ ಸಂಕುಲವನ್ನು ನಿರ್ಮೂಲನೆ ಮಾಡುವಂತೆ ವ್ಯಾಪಿಸಿದ ಜಾಗತಿಕ ಪಿಡುಗಿನ ಹುಟ್ಟನ್ನು ಗುರುತಿಸುವ ಕಥಾವಸ್ತು ಹೊಂದಿದೆ.

    ಕ್ಯಾಬಿನ್ ಫೀವರ್, ರೆಸಿಡೆಂಟ್ ಇವಿಲ್

    ಕ್ಯಾಬಿನ್ ಫೀವರ್, ರೆಸಿಡೆಂಟ್ ಇವಿಲ್

    ಕ್ಯಾಬಿನ್ ಫೀವರ್ (2002)- ಪ್ರವಾಸವೊಂದಕ್ಕೆ ತೆರಳಿದ್ದ ಕಾಲೇಜು ಪದವೀಧರರ ಗುಂಪೊಂದು ಕ್ಯಾಂಪ್ ಹಾಕಿದ್ದಾಗ ಮಾಂಸಾಹಾರ ಸೇವಿಸಿ ಅದರಲ್ಲಿದ್ದ ವೈರಸ್‌ನಿಂದ ಸೊಂಕಿಗೆ ಒಳಗಾಗುತ್ತಾರೆ. ಎಲಿ ರೊತ್ ನಿರ್ದೇಶನದ ಈ ಸಿನಿಮಾವನ್ನು 2016ರಲ್ಲಿ ರೀಮೇಡ್ ಮಾಡಲಾಗಿತ್ತು.

    'ರೆಸಿಡೆಂಟ್ ಇವಿಲ್' ಸರಣಿ (2002-2017)- ಸರಣಿ ರೂಪದಲ್ಲಿ ಬಂದ ಸಿನಿಮಾದಲ್ಲಿ ಮನುಷ್ಯರನ್ನು ಜೋಂಬಿಯನ್‌ಗಳನ್ನಾಗಿ ಪರಿವರ್ತಿಸುವ ವೈರಸ್‌ಅನ್ನು ಸೃಷ್ಟಿಸಿದ್ದರಿಂದ ಆಗುವ ಅನಾಹುತಗಳು ಅವುಗಳನ್ನು ನಿಯಂತ್ರಿಸುವ ಸಾಹಸಮಯ ಕಥೆಯನ್ನು ಹೊಂದಿದೆ.

    ಡೇಸ್ ಲೇಟರ್, ಕ್ಯಾರಿಯರ್ಸ್

    ಡೇಸ್ ಲೇಟರ್, ಕ್ಯಾರಿಯರ್ಸ್

    28 ಡೇಸ್ ಲೇಟರ್ (2003), 28 ವೀಕ್ಸ್ ಲೇಟರ್ (2007)- ಡ್ಯಾನಿ ಬಾಯ್ಲ್ ಮೊದಲು ನಿರ್ದೇಶಿಸಿದ್ದ ಚಿತ್ರದ ಮುಂದುವರಿದ ಭಾಗವನ್ನು 2007ರಲ್ಲಿ ಜುವಾನ್ ಕಾರ್ಲೋಸ್ ಫ್ರೆನ್ಸಡಿಲ್ಲೊ ನಿರ್ದೇಶಿಸಿದ್ದಾರೆ.

    ಕ್ಯಾರಿಯರ್ಸ್ (2009)- ಜಾಗತಿಕ ಪಿಡುಗಿನ ಬಳಿಕ ಬದುಕುಳಿಯುವ ನಾಲ್ವರು ಸ್ನೇಹಿತರು ಎದುರಿಸುವ ಸವಾಲುಗಳನ್ನು ಈ ಸಿನಿಮಾ ಹೇಳುತ್ತದೆ. 'ಬ್ಲೈಂಡ್‌ನೆಸ್' (2008)- ಪೋರ್ಚುಗೀಸ್ ಕಾದಂಬರಿಕಾರ ಜೋಸ್ ಸರಾಮಗೊ ಅವರ ಕಾದಂಬರಿಯನ್ನಾಧರಿಸಿದ ಸಿನಿಮಾದಲ್ಲಿ, ರೋಗವೊಂದು ಜನರನ್ನು ಕುರುಡರನ್ನಾಗಿಸುವ ಕಥೆಯನ್ನು ಹೊಂದಿದೆ.

    ರೈಸ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್

    ರೈಸ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್

    'ಬ್ಲ್ಯಾಕ್ ಡೆತ್' (2010)- 14ನೇ ಶತಮಾನದ ಪ್ಲೇಗ್ ಪಿಡುಗಿಗೆ ಪರಿಹಾರ ಕಂಡುಕೊಳ್ಳಲು ಹೊರಟ ರಾಜರ ಗುಂಪಿನ ಕಥೆಯನ್ನು ಹೊಂದಿರುವ ಈ ಚಿತ್ರವನ್ನು, ಸೀನ್ ಬೀನ್ ನಿರ್ದೇಶಿಸಿದ್ದಾರೆ. 'ರೈಸ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್' (2011) ಚಿತ್ರ 1960-70ರ ದಶಕದ 'ಪ್ಲಾನೆಟ್ ಆಫ್ ದಿ ಏಪ್ಸ್' ಸರಣಿಯನ್ನು ಮೆಲುಕು ಹಾಕುತ್ತದೆ. ಅಲ್ಜೈಮರ್ ಚಿಕಿತ್ಸೆಗೆ ಮಾಡುವ ವೈರಲ್ ಆಧಾರಿತ ಪ್ರಯೋಗವೊಂದು ಅನಾಹುತಕ್ಕೆ ಎಡೆಮಾಡಿಕೊಡುತ್ತದೆ.

    ಕಂಟೇಜಿಯನ್, ವರ್ಲ್ಡ್ ವಾರ್ ಝೆಡ್

    ಕಂಟೇಜಿಯನ್, ವರ್ಲ್ಡ್ ವಾರ್ ಝೆಡ್

    ಕಂಟೇಜಿಯನ್ (2011)- ಸ್ಟೀವನ್ ಸೊಡರ್‌ಬರ್ಗ್ ನಿರ್ದೇಶನದ ಈ ಚಿತ್ರದ ಈಗ ಭಾರಿ ಸುದ್ದಿಯಲ್ಲಿದೆ. 2020ರಲ್ಲಿ ಮಾರಕ ವೈರಸ್ ಕಾಯಿಲೆ ಹರಡುವ ಭವಿಷ್ಯವನ್ನು ಸಿನಿಮಾ ನುಡಿದಿತ್ತು. 'ವರ್ಲ್ಡ್ ವಾರ್ ಝೆಡ್' (2013) ಮಾರ್ಕ್ ಫಾಸ್ಟರ್ ನಿರ್ದೇಶನದ ಚಿತ್ರ. ಜೊಂಬಿ ವಿಪತ್ತಿನ ಕಥೆಯನ್ನು ಇದು ಒಳಗೊಂಡಿದೆ. 'ಆನರಬಲ್ ಮೆನ್ಷನ್: ಹ್ಯಾಕರ್ಸ್ (1995) ಸಿನಿಮಾ ಕಂಪ್ಯೂಟರ್ ವೈರಸ್ ಕುರಿತಾಗಿರುವಂಥದ್ದು.

    English summary
    Many movies in hollywood were based on virus outbreak theme. Here is the list of some movies you must watch.
    Monday, March 23, 2020, 15:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X