ನ್ಯೂಯಾರ್ಕ್ ಮ್ಯೂಸಿಕ್ ಕಾನ್ಸರ್ಟ್ ವೇಳೆ ನಿಕ್ ಜೊನಾಸ್ ಮೇಲೆ ಬ್ರಾ ಎಸೆತ: ನಟನ ಪ್ರತಿಕ್ರಿಯೆ ಏನು?

ನ್ಯೂಯಾರ್ಕ್‌ನ ಯಾಂಕೀ ಸ್ಟೇಡಿಯಂನಲ್ಲಿ ಶನಿವಾರ ನಡೆದ ಜೋನಸ್ ಬ್ರದರ್ಸ್ ಸಂಗೀತ ಕಛೇರಿಯಲ್ಲಿ (ಮ್ಯೂಸಿಕ್ ಕಾನ್ಸರ್ಟ್) ಗಾಯಕ ನಿಕ್ ಜೊನಾಸ್ ಅವರ ಸಹೋದರರಾದ ಕೆವಿನ್ ಜೊನಾಸ್ ಮತ್ತು ಜೋ ಜೊನಾಸ್ ಅವರೊಂದಿಗೆ ಪ್ರದರ್ಶನ ನೀಡಿದ್ದಾರೆ. ಆದರೆ, ಈ ವೇಳೆ ಪ್ರೇಕ್ಷಕರ ಕಡೆಯಿಂದ ಒಬ್ಬರು ನಿಕ್ ಜೊನಾಸ್ ಮೇಲೆ ಬ್ರಾ ಎಸೆದಿದ್ದಾರೆ.

ಈ ಕಾರ್ಯಕ್ರಮದ ಹಲವಾರು ಚಿತ್ರಗಳು ಮತ್ತು ವಿಡಿಯೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಆದರ ಒಂದು ಕ್ಲಿಪ್‌ನಲ್ಲಿ ಪ್ರೇಕ್ಷಕರಲ್ಲಿ ಯಾರೋ ಒಬ್ಬರು ನಿಕ್ ಜೊನಸ್ ಮೇಲೆ ಬ್ರಾ ಎಸೆದಿದ್ದಾರೆ. ಇದಕ್ಕೆ ಗಾಯಕನ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

Someone from Audience threw a bra at Nick Jonas during New York concert

ಬ್ರಾ ಎಸೆತದ ಬಳಿಕ ನಿಕ್ ಜೊನಸ್ ಪ್ರತಿಕ್ರಿಯೆ

ನಿಕ್ ಜೊನಸ್ ಅವರ ಅಭಿಮಾನಿ ಖಾತೆಯಿಂದ Instagram ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ, ಗಾಯಕ, ನಟ ನೀಲಿ ಶರ್ಟ್ ಮತ್ತು ಮೆರೂನ್ ಬಣ್ಣದ ಪ್ಯಾಂಟ್ ಧರಿಸಿ ಹಾಡುತ್ತಿರುವುದನ್ನು ಕಾಣಬಹುದು. ಅವರು ಪ್ರೇಕ್ಷಕರ ಕಡೆಗೆ ನೋಡುತ್ತಿದ್ದಾಗ, ಗುಂಪಿನಿಂದ ಯಾರೋ ಕಪ್ಪು ಬ್ರಾವನ್ನು ವೇದಿಕೆಯ ಮೇಲೆ ಎಸೆದಿದ್ದಾರೆ. ಅದು ಸೀದಾ ನಿಕ್ ಕಾಲಿನ ಬಳಿ ಬಿದ್ದಿತು. ಹಾಡುವುದನ್ನು ಸ್ವಲ್ಪ ನಿಲ್ಲಿಸಿ ಕಾಲಿನ ಬಳಿ ನೋಡಿದ ಅವರು, ನಂತರ ತಮ್ಮ ಹಾಡನ್ನು ಮುಂದುವರಿಸಿದ್ದಾರೆ. ಕೆಲವು ಕ್ಷಣಗಳ ನಂತರ ನಿಕ್ ಜೊನಾಸ್ ಆ ಸ್ಥಳದಿಂದ ದೂರ ಹೋಗುತ್ತಿರುವುದು ಕಂಡುಬಂದಿತು. ಈ ಘಟನೆಯ ನಂತರ ಸಂಗೀತ ಗೋಷ್ಠಿ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಿತು.

ಘಟನೆಗೆ ಅಭಿಮಾನಿಗಳು ಪ್ರತಿಕ್ರಿಯೆ

ವಿಡಿಯೋಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, "ಅವರಿಗೆ ಮತ್ತು ಅವರ ಕುಟುಂಬಕ್ಕೆ ತುಂಬಾ ಅಗೌರವವಿದೆ ... ಅಭಿಮಾನಿಗಳು ಕಲಾವಿದರನ್ನು ಹೇಗೆ ಗೌರವಿಸಬೇಕು ಎಂಬುದನ್ನು ಕಲಿಯಬೇಕು ... ಗಾಯಕರ ಕುಟುಂಬ ಮತ್ತು ವಿಶೇಷವಾಗಿ ನಮ್ಮ ರಾಣಿ ಪ್ರಿಯಾಂಕಾ ಚೋಪ್ರಾರಿಗೆ ತುಂಬು ಪ್ರೀತಿ." ಎಂದಿದ್ದಾರೆ.

ಮತ್ತೊಬ್ಬ ಅಭಿಮಾನಿ ಕಾಮೆಂಟ್ ಮಾಡಿ "ಇದು ತುಂಬಾ ಮುಜುಗರದ ಸಂಗತಿಯಾಗಿದೆ. ನಿಮ್ಮನ್ನು ಅಭಿಮಾನಿ ಎಂದು ಕರೆದುಕೊಳ್ಳುವುದು ಮತ್ತು ಕಲಾವಿದನ ಮೇಲೆ ಬ್ರಾ ಎಸೆಯುವುದು. ಅಗೌರವ ಮತ್ತು ಅಸಹ್ಯಕರ!!" ಎಂದು ಕಿಡಿಕಾರಿದ್ದಾರೆ.

Someone from Audience threw a bra at Nick Jonas during New York concert

ಇಂತಹ ಘಟನೆಗಳನ್ನು ಎದುರಿಸುತ್ತಿರುವ ಹಲವು ಕಲಾವಿದರು

ಕಾರ್ಯಕ್ರಮಕ್ಕೆ ಬಂದ ಪ್ರೇಕ್ಷಕರಲ್ಲೊ ಒಬ್ಬರೋ ಇಬ್ಬರೋ ಹೀಗೆ ಕಲಾವಿದರ ಮೇಲೆ ವಸ್ತುಗಳನ್ನು ಎಸೆದದ್ದು ಇದೇ ಮೊದಲಲ್ಲ. ಹಾಡುಗಾರರು ವರ್ಷಗಳಲ್ಲಿ ಹಕವು ಬಾರಿ ಇದೇ ರೀತಿಯ ಸನ್ನಿವೇಶಗಳನ್ನು ಎದುರಿಸಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ, ಒಬ್ಬ ವ್ಯಕ್ತಿಯು ತನ್ನ ಲಾಸ್ ವೇಗಾಸ್ ಕಾನ್ಸರ್ಟ್ ಸಮಯದಲ್ಲಿ ರಾಪರ್ ಕಾರ್ಡಿ ಬಿ ಮೇಲೆ ತಾವು ಕುಡಿಯುತ್ತಿದ್ದ ತಂಪು ಪಾನೀಯವನ್ನು ಎಸೆದಿದ್ದರು. ತಕ್ಷಣ ಪ್ರತಿಕ್ರಿಯಿಸಿದ ಆಕೆ ತನ್ನ ಮೈಕ್ ಅನ್ನು ವ್ಯಕ್ತಿಯತ್ತ ಎಸೆದು ಎಚ್ಚರಿಕೆ ನೀಡಿದ್ದರು.

ಇನ್ನು, ಅಭಿಮಾನಿಯೊಬ್ಬ ಎಸೆದ ಬಳೆಯಿಂದ ಗಾಯಕಿ ಕೆಲ್ಸಿಯಾ ಬ್ಯಾಲೆರಿನಿ ಕಣ್ಣಿಗೆ ಪೆಟ್ಟಾಗಿದೆ. ಗಾಯಕ ಡ್ರೇಕ್‌ನ ತೋಳಿನ ಮೇಲೆ ಫೋನ್ ಎಸೆಯಲಾಗಿತ್ತು. ಲಿಲ್ ನಾಸ್ ಎಕ್ಸ್ ಹೆಡ್‌ಲೈನ್ ಶೋನಲ್ಲಿ ಅವರ ಮೇಲೆ ಲೈಂಗಿಕ ಆಟಿಕೆಗಳನ್ನು ಎಸೆಸಿದ್ದರು. ಜೂನ್‌ನಲ್ಲಿ, ವೇದಿಕೆಯ ಮೇಲೆ ಓಡಿಬಂದ ಅಭಿಮಾನಿಯೊಬ್ಬರಿಂದ ಅವಾ ಮ್ಯಾಕ್ಸ್ ಕಣ್ಣಿಗೆ ಪೆಟ್ಟು ಬಿದ್ದಿತ್ತು. ಅದೇ ತಿಂಗಳು, ತನ್ನ ಲೈವ್ ಶೋ ಒಂದರಲ್ಲಿ ಅಭಿಮಾನಿಯೊಬ್ಬರು ತಮ್ಮ ತಾಯಿಯ ಚಿತಾಭಸ್ಮವನ್ನು ಗಾಯಕಿ ಪಿಂಕ್ ಮುಂದೆ ಇಟ್ಟು ಶಾಕ್ ನೀಡಿದ್ದರು. ಹೀಗಾಗಿ ಅಭಿಮಾನಿಗಳ ಹುಚ್ಚಾಟ ನಡೆಯುತ್ತಲೇ ಇರುತ್ತದೆ. ಅಭಿಮಾನ ಮತ್ತು ಅತಿರೇಕದ ವರ್ತನೆ ಬಗ್ಗೆ ಫಾನ್ಸ್ ಯೋಚಿಸಬೇಕಾಗಿದೆ.

More from Filmibeat

English summary
Someone from audience threw a bra at Singer Nick Jonas.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X