ಅನುಮಾನಾಸ್ಪದ ರೀತಿಯಲ್ಲಿ ಮೃತದೇಹ ಪತ್ತೆ: ನಟನ ಸಾವು ನಿಗೂಢ.!
ದಕ್ಷಿಣ ಕೊರಿಯಾದ ಯುವ ನಟ 27 ವರ್ಷದ ಚಾ ಇನ್-ಹಾ ಸಾವನ್ನಪ್ಪಿದ್ದಾರೆ. ಅವರ ಮೃತದೇಹ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಟ ಚಾ ಇನ್-ಹಾ ರವರ ನಿಜ ನಾಮ ಲೀ ಜೇ-ಹೋ. 2017 ರಲ್ಲಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ್ದ ಇವರು 'ಡಿಗ್ರಿ ಆಫ್ ಲವ್', 'ವೋಕ್ ಆಫ್ ಲವ್', 'ಲವ್ ವಿತ್ ಫ್ಲಾಸ್' ಎಂಬ ಟಿವಿ ಸೀರೀಸ್ ನಲ್ಲಿ ನಟಿಸಿದ್ದಾರೆ. ಅದಕ್ಕೂ ಮುನ್ನ 'ಸರ್ಪ್ರೈಸ್-ಯು' ಎಂಬ ಬ್ಯಾಂಡ್ ನಲ್ಲಿದ್ದ ಚಾ ಇನ್-ಹಾ ಗಾಯಕರಾಗಿದ್ದರು.
ಚಾ ಇನ್-ಹಾ ಸಾವಿಗೆ ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿದೆ. ಆದರೆ, ಕಳೆದ ಎರಡು ತಿಂಗಳಲ್ಲಿ ದಕ್ಷಿಣ ಕೊರಿಯಾದ ಎಂಟರ್ ಟೇನ್ಮೆಂಟ್ ಇಂಡಸ್ಟ್ರಿಯಲ್ಲಿ ಇದು ಮೂರನೇ ಸಾವು ಅನ್ನೋದು ಚರ್ಚೆಗೆ ಗ್ರಾಸವಾಗಿದೆ.

ಕಳೆದ ತಿಂಗಳು 28 ವರ್ಷದ ಕೆ-ಪಾಪ್ ಗಾಯಕ ಗೂ-ಹಾರಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. 25 ವರ್ಷದ ಕೆ-ಪಾಪ್ ಸ್ಟಾರ್ ಸುಲ್ಲಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದರು.
ಸಾಲು ಸಾಲಾಗಿ ದಕ್ಷಿಣ ಕೊರಿಯಾದ ನಟರು ಸಾವನ್ನಪ್ಪುತ್ತಿರುವುದಕ್ಕೆ ಸಾಮಾಜಿಕ ಒತ್ತಡ ಕಾರಣ ಎಂದು ಶಂಕಿಸಲಾಗಿದೆ. ಸೈಬರ್ ಬುಲಿಯಿಂಗ್ ಮಿತಿ ಮೀರಿದ್ದರೂ, ಅದಕ್ಕೆ ಯಾವುದೇ ಶಿಕ್ಷೆ ಇಲ್ಲ. ಹೀಗಾಗಿ, ಯುವ ನಟರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.
ಇನ್ನೂ ಕೊರಿಯಾ ಚಿತ್ರರಂಗದಲ್ಲಿ ಕೆಲ ಸೆಕ್ಸ್ ಸ್ಕ್ಯಾಂಡಲ್ ಗಳು ಇತ್ತೀಚೆಗಷ್ಟೆ ಬಟಾಬಯಲಾಗಿತ್ತು. ಇದೀಗ ಯುವ ನಟರ ಸರಣಿ ಆತ್ಮಹತ್ಯೆಗಳು ಕೊರಿಯಾ ಚಿತ್ರರಂಗದ ಕರಾಳ ಮುಖವನ್ನು ಬಹಿರಂಗ ಪಡಿಸುತ್ತಿದೆ.


Click it and Unblock the Notifications











