32ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಕೊರಿಯಾದ ಖ್ಯಾತ ನಟ ಪಾರ್ಕ್ ಮಿನ್ ಜೇ. ಸಾವಿಗೆ ಕಾರಣವೇನು ?
ಸಾವು ನಿಶ್ಚಿತ, ಬದುಕು ಅನಿಶ್ಚತ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ದಕ್ಷಿಣ ಕೊರಿಯಾದ ಖ್ಯಾತ ಸ್ಟಾರ್ ಪಾರ್ಕ್ ಮಿನ್ ಜೆ ಕೇವಲ 32ನೇ ವಯಸ್ಸಿಗೆ ಉಸಿರು ಚೆಲ್ಲಿದ್ದಾರೆ. ನಿಧನರಾಗಿದ್ದಾರೆ.
ಟುಮಾರೋ, ಲಿಟಲ್ ವುಮೆನ್, ಕಾಟ್ ಇಟ್ ಲವ್, ದಿ ಕೊರಿಯಾ-ಖಿತನ್ ವಾರ್, ಮೀ.ಲೀ ಮತ್ತು ಬೋ-ರಾ ಡೆಬೊರಾ ಚಿತ್ರಗಳಿಂದ ಜಗದ್ವಿಖ್ಯಾತಿಯನ್ನು ಗಳಿಸಿದ್ದ ಪಾರ್ಕ್ ಮಿನ್ ಜೆ ನಿಧನಕ್ಕೆ ನಿಖರವಾದ ಕಾರಣವನ್ನು ಅವರನ್ನು ನೆರಳಿನಂತೆ ಹಿಂಬಾಲಿಸುತ್ತಿದ್ದ ಅವರ ಪ್ರತಿನಿಧಿಯಂತೆ ಇದ್ದ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಕಂಪನಿ ಬಿಗ್ ಟೈಟಲ್ ಬಹಿರಂಗಗೊಳಿಸದೇ ಇದ್ದರೂ ಚೀನಾದಲ್ಲಿದ್ದಾಗ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ ಎಂದು ಅಂತರಾಷ್ಟ್ರೀಯ ಮಾದ್ಯಮಗಳು ವರದಿ ಮಾಡಿವೆ.

ಇನ್ನು ಸ್ಟಾರ್ ಆಗಿದ್ದರು ಕೂಡ ಪಾರ್ಕ್ ಮಿನ್ ಜೆ ಅವರಿಗೆ ಇನ್ನೂ ಎತ್ತರಕ್ಕೇರುವ ಬಯಕೆ ಇತ್ತು. ಈ ಕುರಿತು ಅವರು ತಮ್ಮ ಮ್ಯಾನೇಜ್ಮೆಂಟ್ ಕಂಪನಿಯ ಜೊತೆ ಚರ್ಚೆಯನ್ನು ಕೂಡ ಮಾಡಿದ್ದರು. ಚೀನಾದ ಬಹುದೊಡ್ಡ ಸ್ಟಾರ್ ಆಗಿ ಹೊರ ಹೊಮ್ಮುವ ಆಸೆಯನ್ನು ಕೂಡ ವ್ಯಕ್ತಪಡಿಸಿದ್ದರು. ತಮ್ಮ ಈ ಕನಸು ನನಸಾದ ನಂತರ ಒಂದು ತಿಂಗಳು ಪ್ರವಾಸಕ್ಕೆ ಹೋಗುವುದಾಗಿ ಹೇಳಿದ್ದರು.
ಆದರೆ ಈಗ ಅವರೇ ಇಲ್ಲ. ಹೀಗಾಗಿಯೇ ತಮ್ಮ ನೋವನ್ನು ಹಂಚಿಕೊಂಡಿರುವ ಬಿಗ್ ಟೈಟಲ್ ಮ್ಯಾನೇಜ್ಮೆಂಟ್ ಕಂಪನಿಯ ಸಿಇಈ ಹ್ಯಾಂಗ್ ಜು ಹೈ, ಪಾರ್ಕ್ ಮಿನ್ ಜೆ ಅವರ ಅಕಾಲಿಕ ನಿಧನದಿಂದ ನಮಗೆಲ್ಲ ತುಂಬಾ ಆಘಾತವಾಗಿದೆ ಎಂದಿದ್ದಾರೆ. ಅವರ ಕುಟುಂಬಕ್ಕೆ ದೇವರು ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡಿದ್ದಾರೆ. ಕೆಲ ಸಮಯದವರೆಗೆಯಾದರೂ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಅಗಲಿದ ಪಾರ್ಕ್ ಮಿನ್ ಜೆ ಅವರಿಗೆ ಧನ್ಯವಾದವನ್ನು ಕೂಡ ಸಲ್ಲಿಸಿದ್ದಾರೆ. ನಮ್ಮ ಸಂಸ್ಥೆ ಯಾವತ್ತು ಪಾರ್ಕ್ ಮಿನ್ ಜೆ ಅವರನ್ನು ಮರೆಯಲ್ಲ ಎಂದು ಹೇಳಿದ್ದಾರೆ.
ಪಾರ್ಕ್ ಮಿನ್ ಜೆ ನಿಧನದ ಸುದ್ದಿಯನ್ನು ಹಂಚಿಕೊಂಡಿರುವ ಅವರ ಕಿರಿಯ ಸಹೋದರ, ನನ್ನ ಅಣ್ಣ ಶಾಶ್ವತವಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ನಿಮ್ಮೆಲ್ಲರ ಹೃದಯದಲ್ಲಿ ಅವರು ಶಾಶ್ವತವಾಗಿ ಜೀವಂತವಾಗಿರಲಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಈ ಕಷ್ಟದ ಸಮಯದಲ್ಲಿ ನಿಮ್ಮ ಬೆಂಬಲ ನನಗೆ ಅತ್ಯಗತ್ಯ, ಎಲ್ಲರನ್ನೂ ನಾನು ಪ್ರತ್ಯೇಕವಾಗಿ ಸಂಪರ್ಕ ಮಾಡಲು ಸಾಧ್ಯ ಇಲ್ಲ ನಿಮ್ಮೆಲ್ಲರಿಗೆ ನನ್ನ ನೋವು ಅರ್ಥವಾಗುತ್ತೆ ಎಂದು ನಾನು ಅಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಡಿಸೆಂಬರ್ 4 ರಂದು ಬೆಳಿಗ್ಗೆ 9:30 ಕ್ಕೆ ಪಾರ್ಕ್ ಮಿನ್ ಜೆ ಅವರ ಅಂತ್ಯಕ್ರಿಯೆ ಸಿಯೋಲ್ ನ್ಯಾನಲ್ ಯೂನಿವರ್ಸಿಟಿ ಆಸ್ಪತ್ರೆಯ ಕೊಠಡಿ ಸಂಖ್ಯೆ 09ರಲ್ಲಿ ನಡೆಯಲಿದೆ. ಪಾರ್ಕ್ ಮಿನ್ ಜೆ ಅವರ ಹಠಾತ್ ನಿಧನದಿಂದ ದುಃಖತಪ್ತವಾದ ಅವರ ಅಭಿಮಾನಿಗಳು ಮತ್ತು ಚಿತ್ರರಂಗದ ಸದಸ್ಯರು ಕಂಬನಿ ಮಿಡಿಯುತ್ತಿದ್ದಾರೆ. ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.


Click it and Unblock the Notifications











