For Quick Alerts
  ALLOW NOTIFICATIONS  
  For Daily Alerts

  ನಿಗೂಢವಾಗಿ ಸಾವನ್ನಪ್ಪಿದ ದಕ್ಷಿಣ ಕೊರಿಯಾದ ಖ್ಯಾತ ನಟಿ

  |

  ದಕ್ಷಿಣ ಕೊರಿಯಾದ ಖ್ಯಾತ ನಟಿ ಸಂಗ್ ಯೂ ಯಂಗ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. 26 ವರ್ಷದ ನಟಿ ಸಂಗ್ ಯೂ ಯಂಗ್ ಶನಿವಾರ ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಂಗ್ ಯೂ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.

  ಟಿವಿ ಸೀರಿಸ್, ಸಿನಿಮಾ ಮತ್ತು ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದ ಸಂಗ್ ಯೂ ಯಂಗ್ ನಿಧನ ದಕ್ಷಿಣ ಕೊರಿಯಾದ ಮನರಂಜನಾ ಲೋಕಕ್ಕೆ ದೊಡ್ಡ ಶಾಕ್ ಆಗಿದೆ. ಆಂಗ್ಲ ಪತ್ರಿಕೆ ವರದಿ ಮಾಡಿರುವ ಪ್ರಕಾರ ಸಂಗ್ ಯೂ ಯಂಗ್ ಜನವರಿ 23ರಂದು ನಿಧನ ಹೊಂದಿದ್ದಾರೆ ಎಂದು ವರದಿಯಾಗಿದೆ. 25ರಂದು ಕುಟುಂಬದವರು ಸದ್ದಿಲ್ಲದೆ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

  ಅಮೆರಿಕದಿಂದ ಇಂಗ್ಲೆಂಡ್‌ಗೆ ವಾಸ್ತವ್ಯ ಬದಲಾಯಿಸಿದ ಪ್ರಿಯಾಂಕಾ ಚೋಪ್ರಾ

  ನಟಿಯ ಸಾವಿನ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಅವರ ಎಂಜನ್ಸಿ, ಜನವರಿ 23ರಂದು ನಟಿ ಸಂಗ್ ಯೂ ನಿಧನ ಹೊಂದಿದ್ದಾರೆ. ಜನವರಿ 25ರಂದು ಅಂತ್ಯಕ್ರಿಯೆ ನಡೆಸಲಾಗಿದೆ' ಎಂದು ಹೇಳಿದ್ದಾರೆ.

  ಸಂಗ್ ಯೂ 20ನೇ ವಯಸ್ಸಿನಲ್ಲಿ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ್ದಾರೆ. ಮೊದಲು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಂಗ್ ಯೂ ಬಳಿಕ ಟಿವಿ ಸೀರಿಸ್ ನಲ್ಲಿ ನಟಿಸಲು ಪ್ರಾರಂಭಿಸಿದರು. 2013ರಲ್ಲಿ ಸಂಗ್ ಯೂ, ಗೋಲ್ಡನ್ ರೆಂಬೊ ಟಿವಿ ಸೀರಿಸ್ ಮೂಲಕ ಚೊಚ್ಚಲ ಬಾರಿಗೆ ಟಿವಿ ಪರದೆಯಲ್ಲಿ ಮಿಂಚಿದರು. ಬಳಿಕ ಎರಡು ಟಿವಿ ಸಿರೀಸ್ ನಲ್ಲಿ ಮಿಂಚಿದ್ದಾರೆ.

  ಇದುನ್ನ ನಾವಿಬ್ರು ಮಾಡೋಣ ಅಂತ ನಾನೇ ಐಂದ್ರಿತಾಗೆ ಹೇಳಿದ್ದು | Filmibeat Kannada

  ಕೊನೆಯದಾಗಿ ಸಂಗ್ ಯೂ ಎರಡು ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು. ಸಂಗ್ ಬಗ್ಗೆ ಅವರ ಎಜೆನ್ಸಿ 'ಉತ್ತಮ ನಟಿಯಾಗಿದ್ದರು, ನಟನೆಯ ಬಗ್ಗೆ ಹೆಚ್ಚು ಉತ್ಸಾಹಕರಾಗಿದ್ದರು' ಎಂದು ಹೇಳಿಕೆ ಬಿಡುಗಡೆ ಮಾಡಿದೆ.

  English summary
  South Korean famous actress song yoo jung passed away at 26.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X