twitter
    For Quick Alerts
    ALLOW NOTIFICATIONS  
    For Daily Alerts

    ಭಾರತ ಪ್ರವಾಸ ಮಾಡಲು ನಿರ್ಧರಿಸಿದ 'ಸ್ಪೈಡರ್ ಮ್ಯಾನ್: ಇಡೀ ದೇಶ ಸುತ್ತಿ ತಾಜ್ ಮಹಲ್ ನೋಡುವ ಆಸೆ

    |

    ಹಾಲಿವುಡ್‌ ಸಿನಿಮಾಗಳು ಭಾರತದ ಬಾಕ್ಸಾಫೀಸ್‌ನಲ್ಲಿ ನೂರಾರು ಕೋಟಿ ಲೂಟಿ ಮಾಡುತ್ತವೆ. ಸ್ಪೈಡರ್ ಮ್ಯಾನ್, ಅವೆಂಜರ್, ಅವತಾರ್ ಅಂತ ಸಿನಿಮಾಗಳು ಭಾರತೀಯ ಸಿನಿಮಾಗಳ ದಾಖಲೆಯನ್ನೇ ಮುರಿದು ಹಾಕುತ್ತವೆ. ಆ ಮಟ್ಟಿಗೆ ಹಾಲಿವುಡ್‌ ಸಿನಿಮಾಗಳಿಗೆ ಭಾರತದಲ್ಲಿ ಬೇಡಿಕೆ ಇದೆ. ಕಳೆದ ವರ್ಷ ತೆರೆಕಂಡ 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಸಿನಿಮಾದ ಗಳಿಕೆನೇ ಸಾಕ್ಷಿ. ಕೊರೊನಾ ಕಾಲದಲ್ಲೂ ಭಾರತದಲ್ಲಿ ಕೋಟಿ ಕೋಟಿ ಲೂಟಿ ಮಾಡಿದೆ.

    Recommended Video

    ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ 'ಸ್ಪೈಡರ್ ಮ್ಯಾನ್ ನೋ ವೇ ಹೋಮ್' ಕಲೆಕ್ಷನ್.

    ಸ್ಪೈಡರ್ ಮ್ಯಾನ್‌ಗೆ ಭಾರತದಲ್ಲಿ ಅತೀ ಹೆಚ್ಚು ಮಂದಿ ಅಭಿಮಾನಿಗಳಿದ್ದಾರೆ. ಹೀಗಾಗಿ ಸ್ಪೈಡರ್ ಮ್ಯಾನ್ ಖ್ಯಾತಿಯ ಟಾಮ್ ಹಾಲೆಂಡ್ ಭಾರತಕ್ಕೆ ಪ್ರವಾಸ ಮಾಡಲು ಮನಸ್ಸು ಮಾಡಿದ್ದಾರೆ. ಇತ್ತೀಚೆಗ ನಡೆದ ಸಂದರ್ಶನದಲ್ಲಿ ಭಾರತ ಪ್ರವಾಸ ಮಾಡುವುದಾಗಿ ತಿಳಿಸಿದ್ದಾರೆ. ಭಾರತದಲ್ಲಿರುವ ಅಭಿಮಾನಿಗಳನ್ನು ಭೇಟಿ ಮಾಡಲು ನಿರ್ಧಾರ ಮಾಡಿದ್ದಾರೆ. ಹಾಗಿದ್ದರೆ. 'ಸ್ಪೈಡರ್ ಮ್ಯಾನ್' ಯಾವಾಗ ಭಾರತ ಬರುತ್ತಾರೆ? 'ಸ್ಪೈಡರ್ ಮ್ಯಾನ್' ಆಸೆ ಏನು? ತಿಳಿಯಲು ಮುಂದೆ ಓದಿ.

    ಸ್ಪೈಡರ್‌ಮ್ಯಾನ್‌ ಮೇಲೆ ಮುಗಿಬಿದ್ದ ಹಳೆ ವಿಲನ್‌ಗಳು: ರೋಚಕ ಹಣಾಹಣಿಸ್ಪೈಡರ್‌ಮ್ಯಾನ್‌ ಮೇಲೆ ಮುಗಿಬಿದ್ದ ಹಳೆ ವಿಲನ್‌ಗಳು: ರೋಚಕ ಹಣಾಹಣಿ

    'ಸ್ಪೈಡರ್ ಮ್ಯಾನ್' ಭಾರತ ಪ್ರವಾಸ

    'ಸ್ಪೈಡರ್ ಮ್ಯಾನ್' ಭಾರತ ಪ್ರವಾಸ

    'ಸ್ಪೈಡರ್ ಮ್ಯಾನ್' ಖ್ಯಾತಿಯ ಟಾಮ್ ಹಾಲೆಂಡ್‌ಗೆ ಭಾರತದ ಮೇಲೆ ವಿಶೇಷವಾದ ಒಲವಿದೆ. ಅದರಲ್ಲೂ ಟಾಮ್ ನಟಿಸಿದ 'ಸ್ಪೈಡರ್ ಮ್ಯಾನ್' ಸರಣಿಗಳು ಭಾರತದಲ್ಲಿ ಗೆದ್ದಿವೆ. ಈ ಕಾರಣಕ್ಕೆ ಭಾರತ ಮೇಲೆ ವಿಶೇಷವಾದ ಒಲವಿದೆ. ಇತ್ತೀಚೆಗೆ ಮಾಧ್ಯಮಗಳೊಂದಿಗೆ ನಡೆದ ಸಂದರ್ಶನದಲ್ಲಿ ಭಾರತ ಮೇಲೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಪ್ರವಾಸ ಮಾಡಿ, ಇದೇ ದೇಶವನ್ನು ಸುತ್ತಬೇಕೆಂಬ ಆಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದೇ ವೇಳೆ ತಾಜ್ ಮಹಲ್ ಅನ್ನು ನೋಡುವುದಾಗಿ ತಿಳಿಸಿದ್ದಾರೆ.

    ಕಾರಿನ ಮೇಲೆ ಕಾರು ಹತ್ತಿಸಿದ ಹಾಲಿವುಡ್ ಸ್ಟಾರ್: ಮಹಿಳೆ ಗಂಭೀರಕಾರಿನ ಮೇಲೆ ಕಾರು ಹತ್ತಿಸಿದ ಹಾಲಿವುಡ್ ಸ್ಟಾರ್: ಮಹಿಳೆ ಗಂಭೀರ

    'ನಾನು ಭಾರತದ ದೊಡ್ಡ ಅಭಿಮಾನಿ'

    'ನಾನು ಭಾರತದ ದೊಡ್ಡ ಅಭಿಮಾನಿ'

    "ನಾನು ಭಾರತದ ಅತೀ ದೊಡ್ಡ ಅಭಿಮಾನಿ. ಆದರೆ ನಾನು ಈಗಾಗಲೇ ಹೇಳಿದ ಹಾಗೇ ಅಲ್ಲಿಗೆ ಹೋಗಲು ಅವಕಾಶ ಸಿಕ್ಕಿಲ್ಲ. ಭಾರತದಲ್ಲಿರುವ ನನ್ನ ಅಭಿಮಾನಿಗಳು ನನಗೆ ತೋರಿದ ಪ್ರೀತಿ ಹಾಗೂ ಬೆಂಬಲಕ್ಕೆ ನಾನು ಧನ್ಯನಾಗಿದ್ದೇನೆ. ನಾನು ಒಂದು ದಿನ ಭಾರತಕ್ಕೆ ಬರುತ್ತೇನೆ. ಅಲ್ಲಿರುವ ನನ್ನ ಅಭಿಮಾನಿಗಳನ್ನು ಭೇಟಿ ಮಾಡುತ್ತೇನೆ. ಒಂದು ಭಾರತದಲ್ಲಿಯೇ ನನ್ನ ಸಿನಿಮಾದ ಚಿತ್ರೀಕರಣ ನಡೆಯಬಹುದು. ತಾಜ್ ಮಹಲ್ ಸೇರಿದಂತೆ ಭಾರತದ ಪ್ರತಿಯೊಂದು ಭಾಗವನ್ನು ನಾನು ನೋಡಲು ಬಯಸುತ್ತೇನೆ. ಸುಂದರವಾದದ್ದು ಏನಿದೆಯೋ ಅದೆಲ್ಲವನ್ನೂ ನೋಡಲು ಬಯಸುತ್ತೇನೆ. ಎಂದು ಸ್ಪೈಡರ್ ಮ್ಯಾನ್ ಖ್ಯಾತಿಯ ಟಾಮ್ ಹಾಲೆಂಡ್ ತಿಳಿಸಿದ್ದಾರೆ.

    ಭಾರತದಲ್ಲಿ 'ಸ್ಪೈಡರ್ ಮ್ಯಾನ್' ದೋಚಿದ್ದೆಷ್ಟು?

    ಭಾರತದಲ್ಲಿ 'ಸ್ಪೈಡರ್ ಮ್ಯಾನ್' ದೋಚಿದ್ದೆಷ್ಟು?

    2021ರ ಡಿಸೆಂಬರ್ ತಿಂಗಳಲ್ಲಿ 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾ ಭಾರತದಲ್ಲಿಯೇ ಸುಮಾರು 260 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ. ಕೊರೊನಾ ಭೀತಿಯ ನಡುವೆಯೂ ಈ ಸಿನಿಮಾವನ್ನು ಥಿಯೇಟರ್‌ಗೆ ಹೋಗಿ ನೋಡಿದ್ದಾರೆ. ಹೀಗಾಗಿ ಹಿಂದೆ ಬಂದ 'ಸ್ಪೈಡರ್ ಮ್ಯಾನ್' ಸರಣೆಯಂತೆ, ಅವೆಂಜರ್ ಸಿನಿಮಾದಂತೆ ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿದೆ.

    'ದಿ ಲಾರ್ಡ್‌ ಆಫ್‌ ದಿ ರಿಂಗ್ಸ್' ವೆಬ್ ಸರಣಿ ಘೋಷಿಸಿದ ಅಮೆಜಾನ್ ಪ್ರೈಂ'ದಿ ಲಾರ್ಡ್‌ ಆಫ್‌ ದಿ ರಿಂಗ್ಸ್' ವೆಬ್ ಸರಣಿ ಘೋಷಿಸಿದ ಅಮೆಜಾನ್ ಪ್ರೈಂ

    4 ಭಾಷೆಯಲ್ಲಿ 'ಅನ್‌ಚಾರ್ಟೆಡ್' ರಿಲೀಸ್

    4 ಭಾಷೆಯಲ್ಲಿ 'ಅನ್‌ಚಾರ್ಟೆಡ್' ರಿಲೀಸ್

    ಫೆಬ್ರವರಿ 18ರಂದು ಟಾಮ್ ಹಾಲೆಂಡ್ ನಟಿಸಿದ 'ಅನ್‌ಚಾರ್ಟೆಡ್' ಸಿನಿಮಾ 4 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. 500 ವರ್ಷಗಳಷ್ಟು ಹಳೆಯದಾದ ನಿಧಿಯನ್ನು ಹುಡುಕುವ ಕತೆಯೆಂದು ಮೇಲ್ನೋಟಕ್ಕೆ ಅನಿಸುತ್ತಿದೆ. ಹೀಗಾಗಿ ಈ ಸಿನಿಮಾ ಸಾಕಷ್ಟು ಕುತೂಹಲ ಹುಟ್ಟಿಸಿದೆ. 'ಸ್ಪೈಡರ್ ಮ್ಯಾನ್' ಸಿನಿಮಾ ಗೆದ್ದ ಬಳಿಕವೇ ಮತ್ತೊಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಇದು ಭಾರತದಲ್ಲಿ ಇಂಗ್ಲಿಷ್, ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

    English summary
    Spider-Man: No Way Home actor Tom Holland says he love India. He is keen to travel all over the country and would love to see the Taj Mahal.
    Wednesday, February 16, 2022, 10:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X