ಭಾರತದ ಸ್ಟಾರ್ ನಟರ ಸಿನಿಮಾಗಳನ್ನು ಹಿಂದಿಕ್ಕಿದ 'ಸ್ಪೈಡರ್‌ಮ್ಯಾನ್'

ಭಾರತದ ಸಿನಿಮಾ ಮಾರುಕಟ್ಟೆ ಬಹಳ ದೊಡ್ಡದು. ಹಾಲಿವುಡ್ ಸಿನಿಮಾಗಳು ನಿರ್ಮಾಣ ಹಂತದಲ್ಲಿಯೇ ಭಾರತದ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡೆ ಸಿನಿಮಾದ ಪ್ರಚಾರ, ಬಿಡುಗಡೆಯನ್ನು ಯೋಜನೆ ಹಾಕುವ ಮಟ್ಟಿಗೆ ಭಾರತದ ಸಿನಿಮಾರುಕಟ್ಟೆ ಬೆಳೆದಿದೆ.

ಇದೀಗ ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್‌ನ ಹೊಸ ಸಿನಿಮಾ 'ಸ್ಪೈಡರ್‌ಮ್ಯಾನ್; ನೋ ವೇ ಹೋಮ್' ಭಾರತದಲ್ಲಿ ಬಿಡುಗಡೆ ಆಗಿದ್ದು, ಮೊದಲ ದಿನದ ಕಲೆಕ್ಷನ್‌ನಲ್ಲಿ ದಾಖಲೆಯನ್ನೇ ಬರೆದಿದೆ.

ಭಾರತದ ಸ್ಟಾರ್ ನಟರ ಸಿನಿಮಾಗಳ ಗಳಿಕೆಯ ದಾಖಲೆಯನ್ನೇ ಹಿಂದಿಕ್ಕಿರುವ 'ಸ್ಪೈಡರ್‌ಮ್ಯಾನ್' ಸಿನಿಮಾ ಹೊಸ ದಾಖಲೆಯನ್ನೇ ಬರೆದಿದೆ.

Spider Man No Way Home Became Highest Grossing Movie On First Day In India This Year

ಹಾಲಿವುಡ್ ಸಿನಿಮಾಗಳು ಬೆಂಗಳೂರು, ಮುಂಬೈ, ದೆಹಲಿಯ ಕೆಲವು ಚಿತ್ರಮಂದಿರಗಳಲ್ಲಿಯಷ್ಟೆ ಬಿಡುಗಡೆ ಆಗಿ ಹಾಗೆಯೇ ಮರೆಯಾಗುತ್ತಿದ್ದ ಕಾಲವಿತ್ತು. ಆದರೆ ಈಗ ಹಾಲಿವುಡ್ ಸಿನಿಮಾ ಒಂದು ಸ್ಥಳೀಯ ಸ್ಟಾರ್ ನಟರ ಸಿನಿಮಾಗಳನ್ನೂ ಮೀರಿಸಿ ಕಲೆಕ್ಷನ್ ಮಾಡುತ್ತಿದೆ.

ಇತ್ತೀಚೆಗೆ ಬಿಡುಗಡೆ ಆದ ಅಕ್ಷಯ್ ಕುಮಾರ್ ನಟನೆಯ 'ಸೂರ್ಯವಂಶಿ' ಸಿನಿಮಾ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಬಹಳ ದೊಡ್ಡ ಮೊತ್ತ ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಆದರೆ 'ಸೂರ್ಯವಂಶಿ' ಸಿನಿಮಾದ ದಾಖಲೆ ಮುರಿದಿರುವ 'ಸ್ಪೈಡರ್‌ಮ್ಯಾನ್' ಮೊದಲ ದಿನವೇ ಬರೋಬ್ಬರಿ 33 ಕೋಟಿ ರುಪಾಯಿ ಗಳಿಕೆ ಮಾಡಿದೆ. ಭಾರತದ ಇನ್ಯಾವ ಸಿನಿಮಾವೂ ಮೊದಲ ದಿನ ಇಷ್ಟು ದೊಡ್ಡ ಮೊತ್ತ ಕಲೆಕ್ಷನ್ ಮಾಡಿಲ್ಲ.

ನವೆಂಬರ್ 05ರಂದು ಬಿಡುಗಡೆ ಆಗಿದ್ದ ಅಕ್ಷಯ್ ಕುಮಾರ್ ನಟನೆಯ 'ಸೂರ್ಯವಂಶಿ' ಸಿನಿಮಾ ಮೊದಲ ದಿನ 22 ಕೋಟಿ ಹಣ ಗಳಿಸಿತ್ತು. ಇದು ಈ ವರ್ಷದ ದಾಖಲೆಯಾಗಿತ್ತು. ಆ ದಾಖಲೆಯನ್ನು ಸ್ಪೈಡರ್‌ಮ್ಯಾನ್ ಮುರಿದಿದೆ.

2019 ರಲ್ಲಿ ಬಿಡುಗಡೆ ಆಗಿದ್ದ 'ಅವೇಂಜರ್ಸ್; ದಿ ಎಂಡ್ ಗೇಮ್' ಸಿನಿಮಾ ಸಹ ಮೊದಲ ದಿನ ಭಾರಿ ಮೊತ್ತ ಕಲೆಕ್ಷನ್ ಮಾಡಿತ್ತು. ಆ ದಾಖಲೆಯನ್ನು 'ಸ್ಪೈಡರ್‌ಮ್ಯಾನ್' ಸಿನಿಮಾ ಮುರಿದಿದೆ. 'ಸ್ಪೈಡರ್‌ಮ್ಯಾನ್; ನೋ ವೇ ಹೋಮ್' ಸಿನಿಮಾ ಭಾರತದಲ್ಲಿ 2ಡಿ, 3ಡಿ, ಐಮ್ಯಾಕ್ಸ್ 3ಡಿ, 4ಡಿಎಕ್ಸ್‌ 3ಡಿ ತಂತ್ರಜ್ಞಾನದಲ್ಲಿ ವೀಕ್ಷಣೆಗೆ ಲಭ್ಯವಿದೆ. ಸಿನಿಮಾದ ಟಿಕೆಟ್ ದರ ಸಹ ಬಹಳ ದುಬಾರಿಯಾಗಿದೆ. ಹಾಗಿದ್ದರೂ ಸಹ ಸಿನಿಮಾದ ಬಹುತೇಕ ಶೋಗಳು ಈಗಾಗಲೇ ಬುಕ್ ಆಗಿವೆ. ಅದರಲ್ಲಿಯೂ ವೀಕೆಂಡ್ ಶೋಗಳು ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಫುಲ್ ಆಗಿವೆ. ಈ ವೀಕೆಂಡ್‌ನಲ್ಲಿ ಸಿನಿಮಾದ ಕಲೆಕ್ಷನ್ ಸುಮಾರು 70 ಕೋಟಿ ಆಗುವ ನಿರೀಕ್ಷೆ ಇದೆ.

More from Filmibeat

English summary
Spider Man No Way Home movie became highest grossing movie on first day on Indian box office this year. This movie beaten Akshay Kumar's Sooryavamsi and Rajinikanth's Annate.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X