twitter
    For Quick Alerts
    ALLOW NOTIFICATIONS  
    For Daily Alerts

    ಭಾರತದ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದ 'ಸ್ಪೈಡರ್ ಮ್ಯಾನ್'

    |

    ಜಾಗತಿಕ ಸಿನಿಮಾ ಪ್ರೇಮಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ 'ಸ್ಪೈಡರ್‌ಮ್ಯಾನ್; ನೋ ವೇ ಹೋಮ್' ಸಿನಿಮಾ ಕೊನೆಗೂ ಬಿಡುಗಡೆ ಆಗಿದೆ. ಭಾರತದಲ್ಲಿ ಡಿಸೆಂಬರ್ 16ಕ್ಕೆ ತೆರೆ ಕಾಣಲಿದೆ.

    ಭಾರತದಲ್ಲಿ 'ಸ್ಪೈಡರ್‌ಮ್ಯಾನ್; ನೋ ವೇ ಹೋಮ್' ಸಿನಿಮಾ ಬಿಡುಗಡೆ ಆಗುವ ಮುನ್ನವೇ ದಾಖಲೆಯೊಂದನ್ನು ಬರೆದಿದೆ. ಅತಿ ಹೆಚ್ಚು ಪ್ರೀ ಬುಕಿಂಗ್ ಆದ ಹಾಲಿವುಡ್ ಸಿನಿಮಾ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಈ ಸಿನಿಮಾ ಪಡೆದುಕೊಂಡಿದೆ.

    2019 ರಲ್ಲಿ ಬಿಡುಗಡೆ ಆಗಿದ್ದ ಮಾರ್ವೆಲ್‌ನ 'ಅವೆಂಜರ್ಸ್; ಎಂಡ್ ಗೇಮ್' ಸಿನಿಮಾ ಭಾರತದಲ್ಲಿ ಅತಿ ಹೆಚ್ಚು ಪ್ರೀ ಬುಕಿಂಗ್ ಆಗಿದ್ದ ಹಾಲಿವುಡ್ ಸಿನಿಮಾ ಎನಿಸಿಕೊಂಡಿತ್ತು. ಅದರ ಬಳಿಕ ಇದೀಗ 'ಸ್ಪೈಡರ್‌ಮ್ಯಾನ್; ನೋ ವೇ ಹೋಮ್' ಸಿನಿಮಾ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

    Spider man No Way Home Became Second Biggest Advance Booking Hollywood Movie In India

    ಡಿಸೆಂಬರ್ 16 ರಂದು ಸಿನಿಮಾ ಬಿಡುಗಡೆ ಆಗಲಿದ್ದು, ನಿನ್ನೆಯಿಂದಲೇ ಸಿನಿಮಾದ ಟಿಕೆಟ್ ಬುಕಿಂಗ್ ಓಪನ್ ಆಗಿದ್ದು, ಈಗಾಗಲೇ ಹಲವು ಶೋಗಳು ಬುಕ್ ಆಗಿಬಿಟ್ಟಿವೆ. ಅದರಲ್ಲಿಯೂ 3ಡಿ ಐಮ್ಯಾಕ್ಸ್ 3ಡಿ, 4ಎಕ್ಸ್‌ 3ಡಿ ತಂತ್ರಜ್ಞಾನದಲ್ಲಿ ಸಿನಿಮಾ ವೀಕ್ಷಿಸಲು ಹೆಚ್ಚಿನ ಜನ ಬುಕಿಂಗ್ ಮಾಡಿಕೊಂಡಿದ್ದಾರೆ. 2ಡಿಗೆ ಬುಕಿಂಗ್ ಕಡಿಮೆ ಆಗಿದೆ.

    ಕೇವಲ 24 ಗಂಟೆಯಲ್ಲಿ 'ಸ್ಪೈಡರ್‌ಮ್ಯಾನ್; ನೋ ವೇ ಹೋಮ್' ಸಿನಿಮಾದ 5 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. 24 ಗಂಟೆಯಲ್ಲಿ ಮಾರಾಟವಾಗಿರುವ ಟಿಕೆಟ್‌ನಿಂದ ಸುಮಾರು 10 ಕೋಟಿ ಹಣ ಕಲೆಕ್ಷನ್ ಆಗಿದೆ. ಸಿನೆಪೊಲೀಸ್ ಸೇರಿದಂತೆ ಕೆಲವು ಸಿನಿಮಾ ಸಂಸ್ಥೆಗಳು ಟಿಕೆಟ್ ಬುಕಿಂಗ್‌ ಇನ್ನೂ ತೆರೆದಿಲ್ಲ ಹಾಗಾಗಿ ಇನ್ನಷ್ಟು ಟಿಕೆಟ್ ಮಾರಾಟವಾಗುವ ಸಾಧ್ಯತೆ ಇದೆ.

    2019 ರಲ್ಲಿ ಬಿಡುಗಡೆ ಆಗಿದ್ದ ಮಾರ್ವೆಲ್‌ನ 'ಅವೇಂಜರ್ಸ್; ಎಂಡ್ ಗೇಮ್' ಸಿನಿಮಾದ 14 ಲಕ್ಷ ಟಿಕೆಟ್‌ಗಳು ಮೊದಲ 24 ಗಂಟೆಯಲ್ಲಿ ಮಾರಾಟವಾಗಿದ್ದವು. ಇದು ಈವರೆಗಿನ ದಾಖಲೆ ಆಗಿದೆ.

    ಪಿವಿಆರ್‌ ಒಂದೇ 'ಸ್ಪೈಡರ್‌ಮ್ಯಾನ್; ನೋ ವೇ ಹೋಮ್' ಸಿನಿಮಾದ 1.60 ಲಕ್ಷ ಟಿಕೆಟ್‌ ಅನ್ನು ಮೊದಲ 24 ಗಂಟೆಯಲ್ಲಿ ಮಾರಾಟ ಮಾಡಿದೆ, ಇದರಿಂದ ಸುಮಾರು 6.60 ಕೋಟಿ ಹಣ ಕಲೆಕ್ಷನ್ ಆಗಿದೆ. ಐನಾಕ್ಸ್ ಹಾಗೂ ಸಿನೆಪೊಲೀಸ್ 2.20 ಲಕ್ಷ ಟಿಕೆಟ್ ಮಾರಾಟ ಮಾಡಿವೆ. ಸಿನೆಪೊಲೀಸ್ ಮತ್ತು ಇತರೆ ಕೆಲವು ಸಿನಿಮಾ ಸಂಸ್ಥೆಗಳು ಹಾಗೂ ಚಿತ್ರಮಂದಿರಗಳು ಬುಕಿಂಗ್ ಅನ್ನು ಇನ್ನೂ ತೆರೆದಿಲ್ಲ.

    ಸಿನಿಮಾವು ಭಾರತದಲ್ಲಿ ಗುರುವಾರ ಬಿಡುಗಡೆ ಆಗಲಿದ್ದು, ಮೊದಲ ದಿನವೇ ಸುಮಾರು 30 ಕೋಟಿ ಹಣವನ್ನು ಈ ಸಿನಿಮಾ ಗಳಿಸಬಹುದು ಎಂಬ ಲೆಕ್ಕಾಚಾರವನ್ನು ಪರಿಣಿತರು ಹಾಕಿದ್ದಾರೆ. ಈ ವೀಕೆಂಡ್ ಸೇರಿದಂತೆ ಮುಂದಿನ ನಾಲ್ಕು ದಿನದಲ್ಲಿ ಸುಮಾರು 115 ಕೋಟಿ ಹಣ ಗಳಿಸಲಿದೆ ಎಂದು ಅಂದಾಜಿಸಲಾಗಿದೆ. 'ಸ್ಪೈಡರ್‌ಮ್ಯಾನ್' ಸರಣಿಯ ಈ ಹಿಂದಿನ ಸಿನಿಮಾ 'ಸ್ಪೈಡರ್‌ಮ್ಯಾನ್; ಫಾರ್ ಫ್ರಮ್ ಹೋಮ್' ಭಾರತದಲ್ಲಿ 104 ಕೋಟಿ ಕಲೆಕ್ಷನ್ ಮಾಡಿತ್ತು. ಇದು ಈವರೆಗಿನ ಅತಿ ಹೆಚ್ಚಿನ ಕಲೆಕ್ಷನ್ ಆಗಿದೆ. ಈ ದಾಖಲೆಯನ್ನು 'ಸ್ಪೈಡರ್‌ಮ್ಯಾನ್; ನೋ ವೇ ಹೋಮ್' ಸಿನಿಮಾ ಸುಲಭವಾಗಿ ಮುರಿಯುತ್ತದೆ ಎಂದು ಅಂದಾಜಿಸಲಾಗಿದೆ.

    'ಸ್ಪೈಡರ್‌ಮ್ಯಾನ್; ನೋ ವೇ ಹೋಮ್' ಸಿನಿಮಾವು ಲಾಸ್ ಏಂಜಲ್ಸ್‌ನಲ್ಲಿ ಡಿಸೆಂಬರ್ 13 ರಂದು ಬಿಡುಗಡೆ ಆಗಿದೆ. ಬ್ರಿಟನ್‌ನಲ್ಲಿ ಡಿಸೆಂಬರ್ 15 ಕ್ಕೆ ಬಿಡುಗಡೆ ಆಗಲಿದೆ. ಅಮೆರಿಕದ ಕೆಲವು ಭಾಗಗಳು, ಏಷ್ಯಾದ ಕೆಲವು ದೇಶಗಳಲ್ಲಿ ಡಿಸೆಂಬರ್ 16ಕ್ಕೆ ಬಿಡುಗಡೆ ಆಗಲಿದೆ.

    'ಸ್ಪೈಡರ್‌ಮ್ಯಾನ್; ನೋ ವೇ ಹೋಮ್' ಸಿನಿಮಾವು ಟಾಮ್ ಹಾಲೆಂಡ್‌ನ ಕೊನೆಯ ಸ್ಪೈಡರ್‌ಮ್ಯಾನ್ ಸಿನಿಮಾ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ 'ಸ್ಪೈಡರ್‌ಮ್ಯಾನ್' ಸಿನಿಮಾ ಸರಣಿಯಲ್ಲಿ ಈವರೆಗೆ ಬಂದಿದ್ದ ಎಲ್ಲ ವಿಲನ್‌ಗಳು ಬರಲಿದ್ದಾರೆ. ಈ ಹಿಂದೆ 'ಸ್ಪೈಡರ್‌ಮ್ಯಾನ್' ಆಗಿ ನಟಿಸಿದ್ದ ಎಲ್ಲ ನಟರೂ ಮತ್ತೆ 'ಸ್ಪೈಡರ್‌ಮ್ಯಾನ್' ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಡಾಕ್ಟರ್ ಸ್ಟ್ರೇಂಜ್ ಪಾತ್ರ ಸಹ ಇರಲಿದೆ.

    English summary
    Spider man No way home is the biggest second Hollywood movie which got biggest advance booking in 24 hours at Indian box office.
    Wednesday, December 15, 2021, 9:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X