Naatu Naatu Live Performance: ಆಸ್ಕರ್ ವೇದಿಕೆಯಲ್ಲಿ 'ನಾಟು ನಾಟು'.. ಎಲ್ಲರು ಎದ್ದು ನಿಂತು ಚಪ್ಪಾಳೆ

ಭಾರತೀಯ ಸಿನಿರಸಿಕರು ಕಾಯುತ್ತಿದ್ದ ಆ ಪರ್ಫಾರ್ಮೆನ್ಸ್ ಮುಕ್ತಾಯವಾಗಿದೆ. ಆಸ್ಕರ್‌ ವೇದಿಕೆಯಲ್ಲಿ ಗಾಯಕರಾದ ರಾಹುಲ್ ಸಿಂಪ್ಲಿಗಂಜ್ ಹಾಗೂ ಕಾಲಭೈರವ 'ನಾಟು ನಾಟು' ಹಾಡು ಹಾಡಿ ಧೂಳೆಬ್ಬಿಸಿದ್ದಾರೆ. ಒಂದಷ್ಟು ಡ್ಯಾನ್ಸರ್ಸ್ ವೇದಿಕೆ ಮೇಲೆ ಸಾಂಗ್ ರೀ ಕ್ರಿಯೇಟ್ ಮಾಡಿ ಡ್ಯಾನ್ಸ್ ಮಾಡಿದ್ದಾರೆ. ಪರ್ಫಾರ್ಮೆನ್ಸ್ ಮುಗಿಯುತ್ತಿದ್ದಂತೆ ಇಡೀ ಆಡಿಟೋರಿಯಂ ಎದ್ದು ನಿಂತು ಚಪ್ಪಾಳೆ ತಟ್ಟಿ ಸಂಭ್ರಮಿಸಿದೆ.

ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದ ಆರಂಭದಲ್ಲಿ ಜಿಮ್ಮಿ ಕಿಮ್ಮೆಲ್ ನಿರೂಪಣೆ ಅಡ್ಡಪಡಿಸಿ ಡ್ಯಾನ್ಸರ್ಸ್ ಬಂದು 'ನಾಟು ನಾಟು' ಹೆಜ್ಜೆ ಹಾಕಿ ಹೋಗಿದ್ದರು. ನಂತರ ಅಸಲಿ ಲೈವ್ ಪರ್ಫಾರ್ಮೆನ್ಸ್ ಶುರುವಾಯಿತು. ಸಿನಿಮಾದಲ್ಲಿ ಇದ್ದಂತೆ ಬ್ಯಾಕ್‌ಗ್ರೌಂಡ್ ಕ್ರಿಯೇಟ್ ಮಾಡಲಾಗಿತ್ತು. ವೇದಿಕೆಯಲ್ಲಿ ರಾಹುಲ್ ಸಿಂಪ್ಲಿಗಂಜ್ ಹಾಗೂ ಕಾಲಭೈರವ ಹಾಡಲು ಆರಂಭಿಸುತ್ತಿದ್ದಂತೆ ಡ್ಯಾನ್ಸರ್ಸ್ ಬಂದು ಕುಣಿಯಲು ಆರಂಭಿಸಿದರು. ನೆರೆದವರು ಚಪ್ಪಾಳೆ ಮೂಲಕ ಹುರಿದುಂಬಿಸುತ್ತಾ ಹೋದರು. ಪರ್ಫಾರ್ಮೆನ್ಸ್ ಮುಗಿಯುವ ವೇಳೆಗೆ ಎಲ್ಲರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದರು.

Standing ovation for Naatu Naatu Performance at the Oscars 2023 stage

ಕಳೆದೊಂದು ವರ್ಷದಿಂದ 'ನಾಟು ನಾಟು' ಸಾಂಗ್ ಕೇಳಿದವರನೆಲ್ಲಾ ಕುಣಿಸುತ್ತಿದೆ. ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿತ್ತು. ಹಾಗಾಗಿ ವೇದಿಕೆಯಲ್ಲಿ ಲೈವ್ ಪರ್ಫಾರ್ಮೆನ್ಸ್‌ಗೆ ಅವಕಾಶ ಸಿಕ್ಕಿತ್ತು.

More from Filmibeat

English summary
Standing ovation for Naatu Naatu Performance at the Oscars 2023 stage. Deepika Padukone introduces Naatu Naatu team on Oscars stage. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X