ವಿಶ್ವದ ನಂ.1 ಚಿತ್ರನಿರ್ದೇಶಕನ ಮಗಳು ಈಗ ಪಾರ್ನ್ ಸ್ಟಾರ್
ಜುರಾಸಿಕ್ ಪಾರ್ಕ್, ಸೇವಿಂಗ್ ಪ್ರೈವೇಟ್ ರ್ಯಾನ್, ಜಾವ್ಸ್, ಎಕ್ಸ್ಟಾ ಟೆರಿಟರಿ, ಅಡ್ವೇಂಚರ್ ಆಫ್ ಟಿಂಟಿನ್ ಸೇರಿದಂತೆ ಇನ್ನೂ ಹಲವು ಜಗದ್ವಿಖ್ಯಾತ ಚಲನಚಿತ್ರಗಳನ್ನು ನಿರ್ದೇಶಿಸಿ ನಂ 1 ನಿರ್ದೇಶಕ ಎನಿಸಿಕೊಂಡಿರುವ ಸ್ಟೀವನ್ ಸ್ಪೀಲ್ಬರ್ಗ್ ಮಗಳು ಈಗ ಪಾರ್ನ್ ಸ್ಟಾರ್ ಆಗಲಿದ್ದಾಳೆ.
ಹೌದು, ಸ್ಟೀವನ್ ಸ್ಪೀಲ್ಬರ್ಗ್ ಮಗಳು ಮಿಕೇಲಾ ಪಾರ್ನ್ ಸ್ಟಾರ್ ಆಗಿ ಚಿತ್ರರಂಗ ಪ್ರವೇಶ ಮಾಡಲಿದ್ದಾಳೆ. ಅಷ್ಟೆ ಅಲ್ಲದೆ ಸ್ಟ್ರಿಪರ್ ಬಾರ್ ನಲ್ಲಿ ಸ್ಟ್ರಿಪರ್ ಗರ್ಲ್ (ಬೆತ್ತಲೆ ಕುಣಿಯುವ) ಆಗಿಯೂ ಕೆಲಸ ಮಾಡಲಿದ್ದಾಳೆ. ಹೀಗೆಂದು ಸ್ವತಃ ಆಕೆಯ ಘೋಷಣೆ ಮಾಡಿದ್ದಾಳೆ.
ಮಿಕೇಲಾ ಈಗಾಗಲೇ ತನ್ನ ಕೆಲವು ಸಣ್ಣ ಪಾರ್ನ್ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾಗಿ ಸಂದರ್ಶನದಲ್ಲಿ ಹೇಳಿದ್ದು, ಪಾರ್ನ್ ಉದ್ಯಮದಲ್ಲಿಯೇ ತೊಡಗುವುದಾಗಿ ಆಕೆ ಹೇಳಿದ್ದಾಳೆ. ಜೊತೆಗೆ ಸ್ಟ್ರಿಪರ್ ಆಗಿಯೂ ಕೆಲಸ ಮಾಡುವ ಇರಾದೆ ವ್ಯಕ್ತಪಡಿಸಿರುವ ಮಿಕೇಲಾ 'ಸ್ಟ್ರಿಪರ್ ಲೈಸೆನ್ಸ್'ಗಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.

ಈ ಹಿಂದೆ ಮಿಕೇಲಾ ತಮ್ಮ ಕೆಲವು ವಿಡಿಯೋಗಳನ್ನು ಪಾರ್ನ್ ವೆಬ್‌ಸೈಟ್‌ಗಳಿಗೆ 'ಶುಗರ್ ಸ್ಟಾರ್' ಹೆಸರಿನಲ್ಲಿ ಅಪ್‌ಲೋಡ್ ಮಾಡಿದ್ದರಂತೆ. ಆದರೆ ನಂತರ ಅದನ್ನು ಹಿಂಪಡೆದಿದ್ದಾರೆ. 'ಸೆಕ್ಸ್ ವರ್ಕರ್' ಪರವಾನಗಿ ಬಂದ ನಂತರ ಮತ್ತೆ ವಿಡಿಯೋಗಳನ್ನು ಅಪ್‌ಲೋಡ್ ಮಾಡುವುದಾಗಿ ಹೇಳಿದ್ದಾರೆ. ಆಗಲೂ 'ಶುಗರ್ ಸ್ಟಾರ್' ಹೆಸರನ್ನೇ ಉಳಿಸಿಕೊಳ್ಳುವುದಾಗಿ ಹೇಳಿದ್ದಾರೆ.
ಈ ವಿಷಯವನ್ನು ತಮ್ಮ ಪೋಷಕರಾದ ಸ್ವೀವನ್ ಸ್ಪೀಲ್ಬರ್ಗ್ ಗೆ ತಿಳಿಸಿದ್ದಾಗಿ ಮಿಕೇಲಾ ಹೇಳಿದ್ದು, 'ನಾನು ಅವರಿಗೆ ವಿಡಿಯೋ ಕರೆ ಮಾಡಿ ವಿಷಯ ತಿಳಿಸಿದೆ. ಅವರಿಗೆ ನನ್ನ ಸುರಕ್ಷತೆಯೇ ಮೊದಲ ಆದ್ಯತೆ ಆಗಿತ್ತು. ಅವರು ನನ್ನ ನಿರ್ಧಾರದಿಂದ ಬೇಸರಗೊಳ್ಳಲಿಲ್ಲ, ಬದಲಿಗೆ ಅವರಿಗೆ ಕುತೂಹಲ ಇದೆ' ಎಂದು ಹೇಳಿದ್ದಾರೆ.
23 ವರ್ಷದ ಮಿಕೇಲಾ ಳು ಮಗುವಿದ್ದಾಗ ಆಕೆಯನ್ನು ಸ್ಟೀವನ್ ಸ್ಪೀಲ್ಬರ್ಗ್ ಮತ್ತು ಪತ್ನಿ ಕೇಟ್ ಕಾಪ್ಶಾ ದತ್ತು ಪಡೆದಿದ್ದರು. ಮಿಕೇಲಾ ಸೇರಿ ಈ ದಂಪತಿಗೆ ಏಳು ಜನ ಮಕ್ಕಳಿದ್ದಾರೆ.


Click it and Unblock the Notifications











