»   » ಕಿಚ್ಚನ ಹಾಲಿವುಡ್ ಚಿತ್ರದ ಹೊಸ ಲುಕ್ ಬಿಡುಗಡೆ

ಕಿಚ್ಚನ ಹಾಲಿವುಡ್ ಚಿತ್ರದ ಹೊಸ ಲುಕ್ ಬಿಡುಗಡೆ

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ರೈಸನ್' ಚಿತ್ರದ ಮತ್ತೆರೆಡು ಲುಕ್ ರಿಲೀಸ್ ಆಗಿದೆ. ಸದ್ಯ, ಕಾಲಿವುಡ್ ,ಟಾಲಿವುಡ್, ಬಾಲಿವುಡ್ ನಲ್ಲಿ ಮಿಂಚುತ್ತಿರುವ ಸುದೀಪ್, 'ರೈಸನ್' ಚಿತ್ರದ ಮೂಲಕ ಹಾಲಿವುಡ್ ನಲ್ಲಿ ತಮ್ಮ ಹವಾ ಶುರು ಮಾಡಿದ್ದಾರೆ. ಸಿಂಗಲ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಕುತೂಹಲ ಮೂಡಿಸಿದ್ದ ನಿರ್ದೇಶಕ ಎಡ್ಡಿ ಆರ್ಯ ಈಗ ಹೊಸ ಪೋಟೋಗಳನ್ನ ಬಿಡುಗಡೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ರೈಸನ್ ಚಿತ್ರದ ಫೋಟೋಶೂಟ್ ಮಾಡಿದ್ದ ಹಾಲಿವುಡ್ ತಂಡ ಕೆಲವೇ ದಿನಗಳಲ್ಲಿ ಚಿತ್ರದ ಶೂಟಿಂಗ್ ಶುರು ಮಾಡಲಿದೆ. ಸುದೀಪ್ ಈ ಚಿತ್ರದಲ್ಲಿ ಅಮೇರಿಕಾದ ಕಮಾಂಡೋ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.

Sudeep Hollywood movie Risen new Poster

'ರೈಸನ್' ಸಿನಿಮಾವನ್ನ ಆಸ್ಟ್ರೇಲಿಯಾದಲ್ಲಿ ಚಿತ್ರೀಕರಣ ಮಾಡಲು ಸಿದ್ದತೆ ನಡೆಸಲಾಗಿದೆ. ಸದ್ಯ, ಎರಡನೇ ಲುಕ್ ರಿವಿಲ್ ಮಾಡಿರುವ ಎಡ್ಡಿ ಆರ್ಯ ಮತ್ತ ತಂಡ ಕೆಲವೇ ದಿನಗಳಲ್ಲಿ ಚಿತ್ರೀಕರಣ ಶುರು ಮಾಡುವ ಸೂಚನೆ ನೀಡಿದ್ದಾರೆ.

Sudeep Hollywood movie Risen new Poster

ಬಿಡುಗಡೆಯಾಗಿರುವ ಎರಡು ಪೋಟೋಗಳಲ್ಲಿ ಕಿಚ್ಚ ಕಮಾಂಡೋ ಗೆಟಪ್ ನಲ್ಲಿ ಮಿಂಚುತಿದ್ದಾರೆ. ಜೊತೆಗೆ ಮತ್ತೊಂದು ಫೋಟೋದಲ್ಲಿ ಗನ್ ಹಿಡಿದ್ದಿದ್ದಾರೆ. ಸುದೀಪ್ 'ದಿ ವಿಲನ್' ಸಿನಿಮಾದ ಚಿತ್ರೀಕರಣ ಮುಗಿಸಿದ ನಂತರ ರೈಸನ್ ಸಿನಿಮಾದಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ. ಚಿತ್ರವನ್ನ ನಾಗೇಂದ್ರ ಜಯರಾಮ್ ನಿರ್ಮಾಣ ಮಾಡ್ತಿದ್ದಾರೆ.

Sudeep Hollywood movie Risen new Poster
English summary
Kannada actor Kichcha Sudeep starring Hollywood Risen movie new Poster released, Sudeep is playing the role of commando in this movie, Eddie Arya directing the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X