For Quick Alerts
  ALLOW NOTIFICATIONS  
  For Daily Alerts

  ಗಂಡನಿಗೆ ವಿಚ್ಛೇದನ...ಬಾಡಿಗಾರ್ಡ್ ಜೊತೆ ರೋಮ್ಯಾನ್ಸ್

  By ರವಿಕಿಶೋರ್
  |

  ಸೂಪರ್ ಮಾಡೆಲ್ ಎಂದೇ ಖ್ಯಾತವಾಗಿರುವ ಹಾಲಿವುಡ್ ಸ್ಟಾರ್ ಹೀರೋಯಿನ್ ಹೈಡಿ ಕ್ಲೂಮ್ ತನ್ನ ರಜಾ ದಿನಗಳನ್ನು ತನ್ನ ಬಾಡಿಗಾರ್ಡ್ ಜೊತೆ ಹಾಯಾಗಿ ಕಳೆಯುತ್ತಾ ಡೇಟಿಂಗ್ ಮಾಡುತ್ತಿದ್ದಾಳೆ ಎಂಬ ಸುದ್ದಿ ಹಾಲಿವುಡ್ ನಲ್ಲಿ ಗಿರಗಿಟ್ಲೆ ಹೊಡೆಯುತ್ತಿದೆ.

  ಮೂವತ್ತೊಂಬತ್ತರ ಹರೆಯದ ಹೈಡಿ ಕ್ಲೂಮ್ ಕ್ಯಾಟ್ ವಾಕ್ ರಾಣಿ ಎಂದೇ ಖ್ಯಾತ. ಕಳೆದ ನಾಲ್ಕು ವರ್ಷಗಳಿಂದ ತನಗೆ ಬಾಡಿಗಾರ್ಡ್ ಅಗಿ ಕೆಲಸ ಮಾಡುತ್ತಿರುವ ಮಾರ್ಟಿನ್ ಕ್ರಿಸ್ಟಿನ್ ಜೊತೆ ಸೇರಿ ಇಟಲಿ, ಸಾರ್ಡಿನಿಯಾ ಮತ್ತಿತರ ಪ್ರದೇಶಗಳಲ್ಲಿ ಸುತ್ತಾಡುತ್ತಾ ಬಾಡಿಗಾರ್ಡ್ ಗೆ ಪರವಶಳಾಗಿದ್ದಾರೆ.

  ಏಳು ವರ್ಷಗಳ ಕಾಲ ಕಲೆತು ಸಂಸಾರ ಮಾಡಿದ ತರುವಾಯ ತನ್ನ ಪತಿ, ಖ್ಯಾತ ಗಾಯಕ ಸೀಲ್ ಗೆ ಟೂ ಬಿಟ್ಟಿದ್ದಳು. ಜನವರಿಯಲ್ಲಿ ಹೈಡಿ ಕ್ಲೂಮ್ ವಿವಾದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿ ಇನ್ನೂ ಇತ್ಯರ್ಥವಾಗಿಲ್ಲ. ಆಗಲೇ ಬಾಡಿಗಾರ್ಡ್ ಜೊತೆಗೆ ಈಕೆಯ ಡ್ಯುಯೆಟ್ ಶುರುವಾಗಿದೆ.

  ಈಕೆ ನಾಲ್ಕು ಮಕ್ಕಳ ತಾಯಿ ಬೇರೆ. ತನ್ನ ಮಕ್ಕಳು ತನಗೇ ಸೇರಬೇಕು ಎಂದು ಕೋರ್ಟ್ ನಲ್ಲೂ ಹೈದಿ ವಾದಿಸಿದ್ದರು. ಇವರಿಬ್ಬರಿಗೂ ಇನ್ನೇನು ವಿವಾಹ ವಿಚ್ಛೇದನ ಸಿಗಲಿದೆ. ಅಷ್ಟರಲ್ಲೇ ಈಕೆ ತನ್ನ ಬಾಡಿಗಾರ್ಡ್ ಜೊತೆ ಡ್ಯುಯೆಟ್ ಆಡುತ್ತಿದ್ದಾಳೆ. ನಾಲ್ಕು ಮಕ್ಕಳ ತಾಯಿಯಾಗಿದ್ದರೂ ಈಕೆಗೆ ಇನ್ನೂ ಬುದ್ಧಿಬಂದಂತಿಲ್ಲ ಎಂದು ಜನ ಆಡಿಕೊಳ್ಳುತ್ತಿದ್ದಾರೆ.

  ಈಗಾಗಲೆ ಈಕೆ ಇಬ್ಬರಿಗೆ ಸೋಡಾ ಚೀಟಿ ಕೊಟ್ಟಿದ್ದಾಳೆ. ಮೊದಲ ಪತಿಯೊಂದಿಗಿನ ಸಂಬಂಧದ ಕುರುಹಾಗಿ ಒಂದು ಮಗು ಇದೆ. ಎರಡನೇ ಬಾರಿ ಗರ್ಭಿಣಿಯಾದಾಗ ಗಾಯಕ ಸೀಲ್ ಜೊತೆ ಸಂಬಂಧ ಇಟ್ಟುಕೊಂಡಿದ್ದಳು. ಈಗ ವಿವಾಹ ವಿಚ್ಛೇನದ ಮೂಲಕ ಬೇರ್ಪಡಲು ಮುಂದಾಗಿದ್ದಾರೆ.

  English summary
  Supermodel Heidi Klum is said to be dating her bodyguard after she was spotted getting close to him during a vacation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X