ಭೂಲೋಕದಲ್ಲೇ ಅತ್ಯಂತ ಸೆಕ್ಸಿ ಮಹಿಳೆ ಮಿರಂಡಾ ಕೆರ್

ಇಪ್ಪತ್ತೊಂಬತ್ತರ ಹರೆಯದ ಆಸ್ಟ್ರೇಲಿಯಾದ ಈ ಚೆಲುವೆ ಇಸ್ಕ್ವೇರ್ ನಿಯತಕಾಲಿಕೆಗಾಗಿ ತಮ್ಮ ದೇಹದ ಸೌಂದರ್ಯವನ್ನು ಅನಾವರಣಗೊಳಿಸಿದ್ದರು. ಈಕೆಯ ಅರೆಬೆತ್ತಲೆ ಫೋಟೋಗಳನ್ನು ಇಸ್ಕ್ವೇರ್ ತಾಜಾ ಸಂಚಿಕೆ ಹೊತ್ತು ತಂದಿದೆ.
ಈಗಾಗಲೆ ಒಂದು ಮಗುವಿನ ತಾಯಿಯೂ ಆಗಿರುವ ಈಕೆ ತಮ್ಮ ಸೌಂದರ್ಯವನ್ನು ಮಾತ್ರ ನಾಜೂಕಾಗಿ ಕಾಪಾಡಿಕೊಂಡು ಬಂದಿದ್ದಾರೆ. ಮಗುವಾದ ಬಳಿಕ ತೂಕ ಒಂದಷ್ಟು ಏರಿಕೆಯಾದರೂ ಸೌಂದರ್ಯದಲ್ಲಿ ಮಾತ್ರ ಗುಲಗಂಜಿಯಷ್ಟೂ ಕಡಿಮೆಯಾಗದೆ ಇರುವುದು ವಿಶೇಷ.
ಈಗಲೂ ಈಕೆಯ ದೇಹಕ್ಕೆ ಬಿಕಿನಿ ಸರಾಗವಾಗಿ ಹೊಂದಾಣಿಕೆಯಾಗುತ್ತದೆ ಎಂದರೆ ನೀವೇ ಊಹಿಸಿ. ಈಕೆಯ ದೇಹ ಎಷ್ಟು ನಾಜೂಕಾಗಿರಬಹುದು ಎಂದು. ಫೋರ್ಬ್ಸ್ ಪ್ರಕಾರ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ತಾರೆಗಳ ಪಟ್ಟಿಯಲ್ಲಿ ಮಿರಾಂಡಾ ಕೇರ್ ಏಳನೇ ಸ್ಥಾನದಲ್ಲಿದ್ದಾರೆ.
ಈಕೆ ಈ ಹಿಂದೆ ಜಿಕ್ಯು, ಆಸ್ಟ್ರೇಲಿಯನ್ ರೋಲಿಂಗ್ ಸ್ಟೋನ್, ಡಬ್ಲ್ಯು ಮ್ಯಾಗಜಿನ್ ಎಂಬ ನಿಯತಕಾಲಿಕೆಗೆ ಹಾಗೂ 2010ರ ಪಿರೇಲ್ಲಿ ಕ್ಯಾಲೆಂಡರ್ ಗೆ ತಮ್ಮ ದಂತದ ಮೈಯನ್ನು ಪ್ರದರ್ಶಿಸಿದ್ದರು. ಈ ಹಿಂದೊಮ್ಮೆ ವಜ್ರಖಚಿತ ಫುಶ್ ಅಪ್ ಬ್ರಾನಲ್ಲಿ ಕಂಗೊಳಿಸಿದ್ದರು. (ಏಜೆನ್ಸೀಸ್)


Click it and Unblock the Notifications











