For Quick Alerts
  ALLOW NOTIFICATIONS  
  For Daily Alerts

  ವಿಮಾನ ದುರಂತ: 'ಟಾರ್ಜನ್' ಖ್ಯಾತಿಯ ನಟ ಜೋ ಲಾರಾ, ಪತ್ನಿ ಸೇರಿ 7 ಮಂದಿ ದುರ್ಮರಣ

  |

  ಹಾಲಿವುಡ್‌ನ ಅನೇಕ ಸಿನಿಮಾಗಳು ಮತ್ತು ಅಮೆರಿಕದ ಕಿರುತೆರೆ ಮೂಲಕ ಖ್ಯಾತಿಗಳಿಸಿದ್ದ ನಟ ಜೋ ಲಾರಾ ವಿಮಾನ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಈ ದುರ್ಘಟನೆಯಲ್ಲಿ ಜೋ ಲಾರಾ ಮತ್ತು ಪತ್ನಿ ಸೇರಿದಂತೆ ಒಟ್ಟು 7 ಮಂದಿ ದುರ್ಮರಣ ಹೊಂದಿದ್ದಾರೆ.

  ಅಮೆರಿಕದ ನ್ಯಾಶ್ವಿಲ್ಲೆ ನಗರದ ಸರೋವರ ಬಳಿ ಈ ಘಟನೆ ಸಂಭವಿಸಿದೆ. ಬ್ಯುಸಿನೆಸ್ ಜೆಟ್‌ನಲ್ಲಿ ಹೊರಟಿದ್ದ ಕೆಲವೇ ಕ್ಷಣದಲ್ಲಿ ಅಪಘಾತಕ್ಕೀಡಾಗಿದೆ. ಪ್ಲೋರಿಡಾದ ಪಾಮ್ ಬೀಚ್‌ನ ಸ್ಮಿರ್ನಾದ ಟೆನ್ನೆಸೀ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಸ್ವಲ್ಪ ಸಮಯದಲ್ಲೇ ಪ್ರಿಸ್ಟ್ ಸರೋವರದಲ್ಲಿ ಪತನಗೊಂಡಿದೆ.

  ಶನಿವಾರ ಈ ಘಟನೆ ನಡೆದಿದ್ದು, ತಕ್ಷಣ ರಕ್ಷಣ ತಂಡ ಸ್ಥಳಕ್ಕೆ ಧಾವಿಸಿದೆ. ಆದರೆ 7 ಪ್ರಯಾಣಿಕರು ಬದುಕುಳಿಯಲಿಲ್ಲ ಎಂದು ವರದಿಯಾಗಿದೆ. ಶನಿವಾರ ದಿಂದ ಪ್ರಾರಂಭವಾದ ಶೋಧ ಕಾರ್ಯ ಇಂದೂ ಕೂಡ ಮುಂದುವರೆದಿದೆ ಎಂದು ಆರ್ ಸಿ ಎಫ್ ಆರ್ ಕಮಾಂಡರ್ ಕ್ಯಾಪ್ಟನ್ ಜೋಶುವಾ ಸ್ಯಾಂಡರ್ಸ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

  ನ್ಯಾಷನಲ್ ಕ್ರಶ್ ರಶ್ಮಿಕಾಗೆ ಪ್ರಭಾಸ್ ಮೇಲೆ ಕ್ರಶ್ | Filmibeat Kannada

  ವಿಮಾನದ ಹಲವಾರು ತುಂಡುಗಳು ಮತ್ತು ಮಾನವ ಅವಶೇಷಗಳು ರಕ್ಷಣಾ ಕಾರ್ಯಚರಣೆ ವೇಳೆ ಪತ್ತೆಯಾಗಿದೆ. ಲಾರಾ, ಅಮೆರಿಕದ ಖ್ಯಾತ ಟಿವಿ ಶೋ ಟಾರ್ಜನ್: ದಿ ಎಪಿಕ್ ಅಡ್ವೆಂಚರ್‌ನಲ್ಲಿ ಟಾರ್ಜನ್ ಪಾತ್ರದಲ್ಲಿ ನಟಿಸಿದ್ದರು. 2018ರಲ್ಲಿ ಡಯಟಿಶಿಯನ್ ಗ್ವೆನ್ ಶ್ಯಾಂಬ್ಲಿನ್ ಜೊತೆ ಲಾರಾ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಜೋ ಲಾರಾ ನಿಧನಕ್ಕೆ ಅಭಿಮಾನಿಗಳು, ಸ್ನೇಹಿತರು ಸಂತಾಪ ಸೂಚಿಸುತ್ತಿದ್ದಾರೆ.

  English summary
  Tarzan fame Actor Joe lara among 7 others dead in plane crash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X