Oscars 2023: ಅದ್ಧೂರಿಯಾಗಿ ಕಾರ್ಯಕ್ರಮ ಆರಂಭ.. 'ನಾಟು ನಾಟು' ಆರ್ಭಟ ಜೋರು
ವಿಶ್ವ ಸಿನಿಜಗತ್ತು ಕಾಯುತ್ತಿದ್ದ ಆ ಗಳಿಗೆ ಬಂದಿದೆ. ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಶುರುವಾಗಿದೆ. ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ತಾರಾಲೋಕವೇ ಧರೆಗಿಳಿದಿದೆ. ಅಕಾಡೆಮಿ ಅವಾರ್ಡ್‌ಗೆ ನಾಮಿನೇಟ್ ಆಗಿರುವ ಕಲಾವಿದರು, ತಂತ್ರಜ್ಞರು ಫ್ಯಾಮಿಲಿ ಸಮೇತ ಸಮಾರಂಭ ನಡೆಯುವ ಜಾಗ ಸೇರಿಕೊಂಡಿದ್ದಾರೆ. ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ 5.30ಕ್ಕೆ ಕಾರ್ಯಕ್ರಮ ಅರಂಭವಾಗಿದೆ.
ಭಾರತದಿಂದ ಆಸ್ಕರ್‌ಗೆ ನಾಮಿನೇಟ್ ಆಗಿರುವ 'RRR' ಸಿನಿಮಾ ತಂಡ ಹಾಗೂ 'ಆಲ್ ದಟ್ ಬ್ರೀಥ್' ಸಾಕ್ಷ್ಯಚಿತ್ರ, 'ದಿ ಎಲಿಫೆಂಟ್ ವಿಸ್ಪರ್ಸ್' ಕಿರುಚಿತ್ರ ತಂಡದ ಸದಸ್ಯರು ಈಗಾಗಲೇ ಡಾಲ್ಬಿ ಥಿಯೇಟರ್ ಸೇರಿಕೊಂಡಿದ್ದಾರೆ. ಕಳೆದೊಂದು ವರ್ಷದಿಂದ ಇಡೀ ಜಗತ್ತನ್ನು ಕುಣಿಸುತ್ತಿರುವ 'ನಾಟು ನಾಟು' ಸಾಂಗ್ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಪಡೆಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇನ್ನು ವೇದಿಕೆಯಲ್ಲಿ ಈ ಸಾಂಗ್ ಲೈವ್ ಪರ್ಫಾರ್ಮೆನ್ಸ್ ಕೂಡ ನಡೆಯಲಿದೆ.

'ನಾಟು ನಾಟು' ಸಾಂಗ್ ಹಾಡಿದ್ದ ರಾಹುಲ್ ಸಿಪ್ಲಿಗಿಂಜ್ ಹಾಗೂ ಕಾಲಭೈರವ ಮತ್ತೆ ಹಾಡನ್ನು ಹಾಡಲಿದ್ದು ಅಮೆರಿಕಾ ನಟಿ ಲಾರೆನ್ ಗಾಟ್ಲಿಬ್ ಡ್ಯಾನ್ಸ್ ಮಾಡಲಿದ್ದಾರೆ. ತಾರಕ್, ಚರಣ್ ಕೂಡ ಹೆಜ್ಜೆ ಹಾಕಿದರೆ ಅಚ್ಚರಿ ಪಡಬೇಕಿಲ್ಲ. ಎಂ. ಎಂ ಕೀರವಾಣಿ ಸಂಗೀತದ ಈ ಹಾಡಿಗೆ ಚಂದ್ರಬೋಸ್ ಸಾಹಿತ್ಯ ಗೀಚಿದ್ದಾರೆ. ಪ್ರೇಮ್ ರಕ್ಷಿತ್ ಮಾಸ್ಟರ್ ಕೊರಿಯೋಗ್ರಫಿ ಇದ್ದು ಚರಣ್, ತಾರಕ್ ಡ್ಯಾನ್ಸ್ ಸಿನಿರಸಿಕರ ಗಮನ ಸೆಳೆದಿತ್ತು.

'ನಾಟು ನಾಟು' ಸಾಂಗ್ ಈಗಾಗಲೇ ಗೋಲ್ಡನ್ ಗ್ಲೋಬ್ ಹಾಗೂ ಕ್ರಿಟಿಕ್ಸ್ ಛಾಯ್ಸ್ ಅವಾರ್ಡ್ ಗೆದ್ದುಕೊಂಡಿದೆ. ಹಾಗಾಗಿ ಆಸ್ಕರ್ ಕೂಡ ಸಿಗುತ್ತದೆ ಎನ್ನಲಾಗ್ತಿದೆ. ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ತಾರಕ್ ಕಪ್ಪು ಬಣ್ಣದ ಬಂದ್ಗಲಾದಲ್ಲಿ ಮಿಂಚುತ್ತಿದ್ದಾರೆ. ಭುಜದ ಮೇಲೆ ಹುಲಿಯ ಗುರುತು ಇರುವಂತೆ ಗೌರವ್ ಗುಪ್ತಾ ಈ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ರಾಮ್‌ಚರಣ್ ಕೂಡ ಬ್ಲ್ಯಾಕ್ ಕಲರ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚರಣ್‌ಗೆ ಪತ್ನಿ ಉಪಾಸನಾ ಸಾಥ್ ಕೊಟ್ಟಿದ್ದಾರೆ.
ಇನ್ನು ಇದೇ ಮೊದಲ ಬಾರಿಗೆ ಆಸ್ಕರ್ ವೇದಿಕೆಯಲ್ಲಿ ಒಂದು ಬದಲಾವಣೆ ಆಗಿದೆ. ಸಾಮಾನ್ಯವಾಗಿ ಆಸ್ಕರ್ ವೇದಿಕೆಯಲ್ಲಿ ಭಾಗವಹಿಸುವವರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಿದ್ದರು. ಈ ಬಾರಿ ಶಾಂಪೇನ್ ಬಣ್ಣದ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ. ಕಾರ್ಯಕ್ರಮದ ನಿರೂಪಕರಲ್ಲಿ ಒಬ್ಬರಾಗಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೂಡ ಬ್ಲ್ಯಾಕ್ ಕಲರ್ ಗೌನ್‌ನಲ್ಲಿ ಮಿಂಚುತ್ತಿದ್ದಾರೆ.


Click it and Unblock the Notifications











