twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ಕಾಲದಲ್ಲೂ ಸಾವಿರಾರು ಕೋಟಿ ಬಾಚಿದ ಸಿನಿಮಾ!

    |

    ಕೊರೊನಾ ಕಾಲದಲ್ಲಿ ವಿಶ್ವದಾದ್ಯಂತ ಮನೊರಂಜನಾ ಉದ್ಯಮ ತೀವ್ರವಾಗಿ ನೆಲಕಚ್ಚಿತ್ತು, ಚಿತ್ರಮಂದಿರಗಳಂತೂ ಬಾಗಿಲು ಹಾಕಿ ನಷ್ಟಲೆಕ್ಕಾ ಹಾಕುತ್ತಾ ಕೂತು ಬಿಟ್ಟಿದ್ದವು. ಅಂತರರಾಷ್ಟ್ರೀಯ ಮಲ್ಟಿಫ್ಲೆಕ್ಸ್ ದೈತ್ಯ ಐಮ್ಯಾಕ್ಸ್‌ ಸಹ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.

    Recommended Video

    Medical ಹಾಗು Industrial ದೃಷ್ಟಿಯಿಂದ Ganja ಕಾನೂನು ಬದ್ಧವಾಗಬೇಕು - Rakesh Adiga | Filmibeat Kannada

    ಆದರೆ ಸಂಕಷ್ಟದಲ್ಲಿದ್ದ ಐಮ್ಯಾಕ್ಸ್‌ ಗೆ ಜೀವಜಲ ತುಂಬಿದ್ದು ಕೇವಲ ಒಂದೇ ಒಂದು ಸಿನಿಮಾ. ಹೌದು, ಒಂದೇ ಸಿನಿಮಾದಿಂದಾಗಿ, ಇಷ್ಟು ದಿನ ಅನುಭವಿಸಿದ ನಷ್ಟದಿಂದ ತುಸು ಚೇತರಿಸಿಕೊಂಡಿದೆ ಐಮ್ಯಾಕ್ಸ್.

    ಬೆಸ್ಟ್‌ ನಿರ್ದೇಶಕನ ಸಿನಿಮಾ ನೋಡಲು ಮುಸುಕು ಧರಿಸಿ ಚಿತ್ರಮಂದಿರಕ್ಕೆ ಬಂದ ಟಾಮ್ ಕ್ರೂಸ್ಬೆಸ್ಟ್‌ ನಿರ್ದೇಶಕನ ಸಿನಿಮಾ ನೋಡಲು ಮುಸುಕು ಧರಿಸಿ ಚಿತ್ರಮಂದಿರಕ್ಕೆ ಬಂದ ಟಾಮ್ ಕ್ರೂಸ್

    ಐಮ್ಯಾಕ್ಸ್ ಗೆ ಜೀವಜಲ ನೀಡಿದ ಸಿನಿಮಾ 'ಟೆನೆಟ್'. ಕ್ರಿಸ್ಟೋಫರ್ ನೋಲನ್ ಎಂಬ ಅತ್ಯಂತ ಪ್ರತಿಭಾಶಾಲಿ ನಿರ್ದೇಶಕ ನಿರ್ದೇಶಿಸಿದ ಈ ಸಿನಿಮಾ, ಕೊರೊನಾ ಕಾಲದಲ್ಲಿಯೂ ಬಾಕ್ಸ್ ಆಫೀಸ್ ಅನ್ನು ದೋಚಿದೆ!

    ವಿಶ್ವದಾದ್ಯಂತ ಈ ವರೆಗೆ 1100 ಕೋಟಿ ಗಳಿಕೆ

    ವಿಶ್ವದಾದ್ಯಂತ ಈ ವರೆಗೆ 1100 ಕೋಟಿ ಗಳಿಕೆ

    ಅಮೆರಿಕದಲ್ಲಿ ಸೆಪ್ಟೆಂಬರ್ 3 ಕ್ಕೆ, ಇಂಗ್ಲೆಂಡ್‌ನಲ್ಲಿ ಆಗಸ್ಟ್ 27 ಎಂದು ಬಿಡುಗಡೆ ಆದ 'ಟೆನೆಟ್' ಸಿನಿಮಾ ಈವರೆಗೆ ವಿಶ್ವದಾದ್ಯಂತ 1100 ಕೋಟಿಗೂ ಹೆಚ್ಚು ಹಣ ಗಳಿಸಿದೆ.

    ಚೀನಾದಲ್ಲಿ ದೊಡ್ಡ ಗಳಿಕೆ ಮಾಡಿದ ಟೆನೆಟ್

    ಚೀನಾದಲ್ಲಿ ದೊಡ್ಡ ಗಳಿಕೆ ಮಾಡಿದ ಟೆನೆಟ್

    ಅಮೆರಿಕ ಮತ್ತು ಕೆನಡಾದಲ್ಲಿ ಕೇವಲ ನಾಲ್ಕು ದಿನದಲ್ಲಿ 146 ಕೋಟಿ ಹಣ ಗಳಿಸಿದೆ 'ಟೆನೆಟ್' ಸಿನಿಮಾ. ಚೀನಾದಲ್ಲಿ 220 ಕೋಟಿ, ಇಂಗ್ಲೆಂಡ್‌ನಲ್ಲಿ 95 ಕೋಟಿ, ಫ್ರಾನ್ಸ್‌ನಲ್ಲಿ 80 ಕೋಟಿ, ಜರ್ಮನಿಯಲ್ಲಿ 63 ಕೋಟಿ, ಕೊರಿಯಾದಲ್ಲಿ 60 ಕೋಟಿ ಗಳಿಸಿದೆ ಈ ವರೆಗೆ. ಈ ಎಲ್ಲಾ ಗಳಿಕೆ ಕೇವಲ ಐಮ್ಯಾಕ್ಸ್‌ ಚಿತ್ರಮಂದಿರಗಳಿಂದ ಮಾತ್ರವೇ ಬಂದಿದೆ! ಬೇರೆ ಚಿತ್ರಮಂದಿರಗಳಿಂದ ಆದ ಗಳಿಕೆ ಲೆಕ್ಕಾಚಾರ ಇನ್ನಷ್ಟೆ ಬರಬೇಕಿದೆ.

    'ಬ್ಲ್ಯಾಕ್ ಪ್ಯಾಂಥರ್' ನಾಯಕ ನಟ ಚಾಡ್ವಿಕ್ ಬೋಸ್‌ಮನ್ ನಿಧನ'ಬ್ಲ್ಯಾಕ್ ಪ್ಯಾಂಥರ್' ನಾಯಕ ನಟ ಚಾಡ್ವಿಕ್ ಬೋಸ್‌ಮನ್ ನಿಧನ

    ಚಿತ್ರಮಂದಿರಗಳಿಗೆ ಎಳೆತರುತ್ತಿದೆ ಸಿನಿಮಾ

    ಚಿತ್ರಮಂದಿರಗಳಿಗೆ ಎಳೆತರುತ್ತಿದೆ ಸಿನಿಮಾ

    ಕೊರೊನಾ ಕಾರಣದಿಂದ ಜನರು ಚಿತ್ರಮಂದಿರಗಳಿಂದ ದೂರ ಈರುವ ಈ ಹೊತ್ತಿನಲ್ಲೂ ಜನರನ್ನು ಚಿತ್ರಮಂದಿರಗಳಿಗೆ ಎಳೆತಂದು, ದಾಖಲೆ ಮೊತ್ತದ ಲಾಭದ ಕಡೆಗೆ ಸಾಗುತ್ತಿದೆ ಕ್ರಿಸ್ಟೋಫರ್ ನೋಲನ್‌ನ ಈ ಸಿನಿಮಾ.

    ಭಾರತದಲ್ಲಿನ್ನೂ ಬಿಡುಗಡೆ ಆಗಿಲ್ಲ ಟೆನೆಟ್

    ಭಾರತದಲ್ಲಿನ್ನೂ ಬಿಡುಗಡೆ ಆಗಿಲ್ಲ ಟೆನೆಟ್

    ಹಾಲಿವುಡ್‌ನ ಅತಿ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಭಾರತದಲ್ಲಿ ಇನ್ನೂ ಟೆನೆಟ್ ಬಿಡುಗಡೆ ಆಗಿಲ್ಲ. ಭಾರತದಲ್ಲಿ ಬಿಡುಗಡೆ ಆದಾಗ ದೊಡ್ಡ ಮೊತ್ತದ ಹಣ ಗಳಿಸಲಿದೆ ಟೆನೆಟ್. ಭಾರತ ಮಾತ್ರವಲ್ಲದೆ ಇನ್ನೂ ಕೆಲವು ದೇಶಗಳಲ್ಲಿ ಟೆನೆಟ್ ಇನ್ನೂ ಬಿಡುಗಡೆ ಆಗಿಲ್ಲ.

    ವಿಶ್ವದಲ್ಲೇ ಅತಿ ಹೆಚ್ಚು ಜನ ನೋಡಿರುವ ಸಿನಿಮಾ ಯಾವುದು? ಟೈಟ್ಯಾನಿಕ್, ಅವತಾರ್ ಅಲ್ಲ!ವಿಶ್ವದಲ್ಲೇ ಅತಿ ಹೆಚ್ಚು ಜನ ನೋಡಿರುವ ಸಿನಿಮಾ ಯಾವುದು? ಟೈಟ್ಯಾನಿಕ್, ಅವತಾರ್ ಅಲ್ಲ!

    English summary
    Christopher Nolan's Tenet movie gross 150 million dollar world wide. It gross 30 million dollar in China only.
    Monday, September 7, 2020, 17:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X