Oscars 2025 ; ಈ ಬಾರಿಯ ಆಸ್ಕರ್ ಮೇಲೆ ವಿವಾದಗಳ ಕಾರ್ಮೋಡ, ಕದ್ದವರಿಗೆ, ನಿಂದಿಸಿದವರಿಗೆ ಸಿಗುತ್ತಾ ಪ್ರಶಸ್ತಿ..?
ಚಲನಚಿತ್ರ ರಂಗದ ಅತ್ಯಂತ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭ ಇನ್ನೇನು ಕೆಲ ನಿಮಿಷಗಳಲ್ಲಿ ಆರಂಭವಾಗಲಿದೆ. ಆಸ್ಕರ್ ಯಾರ ಮುಡಿಗೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ. ಆದರೆ ನಿಮಗೆ ಗೊತ್ತಾ ಈ ಬಾರಿ ಆಸ್ಕರ್ ವಿವಾದಗಳಿಂದ ಕೂಡ ಸುದ್ದಿಯಲ್ಲಿದೆ. ನಾಮ ನಿರ್ದೇಶನಗೊಂಡ ಸಿನಿಮಾ ಮತ್ತು ನಟರು ಈ ಬಾರಿ ವಿವಾದಕ್ಕೀಡಾಗಿದ್ದಾರೆ.
ಹೌದು, ಅಸಲಿಗೆ ಈ ಬಾರಿ ಅತ್ಯುತ್ತಮ ನಾಯಕಿ ಪ್ರಶಸ್ತಿಗೆ ಕರ್ಲಾ ಸೋಫಿಯಾ ಗಾಸ್ಕೋನ್ ನಾಮ ನಿರ್ದೇಶನಗೊಂಡಿದ್ದಾರೆ. ವಿಶೇಷ ಅಂದರೆ ಇವರು ತೃತಿಯ ಲಿಂಗಿ. ಹೀಗಾಗಿ ಪ್ರಪ್ರಥಮ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತ ನಟಿ ಆಸ್ಕರ್ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ಧಾರೆ.

ಆದರೆ ಇದೀಗ ಇದೇ ಕರ್ಲಾ ಸೋಫಿಯಾ ವಿರುದ್ಧ ಆಕ್ರೋಶದ ಅಲೆ ಎದ್ದಿದೆ. ಈ ಹಿಂದೆ ಕರ್ಲಾ ಜನಾಂಗೀಯ ನಿಂದನೆ ಕುರಿತು ಮಾಡಿದ್ದ ಟ್ವಿಟ್‌ಗಳು ಮತ್ತೆ ಮುನ್ನೆಲೆಗೆ ಬಂದಿವೆ. ತಮ್ಮ ಈ ಫೋಸ್ಟ್‌ಗಳಿಗೆ ಅವತ್ತು ವ್ಯಾಪಕ ಠೀಕೆ ವ್ಯಕ್ತವಾದ ಹಿನ್ನೆಲೆ ಕರ್ಲಾ ಕ್ಷಮೆ ಕೇಳಿದ್ದರೂ ಕೂಡ ಜನರ ಕೋಪ ಕಡಿಮೆಯಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ವಿರುದ್ದ ಅನೇಕರು ಈಗ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದರಿಂದ ಕಂಗಾಲಾಗಿರುವ ಕರ್ಲಾ ಇದೇ ಸಮಯದಲ್ಲಿ ಆಸ್ಕರ್‌ನಲ್ಲಿ ತಮ್ಮ ಪ್ರತಿಸ್ಫರ್ಧಿಯಾದ ನಟಿ ಫರ್ನಾಡಾ ಟೊರೆಸ್ ಅವರ ಅಭಿಮಾನಿಗಳು ತಮ್ಮನ್ನು ಬೇಕು ಬೇಕೆಂದೇ ಟ್ರೋಲ್ ಮಾಡುತ್ತಿದ್ದಾರೆ, ನಿಂದಿಸುತ್ತಿದ್ದಾರೆ ಎಂಬ ಆರೋಪವನ್ನು ಮಾಡಿದ್ಧಾರೆ.
ಇನ್ನು ದಿ ಬ್ರೂಟ್ ಲಿಸ್ಟ್ ಚಿತ್ರ ಅತ್ಯುತ್ತಮ ಚಿತ್ರ ವಿಭಾಗದಲ್ಲಿದೆ. ಆದರೆ ಈ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಗಳನ್ನು ಎಐ ಮೂಲಕ ತಿರುಚಲಾಗಿದೆ ಎನ್ನುವ ಆರೋಪವನ್ನು ಮಾಡಲಾಗಿದೆ. ಚಿತ್ರದ ನಿರ್ದೇಶಕ ಬಾರ್ಡೆ ಕೋಬರ್ಟ್ ಈ ಆರೋಪವನ್ನು ತಳ್ಳಿ ಹಾಕಿದ್ದು ನೈಜತೆಯ ಪ್ರತಿಬಿಂಬ ನಮ್ಮ ಚಿತ್ರ ಎಂದು ಹೇಳಿದ್ದಾರೆ. ಯಾವ ಎಐ ತಂತ್ರಜ್ಞಾನವನ್ನು ನಾವು ಬಳಿಸಿಲ್ಲ ಎಂದು ಹೇಳಿದ್ದಾರೆ.
ಇನ್ನು ಆಸ್ಕರ್ ಪ್ರಶಸ್ತಿ ಪಡೆಯಲಿರುವ ಮತ್ತೊಂದು ಚಿತ್ರವೆಂದೇ ಬಿಂಬಿಸಲಾದ ಐ ಆಮ್ ಸ್ಟಿಲ್ ಹಿಯರ್‌ನ ನಾಯಕ ಬ್ರೆಜಿಲ್ ನಟ ಫರ್ನಾಂಡೊ ಟೋರಸ್ ಮೇಲೆ ಕೂಡ ಹಿಂದೊಮ್ಮೆ ಜನಾಂಗೀಯ ನಿಂದನೆ ಮಾಡಿದ ಆರೋಪ ಇದೆ. ಕನ್‌ಕ್ಲೇವ್ ಎಂಬ ಬ್ರಿಟಿಷ್ ಚಿತ್ರ ಕೂಡ ಆಸ್ಕರ್ ರೇಸ್‌ನಲ್ಲಿದ್ದು ಈ ಚಿತ್ರದಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಕ್ಯಾಥೋಲಿಕ್ ಗುಂಪುಗಳು ಪ್ರತಿಭಟನೆಯನ್ನು ನಡೆಸಿವೆ. ಆದರೆ ವಿಮರ್ಷಕರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದು ಆಸ್ಕರ್ ಒಲಿಯುತ್ತಾ ಇಲ್ವಾ ಎನ್ನುವುದನ್ನು ನೋಡಬೇಕಿದೆ.


Click it and Unblock the Notifications











