ಮೂರೇ ದಿನದಲ್ಲಿ 700 ಕೋಟಿ ಗಳಿಸಲಿದೆಯಂತೆ 'ದಿ ಬ್ಯಾಟ್‌ಮ್ಯಾನ್' ಸಿನಿಮಾ!

ಕೋವಿಡ್ ಬಳಿಕ ವಿಶ್ವದಾದ್ಯಂತ ಜನ ಮನರಂಜನೆಗೆ ಹೆಚ್ಚು ಹೆಚ್ಚು ವ್ಯಯಿಸುತ್ತಿದ್ದಾರೆ ಎಂದು ಕೆಲವು ಅಧ್ಯಯನಗಳು ಹೇಳುತ್ತಿವೆ. ಅದಕ್ಕೆ ಸಾಕ್ಷಿ ಎಂಬಂತೆ ಸಿನಿಮಾಗಳು ಗಳಿಕೆಯಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತಿವೆ.

ಭಾರತೀಯ ಸಿನಿಮಾಗಳು ಸಹ ಕೆಲವೇ ದಿನಗಳಲ್ಲಿ ನೂರಿನ್ನೂರು ಕೋಟಿ ಗಳಿಸುತ್ತಿವೆ. 'ಪುಷ್ಪ' ಸಿನಿಮಾ 350 ಕೋಟಿಗೂ ಹೆಚ್ಚು ಹಣವನ್ನು ಕೆಲವೇ ದಿನಗಳಲ್ಲಿ ಗಳಿಸಿತು. ಇದೀಗ ಬಿಡುಗಡೆ ಆಗಿರುವ ಹೊಸ ಹಾಲಿವುಡ್ ಸಿನಿಮಾ ಕೇವಲ ಮೂರು ದಿನದಲ್ಲಿ 700 ಕೋಟಿಗೂ ಹೆಚ್ಚು ಹಣ ಗಳಿಸಲಿದೆ ಎನ್ನಲಾಗುತ್ತಿದೆ.

ಡಿಸಿ ಕಾಮಿಕ್ಸ್‌ನ 'ದಿ ಬ್ಯಾಟ್‌ಮ್ಯಾನ್' ಸಿನಿಮಾ ಮಾರ್ಚ್ 04 ರಂದು ಬಿಡುಗಡೆ ಆಗಲಿದ್ದು, ಬಾಕ್ಸ್ ಆಫೀಸ್ ಧುರೀಣರ ಪ್ರಕಾರ ಈ ಸಿನಿಮಾವು ಮೊದಲ ಮೂರು ದಿನಗಳಲ್ಲಿ ಅರ್ಥಾತ್ ಓಪನಿಂಗ್ ವೀಕೆಂಡ್‌ನಲ್ಲಿ 100 ರಿಂದ 125 ಮಿಲಿಯನ್ ಡಾಲರ್ ಎಂದರೆ ಭಾರತದ ರುಪಾಯಿ ಲೆಕ್ಕದಲ್ಲಿ ಮೂರು ದಿನದಲ್ಲಿ 758 ಕೋಟಿಯಿಂದ 948 ಕೋಟಿಯ ನಡುವೆ ಗಳಿಕೆ ಮಾಡಲಿದೆ!

The Batman Movie Expected To Make More Than 700 Crore Rs In First Weekend

ಇದು ಅಸಾಧ್ಯವೇನಲ್ಲ ಏಕೆಂದರೆ ಕೆಲವು ತಿಂಗಳ ಹಿಂದೆ ಬಿಡುಗಡೆ ಆಗಿದ್ದ ಮಾರ್ವೆಲ್ಸ್‌ನ ಹಾಲಿವುಡ್ ಸಿನಿಮಾ 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಸಿನಿಮಾ ಬಿಡುಗಡೆಗೊಂಡ ವೀಕೆಂಡ್‌ನಲ್ಲಿ ಇದೇ ಮೊತ್ತವನ್ನು ಗಳಿಸಿತ್ತು. 'ಸ್ಪೈಡರ್‌ಮ್ಯಾನ್' ಬಿಡುಗಡೆ ಆದಾಗ ಹಲವು ದೇಶಗಳಲ್ಲಿ ಕೋವಿಡ್ ಮುರನೇ ಅಲೆ ಚಾಲ್ತಿಯಲ್ಲಿತ್ತು. ಅದಾಗ್ಯೂ ಆ ಸಿನಿಮಾ ಬಹಳ ದೊಡ್ಡ ಮೊತ್ತವನ್ನು ಗಳಿಸಿತು.

ಇದೀಗ 'ದಿ ಬ್ಯಾಟ್‌ಮ್ಯಾನ್' ಸಿನಿಮಾ 'ಸ್ಪೈಡರ್‌ಮ್ಯಾನ್: ನೋ ವೇ ಹೋಮ್' ಸಿನಿಮಾಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಮೊದಲ ವೀಕೆಂಡ್‌ನಲ್ಲಿ ಗಳಿಸಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಸಿನಿಮಾದ ಪ್ರೀಮಿಯರ್ ಶೋ ಈಗಾಗಲೇ ಮುಗಿದಿದ್ದು, ಸಿನಿಮಾ ಚೆನ್ನಾಗಿದೆಯೆಂಬ ವಿಮರ್ಶೆಗಳು ಕೇಳಿ ಬಂದಿವೆ. ಅಮೆರಿಕ, ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಮಾರ್ಚ್ 04 ರಂದು ಈ ಸಿನಿಮಾ ಬಿಡುಗಡೆ ಬಿಡುಗಡೆ ಆಗಲಿದೆ.

'ಬ್ಯಾಟ್‌ಮ್ಯಾನ್' ಸರಣಿಯ ಸಿನಿಮಾಗಳು ವಿಶ್ವದಾದ್ಯಂತ ಬಹಳ ಜನಪ್ರಿಯತೆ ಗಳಿಸಿವೆ. ಈವರೆಗೆ 20 ಕ್ಕೂ ಹೆಚ್ಚು 'ಬ್ಯಾಟ್‌ಮ್ಯಾನ್' ಸರಣಿಯ ಸಿನಿಮಾಗಳು ಬಿಡುಗಡೆ ಆಗಿವೆ. ಇದೀಗ ಬಿಡುಗಡೆ ಆಗುತ್ತಿರುವ ಹೊಸ 'ದಿ ಬ್ಯಾಟ್‌ಮ್ಯಾನ್' ಸಿನಿಮಾದಲ್ಲಿ 'ಕ್ಯಾಟ್‌ವುಮನ್' ಸಹ ಇರಲಿದ್ದಾಳೆ. ಮ್ಯಾಟ್ ರಿವೀಸ್ ಹೊಸ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಹೊಸ ಸಿನಿಮಾದಲ್ಲಿ ರಾಬರ್ಟ್ ಪ್ಯಾಟಿನ್‌ಸನ್ ಬ್ರೂಸ್ ವೇನ್ ಹಾಗೂ ಬ್ಯಾಟ್‌ಮ್ಯಾನ್ ಪಾತ್ರದಲ್ಲಿ ನಟಿಸಿದ್ದಾರೆ. ಜೋ ಕ್ರಾವಿಟ್ಜಾ 'ಕ್ಯಾಟ್‌ವುಮನ್' ಪಾತ್ರದಲ್ಲಿ ನಟಿಸಿದ್ದಾರೆ.

More from Filmibeat

English summary
The Batman movie expected to make more than 700 crore rs in its first weekend. Movie is releasing on March 04 world wide.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X