Oscars 2025 ; ದುಬಾರಿ ವಾಚ್ ಧರಿಸಿ ಆಸ್ಕರ್‌ನಲ್ಲಿ ಮಿಂಚಿದ ಸ್ಟಾರ್ಸ್, ಈ ವಾಚ್‌ಗಳ ಬೆಲೆಗೆ ಒಂದು ಮನೆನೇ ಕಟ್ಟಬಹುದು..!
ಚಿತ್ರರಂಗದಲ್ಲಿ ಇರುವವರಿಗೆ ಸಾಮಾನ್ಯವಾಗಿ ಮೂರು ಮತ್ತೊಂದು ಶೋಕಿಗಳಿರುತ್ತವೆ. ಕೆಲವರಿಗೆ ಡ್ರೈವಿಂಗ್ ಹುಚ್ಚು ತಲೆಗೇರಿದರೆ, ಇನ್ನೂ ಕೆಲವರಿಗೆ ದುಬಾರಿ ಬಟ್ಟೆಗಳನ್ನು ಹಾಕಿಕೊಂಡು ಓಡಾಡುವ ಹುಚ್ಚಿರುತ್ತೆ. ಮತ್ತೂ ಕೆಲವರಿಗೆ ದುಬಾರಿ ಬೆಲೆಯ ಪರಿಕರಗಳನ್ನು ಉಪಯೋಗಿಸಿ ಆ ನಂತರ ಎಸೆಯುವ ಹುಚ್ಚಿರುತ್ತದೆ. ಹೀಗೆ ನಾನಾ ಬಗೆಯ ಹುಚ್ಚು ಉರುಫ್ ಶೋಕಿಗೆ ಒಳಗಾಗಿರುವ ಸಿನಿಮಾ ತಾರೆಯರು ದಾರಿಗೊಬ್ಬರಾದರೂ ಸಿಗುತ್ತಲೇ ಇರುತ್ತಾರೆ. ಉದಾಹರಣೆಗೆ ಇಂದು ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನೇ ತೆಗೆದುಕೊಳ್ಳಿ.
ಹೌದು. ಇಂದು ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಅನೇಕ ಸ್ಟಾರ್ಸ್ ದುಬಾರಿ ವಾಚ್ ಗಳನ್ನು ಧರಿಸುವ ಮೂಲಕ ಅನೇಕರ ಗಮನವನ್ನು ಸೆಳೆದಿದ್ದಾರೆ. ಚಿತ್ರ ವಿಚಿತ್ರ ಬಟ್ಟೆಗಳನ್ನು ಹಾಕಿಕೊಂಡು ಬಂದರೂ ಕೂಡ ಎಲ್ಲರ ಕಣ್ಣು ಬಿದ್ದಿದ್ದು ಮಾತ್ರ ಇವರ ಮಣಿಕಟ್ಟಿನ ಮೇಲೆಯೇ.

ಎ ಕಂಪ್ಲೀಟ್ ಅನ್‌ನೋನ್ ಚಿತ್ರದಲ್ಲಿನ ಅಭಿನಯಕ್ಕೆ ಅತ್ಯುತ್ತಮ ನಟ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿರುವ ತಿಮೋತಿ ಚಲಮೆಟ್ ಕಾರ್ಟಿಯರ್ ಬ್ಯಾಗ್ನೊಯಿರ್ ವಾಚ್ ಕಟ್ಟಿಕೊಂಡು ಆಸ್ಕರ್‌ಗೆ ಬಂದರೆ ಒಮೆಗಾ ಸ್ಪೀಡ್ ಮಾಸ್ಟರ್ ಮೂನ್ ವಾಚ್ ಧರಿಸಿ ಕೋಲ್ಮನ್ ಡೊಮಿಂಗೊ ಮಿಂಚಿದ್ದಾರೆ.
ತಿಮೋತಿ ಹಾಕಿದ್ದ ವಾಚ್ ಬೆಲೆ ಹತ್ ಹತ್ರ 50 ಲಕ್ಷ ಇದ್ದರೆ ಕೋಲ್ಮನ್ ಹಾಕಿಕೊಂಡ ವಾಚ್ ಬೆಲೆ 41 ಲಕ್ಷ ಇದೆ. ಇನ್ನೂ ಆಸ್ಕರ್ ಅಂಗಳದಲ್ಲಿ ಕೇವಲ ಸ್ಟಾರ್ಸ್ ಮಾತ್ರ ಕಾಣಿಸಿಲ್ಲ. ಬದಲಿಗೆ ಖ್ಯಾತ ಟೆನಿಸ್ ತಾರೆ ಕೊಕೊ ಗೌಫ್ ಕೂಡ ಕಾಣಿಸಿಕೊಂಡಿದ್ದಾರೆ. ಹತ್ ಹತ್ರ ಮೂವತ್ತು ಲಕ್ಷ ಬೆಲೆ ಬಾಳುವ ರೋಲೆಕ್ಸ್ ಡೇಟ್ ಜಸ್ಟ್ ಹಾಕಿಕೊಂಡು ಮಿಂಚಿದ್ದಾರೆ.
ಇನ್ನು ಆಸ್ಕರ್ ಗೆಲ್ಲುವ ಫೇವರೆಟ್ ಚಿತ್ರ ಎಂದು ಪರಿಗಣಿಸಲ್ಪಡುತ್ತಿರುವ ಎ ಕಂಪ್ಲೀಟ್ ಅನ್‌ನೋನ್ ಚಿತ್ರದ ನಾಯಕಎಡ್ವರ್ಡ್ ನಾರ್ಟನ್ ಅತ್ಯಂತ ದುಬಾರಿ ವಾಚ್‌ಗಳಲ್ಲಿ ಒಂದಾದ ವಾಚೆರಾನ್ ಕಾನ್‌ಸ್ಟಾಂಟಿನ್ 222 ಧರಿಸಿ ಮಿಂಚಿದರೆ, ಅವೆಂಜರ್ಸ್ ಸಿನಿಮಾ ಖ್ಯಾತಿಯ ರಾಬರ್ಟ್ ಡೌನಿ ಜ್ಯೂನಿಯರ್ ಒಮೆಗಾ ಸೀಮಾಸ್ಟರ್ ಅಕ್ವಾ ಟೆರ್ರಾ 150M ವಾಚ್ ಹಾಕಿಕೊಂಡು ರೆಡ್ ಕಾರ್ಪೆಟ್‌ನಲ್ಲಿ ಮಿರ ಮಿರ ಮಿಂಚಿದ್ದಾರೆ.
ಜುರಾಸಿಕ್ ಪಾರ್ಕ್ ಖ್ಯಾತಿಯ ಜೆಫ್ ಗೋಲ್ಡ್‌ಬ್ಲಮ್ ಕೂಡ ಎಗೆರಿ ಮೂನ್ ಫೇಸ್ ವಾಚ್ ಹಾಕಿಕೊಂಡು ಬಂದಿದ್ದರೆ, ನಟ ಜೆರೆಮಿ ಸ್ಟ್ರಾಂಗ್ ಕೋಟಿ ಬೆಲೆ ಬಾಳುವ ರಿಚರ್ಡ್ ಮಿಲ್ಲೆ RM 74-02 ವಾಚ್ ಧರಿಸಿ ಆಸ್ಕರ್ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಹಾಸ್ಯ ಕಲಾವಿದನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಹಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ ಬೆನ್ ಸ್ವಿಲ್ಲರ್ ಮೂರು ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಒಮೆಗಾ ಡಿ ವಿಲ್ಲೆ ಪ್ರೆಸ್ಟಿಜ್ ವಾಚ್ ಹಾಕಿಕೊಂಡಿದ್ದಾರೆ. ಸೆಬಾಸ್ಟಿಯನ್ ಸ್ಟಾನ್ ಧರಿಸಿದ್ದ ವಾಚ್‌ನ ಬೆಲೆ ಏಳು ಲಕ್ಷಕ್ಕೂ ಅಧಿಕ.


Click it and Unblock the Notifications











