The Blind Side: ಆಸ್ಕರ್ ಪ್ರಶಸ್ತಿ ಪಡೆದಿದ್ದ ಪಾತ್ರ ಮತ್ತು ಸಿನಿಮಾ ಸುತ್ತ ವಿವಾದದ ಹುತ್ತ!
ಹಾಲಿವುಡ್ ನಟಿ ಸಾಂಡ್ರಾ ಬುಲಕ್ ಮತ್ತು ಕ್ವಿಂಟನ್ ಆರನ್ ಪ್ರಮುಖ ಪಾತ್ರದಲ್ಲಿ ನಟಿಸಿದ 2009 ರ ಬಿಡುಗಡೆಯಾದ ದಿ ಬ್ಲೈಂಡ್ ಸೈಡ್ ಸೂಪರ್ ಹಿಟ್ ಆಗಿತ್ತು. ಈ ಚಲನಚಿತ್ರದಲ್ಲಿ ಕಷ್ಟದಲ್ಲಿರುವ ಕಪ್ಪು ಯುವಕನೊಬ್ಬನಿಗೆ ಕುಟುಂಬವೊಂದು ನೆರವಾಗುವುದು, ಅವನನ್ನು ದತ್ತು ಪಡೆದ ಸಾಕು ಕುಟುಂಬದ ಸಹಾಯದಿಂದ ಸ್ಟಾರ್ ಅಥ್ಲೀಟ್ ಆಗುವ ಕ್ರೀಡಾಪಟುವೊಬ್ಬರ ನೈಜ್ಯ ಕಥೆಯಾಗಿತ್ತು.
ಈ ಸಿನಿಮಾವನ್ನು 'ದಿ ಬ್ಲೈಂಡ್ ಸೈಡ್: ಎವಲ್ಯೂಷನ್ ಆಫ್ ಎ ಗೇಮ್' ಪುಸ್ತಕವನ್ನು ಆಧಾರವಾಗಿಟ್ಟುಕೊಂಡು ಮಾಡಲಾಗಿತ್ತು. ಆದರೆ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿ, ಸಿನಿಮಾದ ಪಾತ್ರಧಾರಿಗೆ ಆಸ್ಕರ್ ಪ್ರಶಸ್ತಿ ಸಿಕ್ಕ ಒಂದು ದಶಕದ ನಂತರ ಈಗ ವಿವಾದದ ಗೂಡಾಗಿದೆ. ಯಾರ ಜೀವನವನ್ನು ಚಲನಚಿತ್ರದಲ್ಲಿ ತೋರಿಸಲಾಗಿದೆಯೊ ಅವರೇ ಚಿತ್ರದ ವಿರುದ್ಧ ದೂರು ದಾಖಲಿಸಿದ್ದಾರೆ.

ದೂರು ದಾಖಲಿಸಿದ ಮೈಕೆಲ್ ಓಹೆರ್!
ದಿ ಬ್ಲೈಂಡ್ ಸೈಡ್ ಚಲನಚಿತ್ರಕ್ಕೆ ಸ್ಫೂರ್ತಿ ನೀಡಿದ 37 ವರ್ಷ ವಯಸ್ಸಿನ ಮೈಕೆಲ್ ಓಹೆರ್ ಅವರು ತಮ್ಮನ್ನು ಸಾಕಿದ್ದ ಟುಯೋಹಿಸ್ ಕುಟುಂಬದವರ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಸಿನಿಮಾದಲ್ಲಿ ತೋರಿಸಿದಂತೆ ಅವರು ತನ್ನನ್ನು ದತ್ತು ತೆಗೆದುಕೊಂಡಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ. ನಿವೃತ್ತ ಎನ್‌ಎಫ್‌ಎಲ್ ಪುಟ್‌ಬಾಲ್ ಸ್ಟಾರ್ ಆಟಗಾರನ ದೂರಿಗೆ ಬ್ಲಾಕ್ ಬ್ಲಾಸ್ಟರ್ ಸಿನಿಮಾ ವಿವಾದಕ್ಕೆ ಸಿಲುಕಿದೆ.
ಮೈಕೆಲ್ ಓಹೆರ್ ಹೂಡಿರುವ ಮೊಕದ್ದಮೆಯಲ್ಲಿ, ಅವರನ್ನು ಎಂದಿಗೂ ದತ್ತು ತೆಗೆದುಕೊಂಡಿಲ್ಲ, ಆದರೆ ಅವರ ಯಶಸ್ಸಿನಿಂದ ಖಂಡಿತವಾಗಿಯೂ ಲಾಭ ಪಡೆದರು ಎಂದು ಹೇಳಿದ್ದಾರೆ. ಟುಯೋಹಿಸ್ ಆಡಳಿತಕ್ಕೆ ದಾರಿ ತಪ್ಪಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದು ಅವರ ವ್ಯಾಪಾರ ವಹಿವಾಟುಗಳ ಮೇಲೆ ಕಾನೂನು ನಿಯಂತ್ರಣವನ್ನು ಹೇರಲು ಅವಕಾಶ ನೀಡಿತು. ಟುಯೋಹಿಸ್ ಚಲನಚಿತ್ರದಿಮದ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ತಾನು ಇಲ್ಲದೆ ಆ ಸಿನಿಮಾ ಅಸ್ತಿತ್ವದಲ್ಲಿಲ್ಲ ಆದರೂ, ತನಗೆ ಯಾವತ್ತೂ ಪರಿಹಾರವನ್ನು ನೀಡಲಿಲ್ಲ ಎಂದಿದ್ದಾರೆ.

ದಿ ಬ್ಲೈಂಡ್ ಸೈಡ್ ಚಿತ್ರ ಹೇಳುವುದೇನು?
'ದಿ ಬ್ಲೈಂಡ್ ಸೈಡ್' ಫೋಸ್ಟರ್ ಕೇರ್‌ನಲ್ಲಿ ವಾಸಿಸುವ ಕಷ್ಟದಲ್ಲಿ ಹೆಣಗಾಡುತ್ತಿರುವ ಕಪ್ಪು ಟೀನೇಜರ್ ಕಥೆಯನ್ನು ಹೇಳುತ್ತದೆ. ಬಿಳಿ ಕುಟುಂಬದ ಸಹಾಯದಿಂದ ಆತ ಕಾಲೇಜಿಗೆ ಸೇರುವುದು, ಸ್ಟಾರ್ ಅಥ್ಲೀಟ್ ಆಗುವುದನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ. ಇದು ಮೈಕೆಲ್ ಲೆವಿಸ್ ಅವರ 2006 ರ ಪುಸ್ತಕ 'ದಿ ಬ್ಲೈಂಡ್ ಸೈಡ್: ಎವಲ್ಯೂಷನ್ ಆಫ್ ಎ ಗೇಮ್'ನಿಂದ ತೆಗೆದುಕೊಳ್ಳಲಾಗಿತ್ತು.
ಪುಸ್ತಕದಲ್ಲಿ ಮಾದಕ ವ್ಯಸನಿ ಮಹಿಳೆಗೆ ಜನಿಸಿದ 13 ಮಕ್ಕಳಲ್ಲಿ ಒಬ್ಬರಾದ ಮೈಕೆಲ್ ಓಹೆರ್ ಅನ್ನು ಟುಯೋಹಿ ಕುಟುಂಬ ಹೇಗೆ "ದತ್ತು" ಪಡೆಯಿತು ಎಂದು ವಿವರಿಸುತ್ತದೆ. ಚಿತ್ರದಲ್ಲಿ ಸಾಂಡ್ರಾ ಬುಲಕ್ ತಾಯಿ ಲೇ ಆನ್ನೆ ಟುಯೋಹಿ ಪಾತ್ರವನ್ನು ನಿರ್ವಹಿಸಿದ್ದಾರೆ. ಬಿಬಿಸಿ ಪ್ರಕಾರ, ಜಾಗತಿಕವಾಗಿ ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ 300 ಮಿಲಿಯನ್ ಡಾಲರ್ ಗಳಿಸಿದೆ. ಹೋಮ್ ವಿಡಿಯೋ ಮಾರಾಟದಲ್ಲಿ ಮಿಲಿಯನ್‌ಗಟ್ಟಲೆ ಹಣ ಗಳಿಸಿದೆ.
ನಟಿ ಸಾಂಡ್ರಾ ಬುಲಕ್ ಅವರನ್ನು ಏಕೆ ಟೀಕಿಸಲಾಗುತ್ತಿದೆ?
ಚಿತ್ರದಲ್ಲಿ ಆನ್ನೆ ಟುಯೋಹಿ ಪಾತ್ರ ಮಾಡಿದ್ದ ಸಾಂಡ್ರಾ ಬುಲಕ್ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆದರೆ ಕೆಲವು ವಿಮರ್ಶಕರು ಆಕೆಯನ್ನು ಆಸ್ಕರ್ ಪ್ರಶಸ್ತಿಯನ್ನು ಹಿಂದಿರುಗಿಸುವಂತೆ ತಿಳಿಸಿದ್ದಾರೆ. ಇಂತಹ ಆಕ್ಷೇಪಾರ್ಹ ಪಾತ್ರವನ್ನು ಮಾಡಿ ತೆಗೆದುಕೊಂಡ ಪ್ರಶಸ್ತಿ ವಾಪಸ್ ಕೊಡಬೇಕು ಎಂದು ಅನೇಕರು ಹೇಳಿದ್ದಾರೆ. ಆದರೆ, ಚಿತ್ರದ ಪ್ರಮುಖ ನಟಿಯ ಬೆಂಬಲಕ್ಕೆ ಸಹಕಲಾವಿದರು ಮುಂದೆ ಬಂದಿದ್ದಾರೆ.
ಸಿನಿಮಾದಲ್ಲಿ ಆಕೆಯ ಸಹ ನಟ ಕ್ವಿಂಟನ್ ಆರನ್ ಸೇರಿದಂತೆ ಕೆಲವರು ಆಕೆಗೆ ಬೆಂಬಲ ಸೂಚಿಸಿದ್ದಾರೆ. "ಆಕೆಗೆ ತನ್ನ ಪ್ರಶಸ್ತಿಯನ್ನು ಬಿಟ್ಟುಕೊಡಬೇಕು ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ" ಎಂದು ಹೇಳಿದ್ದಾರೆ. "ನಿಜ-ಜೀವನದ ಕಥೆಯ ಬಗ್ಗೆ ಹೊಸ ಗೊಂದಲದ ಆರೋಪಗಳಿಗೆ ಆಕೆಯ ಮೇಲೆ ಆರೋಪ ಹೊರಿಸುವುದು ಸಂಪೂರ್ಣ ತಪ್ಪು ಮತ್ತು ಅನ್ಯಾಯ" ಎಂದು ಟಿವಿ ಮತ್ತು ಚಲನಚಿತ್ರ ವಿಮರ್ಶಕ ರಿಚರ್ಡ್ ರೋಪರ್ ಹೇಳಿದ್ದಾರೆ.


Click it and Unblock the Notifications











