»   » ರೋಮಾಂಚನಕಾರಿ ಹಾಲಿವುಡ್ ಚಿತ್ರ 'ಡಂಕರ್ಕ್' ಟ್ರೈಲರ್ ನೋಡಿದ್ರಾ?

ರೋಮಾಂಚನಕಾರಿ ಹಾಲಿವುಡ್ ಚಿತ್ರ 'ಡಂಕರ್ಕ್' ಟ್ರೈಲರ್ ನೋಡಿದ್ರಾ?

Posted By:
Subscribe to Filmibeat Kannada

ಹಾಲಿವುಡ್ ಅಂಗಳದಲ್ಲಿ ಆಕ್ಷನ್‌ ಸಿನಿಮಾಗಳಿಗೆ ಬರವೇ ಇಲ್ಲಾ. ಅಲ್ಲಿ ಇತರೆ ಸಿನಿಮಾಗಳಿಗಿಂತ ಆಕ್ಷನ್‌ ಸಿನಿಮಾಗಳದೇ ಕಾರುಬಾರು. ಹಾಲಿವುಡ್‌ ನಲ್ಲಿ 2017 ರಲ್ಲಿ ಹೆಚ್ಚು ಸದ್ದು ಮಾಡಲಿರುವ ಸಿನಿಮಾ 'ಡಂಕರ್ಕ್‌'

ಹೌದು, ತಿಂಗಳ ಹಿಂದಷ್ಟೇ ಟೀಸರ್ ಬಿಡುಗಡೆ ಮಾಡಿ ಹಾಲಿವುಡ್ ಸಿನಿ ಪ್ರೇಕ್ಷಕರನ್ನು ಟ್ರೈಲರ್‌ ಗಾಗಿ ಕಾಯುವಂತೆ ಮಾಡಿದ್ದ ಚಿತ್ರ ತಂಡ ಈಗ 'ಡಂಕರ್ಕ್' ಸಿನಿಮಾದ 2 ನಿಮಿಷ 18 ಸೆಕೆಂಡ್ ಇರುವ ಟ್ರೈಲರ್ ಅನ್ನು ರಿಲೀಸ್ ಮಾಡಿದೆ.

The First Trailer For Christopher Nolan's Dunkirk

'ದಿ ಡಾರ್ಕ್ ನೈಟ್' ಖ್ಯಾತಿಯ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಮಾನವ ಬದುಕುಳಿಯುವ ಎಪಿಕ್ ಸ್ಟೋರಿ ಇರುವ 'ಡಂಕರ್ಕ್‌' ಚಿತ್ರಕ್ಕೆ ಆಕ್ಷನ್‌ ಕಟ್ ಹೇಳಿದ್ದು, ಮಾಲ್ಕೊಮ್ ಅರ್ನಾಲ್ಡ್ ಸಂಗೀತ ನಿರ್ದೇಶವಿದೆ.

The First Trailer For Christopher Nolan's Dunkirk

ಸೈನಿಕರ ಗುಂಪೊಂದು ಡಂಕರ್ಕ್‌ ಎಂಬ ಸಮುದ್ರ ತೀರದಲ್ಲಿ ಸಿಲುಕಿಕೊಂಡು ತಾವು ತಮ್ಮನ್ನು ರಕ್ಷಿಸಿಕೊಳ್ಳುವ ಮಾರ್ಗವನ್ನು, ಅದೇ ಸಂದರ್ಭದಲ್ಲಿ ಬ್ರಿಟನ್‌ ನಲ್ಲಿ ಚಾರ್ಲ್ಸ್ ಫೋರ್ಮನ್ ಎಂಬ ಪತ್ರಿಕಾ ವರದಿಗಾರ ಯುದ್ಧದ ಭಯಾನಕ ವಾಸ್ತವವನ್ನು ಸಾರ್ವಜನಿಕರಿಗೆ ಅರಿವು ಮೂಡಿಸಲು ಪ್ರಯತ್ನಿಸುವುದು ಚಿತ್ರ ಕಥೆ. ಯುದ್ಧಕ್ಕೆ ಹೊರಟವನಿಗೆ ಭರವಸೆ ಎನ್ನುವುದೇ ದೊಡ್ಡ ಆಯುಧ ಎಂಬುದನ್ನು ಟ್ರೈಲರ್ ಮೂಲಕ ರೋಮಾಂಚನಕಾರಿಯಾಗಿ ತೋರಿಸಲಾಗಿದೆ. ಈ ರೋಮಾಂಚನಕಾರಿ ಟ್ರೈಲರ್ 15,965,202 ವೀಕ್ಷಣೆ ಪಡೆದಿದ್ದು, ನೀವು ಒಮ್ಮೆ ಹೇಗಿದೆ ನೋಡಬಹುದು. ಅಂದಹಾಗೆ ಚಿತ್ರ 2017 ರ ಜುಲೈ ನಲ್ಲಿ ಪ್ರಪಂಚದಾದ್ಯಂತ ತೆರೆ ಕಾಣಲಿದೆ.

ಟ್ರೈಲರ್ ನೋಡಿ

English summary
From filmmaker Christopher Nolan (“Interstellar,” “Inception,” “The Dark Knight” Trilogy) comes the epic action thriller DUNKIRK, in theaters July 21, 2017. Here is The First Trailer For Christopher Nolan's Dunkirk

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada