6 ಬೆಡ್‌ರೂಮ್ 10 ಬಾತ್ ರೂಮ್ ; 200 ಕೋಟಿಯ ಮನೆ ಖಾಲಿ ಮಾಡಿ ದೇಶ ಬಿಡಲು ಮುಂದಾದ ಏಂಜಲೀನಾ ಜೋಲಿ - 6 ಮಕ್ಕಳ ಕಥೆಯೇನು ?

ಸೆಲೆಬ್ರಿಟಿಗಳ ಹತ್ತಿರ ಎಲ್ಲವೂ ಇರುತ್ತೆ. ಆದರೆ .. ಬದುಕಲು ಬೇಕಾಗುವ ಮೂಲವಸ್ತುವಾದ ಸಂತೋಷ ಅವರಿಗೆ ಇರಲ್ಲ. ಯಾಕೆಂದರೆ.. ಆ ಸಂತೋಷವನ್ನು ಖ್ಯಾತಿ ಮತ್ತು ಸಾರ್ವಜನಿಕತೆ ಕಸಿದುಕೊಂಡು ಬಿಟ್ಟಿರುತ್ತೆ. ಇನ್ನೂ.. ಕೆಲವೊಮ್ಮೆ ಸೆಲೆಬ್ರಿಟಿ ಫಿಗರ್ ಎಂಬ ಭಾರ ಮಾನಸಿಕ ನೆಮ್ಮದಿಗೆ ಕೊಳ್ಳಿಯನ್ನೂ ಇಡುತ್ತೆ. ಮನೆಯಿಂದ ಒಂಚೂರು ಹೊರ ನಡೆದು ಕಾಲು ಕೆ.ಜಿ ಬದನೇ ಕಾಯಿ ತರುವ ಸಾರ್ವಜನಿಕ ಸ್ವಾತಂತ್ರ್ಯವೂ ಇವರಿಗೆ ಇರುವುದಿಲ್ಲ.

ಇನ್ನೂ ಇವರ ಮಕ್ಕಳ ಪಾಡಂತೂ ಆ ದೇವರಿಗೆ ಪ್ರೀತಿ. ಬಾಲ್ಯದಲ್ಲಿ ಇತರೆ ಮಕ್ಕಳಂತೆ ಹೊರಗಡೆ ಆಡುವ ಹಕ್ಕು ಕೂಡ ಇವರಿಗೆ ಇರಲ್ಲ. ಏನೇ ಆಡಿದರೂ ಮನೆಯೆಂಬ ಬಂಧಿಖಾನೆಯಲ್ಲಿಯೇ ಆಡಬೇಕು. ಅಷ್ಟರ ಮಟ್ಟಿಗೆ ಇವರ ಖಾಸಗಿತನಕ್ಕೆ ಧಕ್ಕೆ ಆಗುತ್ತೆ. ಕ್ಯಾಮರಾ ಕಣ್ಣು ಸದಾ ಇವರ ಮೇಲಿರುತ್ತೆ. ನೆರಳಿನಂತೆ ಹಿಂಬಾಲಿಸುತ್ತಿರುತ್ತೆ.

The Great Escape Why Angelina Jolie is Finally Abandoning Hollywood for Good

ಹೀಗಾಗಿ ಹಲವರು ಮದುವೆಯಾಗಿ ಮಕ್ಕಳಾದ ನಂತರ ತಮಗೆ ಸಿಕ್ಕ ಈ ಜನಪ್ರಿಯತೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ನೆಮ್ಮದಿಯನ್ನು ಹುಡುಕುತ್ತಾ ಊರಿಂದ ಊರಿಗೆ ದೇಶದಿಂದ ದೇಶಕ್ಕೆ ವಲಸೆ ಹೋಗುತ್ತಾರೆ. ಇದಕ್ಕೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರಿಂದ ಹಿಡಿದು ಹಲವು ಉದಾಹರಣೆಗಳಿವೆ. ಈ ಸಾಲಿಗೆ ಈಗ ಹಾಲಿವುಡ್ ನ ಪ್ರಖ್ಯಾತ ನಾಯಕಿ, ಜಗದ್ವಿಖ್ಯಾತ ಚೆಲುವೆ ಏಂಜಲೀನಾ ಜೋಲೀ ಕೂಡ ಸೇರಿಕೊಳ್ಳುತ್ತಿದ್ದಾರೆ ಎನ್ನುವುದು ಸದ್ಯದ ತಾಜಾ ಖಬರ್.

ಹೌದು ಏಂಜಲೀನಾ ಜೋಲಿ.. ಒಂದ್ಕಾಲದಲ್ಲಿ ಕೇವಲ ಹಾಲಿವುಡ್ ಮಾತ್ರವಲ್ಲ, ಇಡೀ ವಿಶ್ವದ ಸಿ‌ನಿಪ್ರಿಯರನ್ನು ಸಮ್ಮೋಹಕದಂತೆ ಸೆಳೆದ ಸುಂದರಿ. ಕೇವಲ 7ರ ಹರೆಯದಲ್ಲಿಯೇ ಚಿತ್ರರಂಗಕ್ಕೆ ಬಂದು ಕಳೆದ ಮೂರುವರೆ ದಶಕಗಳಿಂದ ತಮ್ಮ ಚಿತ್ರಗಳ ಮೂಲಕ ಮನರಂಜನೆಯ ರಸದೌತಣ ಬಡಿಸುತ್ತಿರುವ ಏಂಜಲೀನಾ ಜೋಲೀ 2004ರಲ್ಲಿ ಹಾಲಿವುಡ್‌ನ ಹ್ಯಾಂಡ್ಸಮ್ ಚೆಲುವ ಬ್ರಾಡ್ ಫಿಟ್‌ಗೆ ಮನ ಸೋತರು. ಹೆಚ್ಚು ಕಡಿಮೆ 12 ವರ್ಷ ಒಂದೇ ಸೂರಿನಡಿ ಇಬ್ಬರು ವಾಸ ಕೂಡ ಮಾಡಿದರು. ಆ ನಂತರ 2014ರಲ್ಲಿ ಅಧಿಕೃತವಾಗಿ ಮದುವೆ ಕೂಡ ಆದರು.

ಆದರೆ, ದುರಂತ, ಮದುವೆಯಾದ ಎರಡೇ ವರ್ಷಕ್ಕೆ ಇವರ ಸಂಬಂಧದಲ್ಲಿ ಬಿರುಕು ಮೂಡಿತ್ತು. 2016ರ ಸೆಪ್ಟೆಂಬರ್ 19ರಂದು ತಮ್ಮ ಪತಿ ಬ್ರಾಡ್ ಫಿಟ್ ಅವರ ವಿರುದ್ಧ ನ್ಯಾಯಾಲಯದ ಮೊರೆ ಹೋದರು. ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದರು. ಸುಮಾರು 8 ವರ್ಷ ಈ ಕಾನೂನು ಸಮರ ನಡೆಯಿತು. ಡಿಸೆಂಬರ್ 29-2024ರಲ್ಲಿ ಇವರ ಈ ವಿಚ್ಚೇದನದ ವಿವಾದ ಅಂತ್ಯವೂ ಆಯ್ತು.

ಇಲ್ಲಿಂದಾಚೆ ಅಂದರೆ 2024ರಿಂದ ಪತಿಯಿಂದ ದೂರವಾದ ಏಂಜಲೀನಾ ಜೂಲಿ ಸದ್ಯ ಅಮೆರಿಕಾದಲ್ಲಿನ ತಮ್ಮ ಲಾಸ್ ಏಂಜಲೀಸ್ ಮನೆಯನ್ನು ಖಾಲಿ ಮಾಡಲು ಮುಂದಾಗಿದ್ದಾರೆ. ಕೇವಲ ಅಮೆರಿಕಾ ಮಾತ್ರವಲ್ಲ ಹಾಲಿವುಡ್‌ಗೆ ಗುಡ್ ಬೈ ಹೇಳಲು ಸಿದ್ಧರಾಗಿದ್ದಾರೆ. ಸದ್ಯ ಇಂತಹದ್ದೊಂದು ವರದಿ ಹಲವರ ನಿದ್ದೆಯನ್ನು ಕೆಡಿಸಿದೆ.

The Great Escape Why Angelina Jolie is Finally Abandoning Hollywood for Good

ಹೌದು, ಅಸಲಿಗೆ ಏಂಜಲೀನಾ ಜೋಲಿ ಅವರಿಗೆ ಒಬ್ಬರಲ್ಲ ಇಬ್ಬರಲ್ಲ. ಆರು ಜನ ಮಕ್ಕಳಿದ್ದಾರೆ. ಆ ಪೈಕಿ ಮೂರು ಮಕ್ಕಳನ್ನು ಬ್ರಾಡ್ ಫಿಟ್ ಜೊತೆ ಇದ್ದಾಗ ಏಂಜಲೀನಾ ಜೋಲಿ ದತ್ತು ಪಡೆದಿದ್ದರು. ಇನ್ನು ಮೂರು ಮಕ್ಕಳಿಗೆ ಆ ನಂತರ ಜನ್ಮ ನೀಡಿದ್ದರು. ಆ ಪೈಕಿ ಇಬ್ಬರು ಅವಳಿ ಜವಳಿ ಮಕ್ಕಳು ಎನ್ನುವುದು ವಿಶೇಷ. ಸದ್ಯ ಇದೇ ಅವಳಿ ಜವಳಿ ಮಕ್ಕಳಿಗೆ ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ ಜುಲೈ 12ಕ್ಕೆ 18 ತುಂಬಲಿದೆ.

ಈ ಹಿನ್ನೆಲೆ ಏಂಜಲೀನಾ ಜೋಲಿ ತಮ್ಮ ಕನಸಿನ ಮನೆಗೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ ಎಂದು ಅಮೆರಿಕಾದ ಸುದ್ದಿ ಸಂಸ್ಥೆ ''ಪೀಪಲ್'' ವರದಿ ಮಾಡಿದೆ. ಇದಕ್ಕೆ ಪೂರಕವಾಗಿ 2024ರಲ್ಲಿ ಏಂಜಲೀನಾ ಜೋಲಿ ಲಾಸ್ ಏಂಜಲೀಸ್‌ನಿಂದ ದೂರ ಹೋಗುವ ಮಾತುಗಳನ್ನು ''ದಿ ಹಾಲಿವುಡ್‌ ರಿರ್ಪೋಟರ್''ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಈಗಾಗಲೇ ನಾನು ಜಾಗ ಖಾಲಿ ಮಾಡ್ತಿದ್ದೇ ಆದರೆ ಬ್ರಾಡ್ ಪಿಟ್ ಜೊತೆ ವಿಚ್ಛೇದನದ ವಿವಾದ ಇನ್ನೂ ಬಗೆಹರಿದಿಲ್ಲ, ಹೀಗಾಗಿ ಅನಿವಾರ್ಯ ಕಾರಣಗಳಿಂದ ನಾನು ಇನ್ನೂ ಇಲ್ಲಿಯೇ ವಾಸ ಮಾಡುತ್ತಿದ್ದೇನೆ ಎಂದು ಹೇಳಿದ್ದರು.

ಮುಂದುವರೆದು ಕುಟುಂಬ ದೊಡ್ಡದಾದಂತೆ ಅವರ ಶಾಂತಿ, ಸುರಕ್ಷತೆ ಮತ್ತು ಅವರ ಖಾಸಗಿತನ ಮುಖ್ಯವಾಗುತ್ತೆ ಎಂದು ಹೇಳಿದ್ದ ಏಂಜಲೀನಾ ಜೋಲಿ, ಮಕ್ಕಳನ್ನು ಬೆಳೆಸಲು ಇಲ್ಲಿ ದೊಡ್ಡ ಮನೆ ಇದೆ, ಆದರೆ ನನಗೆ ನನ್ನ ಮಕ್ಕಳು ಬೆಳೆಯುತ್ತಿರುವ ಪರಿಸರದಲ್ಲಿ ಮಾನವೀಯತೆಯ ಮೌಲ್ಯಗಳು ಕಾಣಿಸುತ್ತಿಲ್ಲ ಎಂದು ಹೇಳಿದ್ದರು. ಖಾಸಗಿತನಕ್ಕೆ ಧಕ್ಕೆಯಾಗುತ್ತಿದೆ ಎಂದಿದ್ದರು. ಲಾಸ್ ಏಂಜಲೀಸ್‌ನಿಂದ ದೂರ ಹೋಗುವ ನಿರ್ಧಾರ ಮಾಡಲು ಇವೆಲ್ಲವೂ ಕೂಡ ಪ್ರಮುಖ ಕಾರಣ ಎಂದು ಹೇಳಿದ್ದರು.

ಲಾಸ್ ಏಂಜಲೀಸ್‌ದಿಂದ ದೂರ ಹೋದರೆ ನಾನು ಮತ್ತು ನನ್ನ ಮಕ್ಕಳು ಸಂತೋಷದಿಂದ ಇರುತ್ತೇವೆ ಎನ್ನುವ ವಿಶ್ವಾಸ ನನಗೆ ಇದೆ ಎಂದು ಹೇಳಿದ್ದ ಏಂಜಲೀನಾ ಜೋಲಿ, ಸಾಂಟಾ ಬಾರ್ಬರಾ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕಾಂಬೋಡಿಯಾಗೆ ನನ್ನ ಹೃದಯದಲ್ಲಿ ವಿಶೇಷವಾದ ಸ್ಥಾನ ಇದೆ. ಯಾಕೆಂದರೆ ನಾನು ನನ್ನ ಹಿರಿಯ ಮ್ಯಾಡಾಕ್ಸ್‌ನನ್ನು 2002ರಲ್ಲಿ ಅಲ್ಲಿಯೇ ದತ್ತು ಪಡೆದಿದ್ದು ಎಂದು ಏಂಜಲೀನಾ ಜೋಲಿ ಹೇಳಿದ್ದರು. ಈ ಮೂಲಕ ತಮ್ಮ ಮುಂದಿನ ಜೀವನ ಕಾಂಬೋಡಿಯಾದಲ್ಲಿ ಕಳೆಯುವುದಾಗಿ ಪರೋಕ್ಷವಾಗಿ ತಿಳಿಸಿದ್ದರು.

ಅಂದ್ಹಾಗೇ ಏಂಜಲೀನಾ ಜೋಲಿ ವಾಸವಾಗಿರುವ ಲಾಸ್ ಏಂಜಲೀಸ್‌ನಲ್ಲಿರುವ ಮನೆಗೆ ಅದ್ರದ್ದೇ ಆದ ಮಹತ್ವ ಮತ್ತು ಪ್ರಾಮುಖ್ಯತೆ ಇದೆ. ಯಾಕೆಂದರೆ 1916ರಲ್ಲಿ ಈ ಮನೆಯನ್ನು ಹಾಲಿವುಡ್‌ನ ಪ್ರಖ್ಯಾತ ನಿರ್ದೇಶಕ ಸೆಸಿಲ್ ಬಿ ಡಿಮಿಲ್ಲೆ 28,000 ಡಾಲರ್ ಗೆ ಮನೆಯನ್ನು ಖರೀದಿ ಮಾಡಿದ್ದರು. ಇವರ ಮನೆಯ ಪಕ್ಕದಲ್ಲಿಯೇ ದಂತಕಥೆ ಚಾರ್ಲಿ ಚಾಪ್ಲಿನ್ ಆ ಕಾಲದಲ್ಲಿ ವಾಸ ಇದ್ದರು.

ಆ ನಂತರ ಚಾರ್ಲಿ ಚಾಪ್ಲಿನ್ ಇಲ್ಲಿಂದ ಬೇರೆ ಕಡೆ ಸ್ಥಳಾಂತರಗೊಂಡರು. ಈ ಹಿನ್ನೆಲೆ ಸೆಸಿಲ್ ಚಾರ್ಲಿ ಚಾಪ್ಲಿನ್ ವಾಸ ಇದ್ದ ಆಸ್ತಿಯನ್ನು ಕೂಡ ಖರೀದಿ ಮಾಡಿದ್ದರು.ಇಂತಹ ಮನೆಯನ್ನು ಏಂಜಲೀನಾ ಜೋಲಿ 2017ರಲ್ಲಿ 24.5 ಮಿಲಿಯನ್ ಡಾಲರ್ ಗೆ ಖರೀದಿಸಿದ್ದರು. 11,000 ಚದರ ಅಡಿ ವಿಸ್ತೀರ್ಣವನ್ನು ಈ ಮನೆ ಹೊಂದಿದ್ದು ಮನೆಯಲ್ಲಿ ಆರು ಬೆಡ್ ರೂಮ್ ಮತ್ತು ಹತ್ತು ಬಾತ್‌ರೂಮ್‌ಗಳಿವೆ.

ಇನ್ನುಳಿದಂತೆ ಏಂಜಲೀನಾ ಜೋಲಿ ಅವರ ಹಿರಿಯ ಮಗ ಮ್ಯಾಡೋಕ್ಸ್‌ಗೆ ಈಗ 24 ವರ್ಷ. ಎರಡನೇ ಮಗ ಪ್ಯಾಕ್ಸ್‌ಗೆ 22 ವರ್ಷ. ಮಗಳು ಜಹಾರಾಗೆ 21 ವರ್ಷ. ಈ ಮೂವರನ್ನು ಏಂಜಲೀನಾ ದತ್ತು ಪಡೆದಿದ್ದರು. ಬ್ರಾಡ್ ಪಿಟ್ ಮತ್ತು ಏಂಜಲೀನಾ ಪ್ರೇಮ ಸಂಕೇತವಾಗಿ ಇವರಿಗೆ ಮೂರು ಮಕ್ಕಳಿದ್ದು ಶೈಲೋಗೆ ಈಗ 19 ವರ್ಷ ಆದರೆ ಅವಳಿ ಜವಳಿ ಮಕ್ಕಳಾದ ನೋಕ್ಸ್ ಮತ್ತು ವಿವಿಯೆನ್‌ಗೆ ಈಗ 17 ವರ್ಷ. ಈ ಜುಲೈ 12ರಂದು ಈ ಇಬ್ಬರಿಗೆ 18 ವರ್ಷ ತುಂಬಲಿದೆ. ಈ ದಿನಕ್ಕೆ ಏಂಜಲೀನಾ ಜೋಲಿ ಕಾತುರದಿಂದ ಕಾಯುತ್ತಿದ್ದು ತಮ್ಮ ಆರು ಮಕ್ಕಳನ್ನು ಕರೆದುಕೊಂಡು ಏಂಜಲೀನಾ ಜೋಲಿ ಖಾಯಂ ಆಗಿ ಕಾಂಬೋಡಿಯಾಗೆ ತೆರಳುತ್ತಿದ್ಧಾರೆ ಎನ್ನುವ ಸುದ್ದಿಯನ್ನು ಸದ್ಯ ಹಾಲಿವುಡ್‌ನ ಪ್ರತಿಷ್ಟಿತ ಮಾಧ್ಯಮ ಸಂಸ್ಥೆಗಳು ವರದಿಯನ್ನು ಮಾಡಿವೆ.

More from Filmibeat

English summary
Beyond the headlines: The real reason Angelina Jolie is abandoning Los Angeles. From the sale of the iconic Cecil B. DeMille mansion to the 2026 milestone that finally grants her "freedom," we break down her move to Cambodia and Europe.
Read more about: angelina jolie home
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X