»   » ಬಾಕ್ಸಾಫೀಸ್ ನಲ್ಲಿ ಭರ್ಜರಿ ದಾಖಲೆ ಬರೆದ ಹಾಬಿಟ್

ಬಾಕ್ಸಾಫೀಸ್ ನಲ್ಲಿ ಭರ್ಜರಿ ದಾಖಲೆ ಬರೆದ ಹಾಬಿಟ್

Posted By:
Subscribe to Filmibeat Kannada

'ದಿ ಲಾರ್ಡ್ ಆಫ್ ದ ರಿಂಗ್ಸ್' ಚಿತ್ರ ಸರಣಿಯ ಮುಂದುವರೆದ ಭಾಗದಂತಿರುವ ಪೀಟರ್ ಜಾಕ್ಸನ್ ನಿರ್ದೇಶನದ ಹಾಬಿಟ್ ಚಿತ್ರ ಹಾಲಿವುಡ್ ನ ಬಾಕ್ಸಾಫೀಸ್ ನಲ್ಲಿ ಭರ್ಜರಿ ದಾಖಲೆ ಬರೆಯುತ್ತಿದೆ. ಐದಾರು ಅಧ್ಯಾಯಗಳ ಪುಟ್ಟ ಕಾದಂಬರಿಯನ್ನು ಆಧಾರಿಸಿದ ಚಿತ್ರ ಈಗ ವಿಶ್ವದೆಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಈ ಚಿತ್ರ ಸರಿ ಸುಮಾರು 122.6 ಮಿಲಿಯನ್ ಡಾಲರ್ ಗಳಿಸಿ ಮುನ್ನುಗ್ಗುತ್ತಿದೆ.

1937ರಲ್ಲಿ ಜೆಆರ್‌ಆರ್ ಟಾಲ್ಕಿನ್ಸ್ ಬರೆದ ದಿ ಹಾಬಿಟ್ ಪುಸ್ತಕದಲ್ಲಿ ಗೋಲ್ಮ್ ಹಾಗೂ ಬಿಲ್ಬೋ ನಡುವೆ ನಡೆಯುವ ಕತೆಯಾಗಿದ್ದು, ಕಿಂಗ್ ಡಮ್ ಆಫ್ ಎರೆಬರ್ ಕೈವಶಕ್ಕೆ ಬಿಲ್ಬೋ ನಡೆಸುವ ಸಾಹಸ ಹಾಗೂ ಅದಕ್ಕೆ ಗೋಲ್ಮ್ ನೀಡುವ ಸಾಥ್ ಕಥೆಯನ್ನು ನಿಮ್ಮನ್ನು ಚಂದಮಾಮ ಕಥಾ ಹಂದರೊಳಗೆ ಬಿಡುವಂತಾಗುತ್ತದೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಜಪಾನ್, ರಷ್ಯಾ, ಮೆಕ್ಸಿಕೋ ಸೇರಿದಂತೆ 38ಕ್ಕೂ ಅಧಿಕ ದೇಶಗಳಲ್ಲಿ ದಿ ಹಾಬಿಟ್ : ದಿ ಬ್ಯಾಟಲ್ ಆಫ್ ದಿ ಫೈವ್ ಆರ್ಮೀಸ್ ಚಿತ್ರ ಸದ್ಯದ ಮಾರುಕಟ್ಟೆ ಲೀಡರ್ ಎಂದು ವೈರೈಟಿ.ಕಾಂ ವರದಿ ಮಾಡಿದೆ.

'The Hobbit...' Box Office Report: Sets IMAX Record With $122.2 Million

ಐಮ್ಯಾಕ್ಸ್ ಸ್ಕ್ರೀನಿಂಗ್ ವರದಿ ಪ್ರಕಾರ ಆರಂಭದಲ್ಲಿ 6.4 ಮಿಲಿಯನ್ ಡಾಲರ್ ಗಳಿಸಿತ್ತು. ಜರ್ಮನಿಯಲ್ಲಿ 19.5 ಮಿಲಿಯನ್ ಡಾಲರ್, ಬ್ರಿಟನ್ನಿನಲ್ಲಿ 15.2 ಮಿಲಿಯನ್ ಡಾಲರ್, ಫ್ರಾನ್ಸಿನಲ್ಲಿ 14.5 ಮಿಲಿಯನ್ ಡಾಲರ್, ರಷ್ಯಾದಲ್ಲಿ 13.4 ಮಿಲಿಯನ್ ಡಾಲರ್ ಗಳಿಸುವ ಮೂಲಕ ವಾರ್ನರ್ ಬ್ರದರ್ಸ್ ನಿರ್ಮಾಣ ಸಂಸ್ಥೆ ಜೋಳಿಗೆ ತುಂಬಿಸಿದೆ.

27 ಸಿನಿಮಾ ಮಾರುಕಟ್ಟೆಯಗಳಲ್ಲಿ 6,096 ಸ್ಕ್ರೀನ್ ಗಳಲ್ಲಿ ತೆರೆ ಕಂಡ ಎಕ್ಸಡಸ್: ಗಾಡ್ಸ್ ಅಂಡ್ ಕಿಂಗ್ಸ್ ಚಿತ್ರ ಎರಡನೇ ಸ್ಥಾನಕ್ಕೆ ಕುಸಿದಿದ್ದು 18.8 ಮಿಲಿಯನ್ ಡಾಲರ್ ಗಳಿಸಿದೆ.

ದಿ ಹಂಗರ್ ಗೇಮ್ಸ್: ಮಾಕಿಂಗ್ಲಿ ಪಾರ್ಟ್ 1 ಹಾಗೂ ಪೆಂಗ್ವಿನ್ಸ್ ಆಫ್ ಮಡಗಾಸ್ಕರ್ ಚಿತ್ರಗಳು ಕ್ರಮವಾಗಿ ಮೂರು ಹಾಗೂ ನಾಲ್ಕನೇ ಚಿತ್ರಗಳಾಗಿ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಹಂಗರ್ ಗೇಮ್ಸ್ 16 ಮಿಲಿಯನ್ ಡಾಲರ್ ಹಾಗೂ ಪೆಂಗ್ವಿನ್ಸ್ ಚಿತ್ರ 14.7 ಮಿಲಿಯನ್ ಡಾಲರ್ ಗಳಿಕೆ ಕಂಡಿದೆ.

ಹಂಗರ್ ಗೇಮ್ಸ್ ಸಿಕ್ವೇಲ್ ಜಾಗತಿಕವಾಗಿ 611.4 ಮಿಲಿಯನ್ ಡಾಲರ್ ಗಳಿಸಿದ್ದರೆ, ಮಡಗಾಸ್ಕರ್ ಚಿತ್ರ 175.5 ಮಿಲಿಯನ್ ಡಾಲರ್ ಗಳಿಸಿತ್ತು.

ಐದನೇ ಸ್ಥಾನದಲ್ಲಿ ಇಂಟರ್ ಸ್ಟೆಲ್ಲರ್ ಚಿತ್ರವಿದ್ದು ಜಾಗತಿಕವಾಗಿ 600 ಮಿಲಿಯನ್ ಡಾಲರ್ ಬಾಚಿದೆ. ಬಾಹ್ಯಾಕಾಶ ಜಗತ್ತಿನ ಅದ್ಭುತ ಚಿತ್ರಕ್ಕೆ ಸಾಗರೋತ್ತರ ದೇಶಗಳ ಗಳಿಕೆಯಲ್ಲಿ 11.4 ಮಿಲಿಯನ್ ಡಾಲರ್ ಗಳಿಸಿ 5ನೇ ಸ್ಥಾನದಲ್ಲಿದೆ. ಒಟ್ಟಾರೆ ಜಾಗತಿಕ ಗಳಿಕೆ ನಿವ್ವಳ 621.8 ಮಿಲಿಯನ್ ಡಾಲರ್ ದಾಟಿದೆ. ಚೀನಾದ ಪ್ರೇಕ್ಷಕರೇ ಈ ಚಿತ್ರಕ್ಕೆ 122.9 ಮಿಲಿಯನ್ ಡಾಲರ್ ಗಳಿಕೆ ತಂದು ಕೊಟ್ಟಿರುವುದು ವಿಶೇಷ.

English summary
"The Hobbit: The Battle of the Five Armies" ruled the foreign box office during the weekend, picking up a massive $122.2 Million.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada