'ಮೇಟ್ರಿಕ್ಸ್' ಟ್ರೇಲರ್: 'ಭವಿಷ್ಯ'ದ ಸಿನಿಮಾದಲ್ಲಿ ಕುತೂಹಲ ಹೆಚ್ಚಿಸಿದ ಪ್ರಿಯಾಂಕ ಎಂಟ್ರಿ

'ಮೇಟ್ರಿಕ್ಸ್' ಸರಣಿಯ ನಾಲ್ಕನೇ ಸಿನಿಮಾ 'ದಿ ಮ್ಯಾಟ್ರಿಕ್ಸ್; ರಿಸರಾಕ್ಷನ್' ಟ್ರೇಲರ್ ಬಿಡುಗಡೆ ಅಗಿದ್ದು, ಕೆಲವೇ ಗಂಟೆಗಳಲ್ಲಿ ಕೋಟ್ಯಂತರ ಜನ ಟ್ರೇಲರ್ ಅನ್ನು ವೀಕ್ಷಿಸಿದ್ದಾರೆ.

'ಮೇಟ್ರಿಕ್ಸ್; ರಿಸರಾಕ್ಷನ್‌' ಟ್ರೇಲರ್‌ನ ವಿಶೇಷತೆಯೆಂದರೆ ಟ್ರೇಲರ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಸಹ ಕಾಣಿಸಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ನಿಗೂಢ ಪಾತ್ರವೊಂದರಲ್ಲಿ ನಟಿಸುತ್ತಿರುವುದಾಗಿ ಟ್ರೇಲರ್‌ನಿಂದ ಗೊತ್ತಾಗುತ್ತಿದೆ.

'ಮೇಟ್ರಿಕ್ಸ್' ಸಿನಿಮಾ ಸರಣಿ ವಿಶ್ವವಿಖ್ಯಾತ ಸಿನಿಮಾ ಸರಣಿಗಳಲ್ಲಿ ಒಂದು. ವಿಜ್ಞಾನ, ತಂತ್ರಜ್ಞಾನ, ಕಲ್ಪನೆ, ಭವಿಷ್ಯ, ಅತಿಶಯ ಎಲ್ಲದರ ಮಿಳಿತವಾಗಿರುವ ಕತೆಗಳನ್ನು 'ಮೇಟ್ರಿಕ್ಸ್' ಸಿನಿಮಾಗಳು ಹೊಂದಿದ್ದು, ಹಾಲಿವುಡ್‌ನ ಅತ್ಯುತ್ತಮ ಆಕ್ಷನ್ ಥ್ರಿಲ್ಲರ್ ಸಿನಿಮಾಗಳ ಪಟ್ಟಿಯಲ್ಲಿ 'ಮೇಟ್ರಿಕ್ಸ್‌' ಸಿನಿಮಾಗಳಿಗೆ ಸ್ಥಾನವಿದೆ.

The Matrix Resurrections Trailer Released, Movie Will Release On December 22

ಕೆಲವು ದಿನಗಳ ಹಿಂದಷ್ಟೆ 'ಮೇಟ್ರಿಕ್ಸ್; ರಿಸರಾಕ್ಷನ್' ಸಿನಿಮಾದ ಟ್ರೇಲರ್ ಲಾಸ್‌ ವೆಗಾಸ್‌ನಲ್ಲಿ ನಡೆಯುತ್ತಿರುವ ಸಿನಿಮಾ ಕಾನ್‌ ಇವೆಂಟ್‌ನಲ್ಲಿ ಸಿನಿಮಾದ ಟ್ರೇಲರ್ ಪ್ರದರ್ಶಿಸಲಾಗಿದ್ದು, ಸಿನಿಮಾಕಾನ್‌ನಲ್ಲಿ ಹಾಜರಿದ್ದವರು ಮಾತ್ರವೇ ಟ್ರೇಲರ್ ನೋಡಿದ್ದರು. ಆಗಿನಿಂದಲೂ ಸಿನಿಮಾದ ಟ್ರೇಲರ್‌ ಬಗ್ಗೆ ಕುತೂಹಲ ಹಬ್ಬಿತ್ತು.

ಸಿನಿಮಾದ ಟ್ರೇಲರ್‌ ಸಖತ್ ಸದ್ದು ಮಾಡುತ್ತಿದ್ದು, 'ಮೇಟ್ರಿಕ್ಸ್' ಸರಣಿಯ ಸಿನಿಮಾಗಳ ಮುಖ್ಯ ಪಾತ್ರಗಳಾದ ನಿಯೊ, ಟ್ರಿನಿಟಿ ಗೆ ಈ ಸಿನಿಮಾದಲ್ಲಿ ಪರಸ್ಪರ ಪರಿಚಯವೇ ಇರುವುದಿಲ್ಲ! 'ಮೇಟ್ರಿಕ್ಸ್'ನ ಮೊದಲ ಸಿನಿಮಾದಿಂದಲೂ ಈ ಜೋಡಿ ಪ್ರೇಮಿಗಳು, ಸಹೋದ್ಯೋಗಿಗಳಾಗಿರುತ್ತಾರೆ. ಆದರೆ ಈ ಸಿನಿಮಾದಲ್ಲಿ ಇಬ್ಬರಿಗೂ ಪರಿಚಯವೇ ಇರುವುದು ಇದು ಸಿನಿಮಾ ಅಭಿಮಾನಿಗಳಲ್ಲಿ ಸಿನಿಮಾದ ಬಗ್ಗೆ ಕುತೂಹಲ ಇನ್ನಷ್ಟು ಹೆಚ್ಚಿಸಿದೆ.

ನಟಿ ಪ್ರಿಯಾಂಕಾ ಚೋಪ್ರಾ ಟ್ರೇಲರ್‌ನಲ್ಲಿ ಸಣ್ಣ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ದೊಡ್ಡ ಕನ್ನಡಕಗಳನ್ನು ಹಾಕಿಕೊಂಡು ಸಿನಿಮಾದ ಹೀರೊ ನಿಯೋಗೆ ಯಾವುದೇ ಸೂಚನೆ ಕೊಡುತ್ತಿರುವಂತೆ ಕಾಣುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಸಹ ಮೇಟ್ರಿಕ್ಸ್ ಜಗತ್ತಿನ ಭಾಗವಾಗಿರುತ್ತಾರೆಯೇ ಎಂಬುದನ್ನು ತಿಳಿದುಕೊಳ್ಳಲು ಸಿನಿಮಾವನ್ನು ನೋಡಲೇಬೇಕು.

ಈ ಸಿನಿಮಾದಲ್ಲಿಯೂ ನೀಲಿ ಮಾತ್ರೆ, ಕೆಂಪು ಮಾತ್ರೆಯ ಕತೆ ಇರುವುದು ಟ್ರೆಲರ್‌ನಿಂದ ಗೊತ್ತಾಗಿದೆ. ನೀಲಿ ಮಾತ್ರೆ, ಕೆಂಪು ಮಾತ್ರೆಯಿಂದಲೇ 'ಮೇಟ್ರಿಕ್ಸ್' ಜಗತ್ತು ಅನಾವರಣವಾಗಿತ್ತು ಮೊದಲ ಸಿನಿಮಾದಲ್ಲಿ. 'ಮೇಟ್ರಿಕ್ಸ್‌: ರಿಸರೆಕ್ಷನ್' ನಲ್ಲಿ ನಿಯೋಗೆ ಎಲ್ಲವೂ ಮರೆತುಹೋಗಿದ್ದು, ಆತನಿಗೆ ಮೇಟ್ರಿಕ್ಸ್‌ ಜಗತ್ತಿನ ನೆನಪು ಸಹ ಇರುವುದಿಲ್ಲ. ಪ್ರತಿದಿನ ಆತನಿಗೆ ಕನಸಷ್ಟೆ ಬೀಳುತ್ತಿರುತ್ತದೆ. ಕೊನೆಗೆ ಆತನಿಗೆ ವ್ಯಕ್ತಿಯೊಬ್ಬ ಕೆಂಪು ಮಾತ್ರೆ ನೀಡಿದಾಗ ಮತ್ತೆ ಆತ 'ಮೇಟ್ರಿಕ್ಸ್' ಜಗತ್ತಿಗೆ ಎಂಟ್ರಿ ಆಗುತ್ತಾನೆ. ಅದಕ್ಕೂ ಮುನ್ನಾ ಬರೀ ನೀಲಿ ಮಾತ್ರೆಗಳನ್ನು ನಿಯೋ ಸೇವಿಸುತ್ತಿರುತ್ತಾನೆ.

'ಮೇಟ್ರಿಕ್ಸ್; ರಿಸರಾಕ್ಷನ್' ಸಿನಿಮಾವು ಡಿಸೆಂಬರ್ 22ಕ್ಕೆ ಕ್ರಿಸ್‌ಮಸ್‌ ಸಮಯದಲ್ಲಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಆಕ್ಷನ್ ತುಂಬಿದ ಈ ಸಿನಿಮಾ ನೋಡಲು ವಿಶ್ವದಾದ್ಯಂತ 'ಮೇಟ್ರಿಕ್ಸ್' ಅಭಿಮಾನಿಗಳು ಕಾಯುತ್ತಿದ್ದಾರೆ. 'ಮೇಟ್ರಿಕ್ಸ್; ರೆಸರಾಕ್ಷನ್' ಸಿನಿಮಾವನ್ನು ಲಾನಾ ವಾಚೊವ್‌ಸ್ಕಿ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ವಿಲೇಜ್ ರೋಡ್‌ಶೋ ಪಿಕ್ಚರ್ಸ್, ವೀನಸ್ ಕ್ಯಾಸ್ಟಿನಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದ್ದಾರೆ. ವಿತರಣೆ ಮಾಡುತ್ತಿರುವುದು ಪ್ರಖ್ಯಾತ ವಾರ್ನರ್ ಬ್ರದರ್ಸ್.

ಪ್ರಿಯಾಂಕಾ ಚೋಪ್ರಾ ಹಲವು ಹಾಲಿವುಡ್ ಸಿನಿಮಾಗಳನ್ನು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 2015 ರಲ್ಲಿ 'ಕ್ವಾಂಟಿಕೊ' ಟಿವಿ ಸರಣಿ ಮೂಲಕ ಹಾಲಿವುಡ್‌ನಲ್ಲಿ ತೊಡಗಿಸಿಕೊಂಡ ಪ್ರಿಯಾಂಕಾ ಹಾಲಿವುಡ್‌ನಲ್ಲಿಯೇ ನೆಲೆ ನಿಲ್ಲುವ ಆಲೋಚನೆಯಲ್ಲಿದ್ದಾರೆ. ಈಗಾಗಲೇ ಕೆಲವು ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸಿರುವ ಪ್ರಿಯಾಂಕಾ ಇನ್ನೂ ಕೆಲವು ಹಾಲಿವುಡ್ ಸಿನಿಮಾ ಹಾಗೂ ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಹಿಂದಿ ಸಿನಿಮಾಗಳಲ್ಲಿಯೂ ನಟಿಸುತ್ತಿರುವ ಪ್ರಿಯಾಂಕಾ ಚೋಪ್ರಾ, 'ಜೀ ಲೆ ಜರಾ', ಕಲ್ಪನಾ ಚಾವ್ಲಾ ಜೀವನ ಆಧರಿತ ಹಿಂದಿ ಸಿನಿಮಾ, 'ಶೀಲಾ' ಹೆಸರಿನ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವುಗಳ ಜೊತೆಗೆ ಆಲಿಯಾ ಭಟ್, ಕರೀನಾ ಕಪೂರ್‌ ಅವರುಗಳ ಜೊತೆಗೆ ಇನ್ನೂ ಹೆಸರಿಡ ಸಿನಿಮಾದಲ್ಲಿಯೂ ಪ್ರಿಯಾಂಕಾ ನಟಿಸಲಿದ್ದಾರೆ.

More from Filmibeat

English summary
'The Matrix; Resurrection' movie trailer released. Priyanka Cohpra seen in trailer. movie will release on December 22.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X