ವಿಶ್ವದ ಶ್ರೀಮಂತ ನಟರಲ್ಲಿ 'ದಿ ರಾಕ್'ಗೆ 2ನೇ ಸ್ಥಾನ
ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 100 ಸೆಲೆಬ್ರಿಟಿಗಳ ಪಟ್ಟಿಯನ್ನ ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿದ್ದು, ರೆಸ್ಲಿಂಗ್ ಲೆಜೆಂಡ್ ಡ್ವೇನ್ ಜಾನ್ಸನ್ (ದಿ ರಾಕ್) ಐದನೇ ಸ್ಥಾನ ಪಡೆದುಕೊಂಡಿದ್ದಾರೆ.
ಆದ್ರೆ, ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ 'ದಿ ರಾಕ್' ಎರಡನೇ ಸ್ಥಾನದಲ್ಲಿದ್ದಾರೆ. 124 ಮಿಲಿಯನ್ ಡಾಲರ್ ಗಳಿಸುವ ಮೂಲಕ ಜಗತ್ತಿನಾದ್ಯಂತ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಅಮೇರಿಕ ನಟ ಜಾರ್ಜ್ ಕೂನಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ರೆಸ್ಲಿಂಗ್ ನೊಂದಿಗೆ ಹಾಲಿವುಡ್ ನಲ್ಲಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಮೋಸ್ಟ್ ಎಂಟರ್ ಟೈನರ್ ಆಗಿರುವ ಡ್ವೇನ್ ಜಾನ್ಸನ್ ವರ್ಷದ ಅತಿ ಶ್ರೀಮಂತ ತಾರೆಯಲ್ಲಿ ಪ್ರಮುಖರು ಎಂದು ಫೋರ್ಬ್ಸ್ ವರದಿ ಮಾಡಿದೆ.

ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಪ್ರತಿಕ್ರಿಯಿಸಿರುವ ಡ್ವೇನ್ ಜಾನ್ಸನ್ ''ನಾನು ತುಂಬಾ ಕಠಿಣ ಶ್ರಮದಿಂದ ಕೆಲಸ ಮಾಡುತ್ತಿದ್ದೇನೆ, ಆದ್ರೆ, ಫೋರ್ಬ್ಸ್ ಇತಿಹಾಸದಲ್ಲಿ ನಾನು ಅತಿ ಹೆಚ್ಚು ಸಂಭಾವನೆ ಪಡೆಯುವ ನಟನಾಗುತ್ತೇನೆ ಎಂದು ಯಾವತ್ತೂ ನಿರೀಕ್ಷಿಸಲಿಲ್ಲ. ತುಂಬಾ ಖುಷಿ ಆಗ್ತಿದೆ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನುಳಿದಂತೆ ವಿಶ್ವದಲ್ಲಿ 100 ಅತಿ ಹೆಚ್ಚು ಸಂಭಾವನೆ ಪಡೆಯುವ ಮನರಂಜನೆಗಾರರಲ್ಲಿ ಅಮೆರಿಕಾದ ಬಾಕ್ಸರ್ ಫ್ಲಾಯ್ಡ್ ಮೇವೆದರ್ ಮೊದಲ ಸ್ಥಾನದಲ್ಲಿದ್ದಾರೆ. ಜಾರ್ಜ್ ಕೂನಿ ದ್ವಿತೀಯ ಸ್ಥಾನದಲ್ಲಿ, ರಿಯಾಲಿಟಿ ಟಿವಿ ಸ್ಟಾರ್ ಮತ್ತು ಉದ್ಯಮಿ ಕೈಲೀ ಜೆನ್ನರ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಅಕ್ಷಯ್ ಕುಮಾರ್ 76ನೇ ಸ್ಥಾನದಲ್ಲಿದ್ದರೆ ಸಲ್ಮಾನ್ ಖಾನ್ 82ನೇ ಸ್ಥಾನ ಪಡೆದಿದ್ದಾರೆ.


Click it and Unblock the Notifications











