Amy Jackson: ಎಂಗೇಜ್ ಆದ 'ದಿ ವಿಲನ್' ಬೆಡಗಿ ಆಮಿ ಜಾಕ್ಸನ್: ಗಂಡು ಯಾರು ಗೊತ್ತೆ?
ಕನ್ನಡ, ತೆಲುಗು, ತಮಿಳು ಮತ್ತು ಬಾಲಿವುಡ್ ಸಿನಿಮಾಗಲ್ಲಿ ಕೆಲಸ ಮಾಡಿರುವ ನಟಿ ಆಮಿ ಜಾಕ್ಸನ್ ತನ್ನ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ್ದಾರೆ. ತಮ್ಮ ಬಹುಕಾಲದ ಗೆಳೆಯ, ನಟ, ಸಂಗೀತಗಾರ ಎಡ್ ವೆಸ್ಟ್‌ವಿಕ್ ಅವರೊಂದಿಗೆ ಎಂಗೇಜ್ ಆಗಿದ್ದಾರೆ. ಸೋಮವಾರ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಜೋಡಿ ಫೋಸ್ಟ್ ಹಂಚಿಕೊಂಡಿದ್ದಾರೆ.
ಕನ್ನಡದ 'ದಿ ವಿಲನ್', ಸಿಂಗ್ ಈಸ್ ಬ್ಲಿಂಗ್, ಏಕ್ ದೀವಾನಾ ಥಾ ಮುಂತಾದ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನ 'ಐ', ಮದ್ರಾಸಿಪಟ್ಟಣಂ ಸೇರಿ ಅನೇಕ ಸಿನಿಮಾಗಳ ಮೂಲಕ ಸೌತ್ ಸಿನಿ ಪ್ರೇಮಿಗಳ ಮನಗೆದ್ದ ಈ ಬೆಡಗಿ ಈಗ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಆಮಿ ಜಾಕ್ಸನ್ ಮತ್ತು ಎಡ್ ವೆಸ್ಟ್‌ವಿಕ್ ಎಂಗೇಜ್
ನಟ, ಸಂಗೀತಗಾರ ಎಡ್ ವೆಸ್ಟ್‌ವಿಕ್, ಆಮಿ ಜಾಕ್ಸನ್ ಅವರಿಗೆ ಸ್ವಿಟ್ಜರ್ಲೆಂಡ್‌ನಲ್ಲಿ ಸೇತುವೆಯೊಂದ ಮೇಲೆ ನಿಂತು ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಆಮಿ ಜಾಕ್ಸನ್ ಹಂಚಿಕೊಂಡಿರುವ ಚಿತ್ರಗಳಲ್ಲಿ ನಟಿ ಬಿಳಿ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದರೆ, ಎಡ್ ವೆಸ್ಟ್‌ವಿಕ್ ಬೂದು ಬಣ್ಣದ ಜಾಕೆಟ್, ಆಲಿವ್ ಹಸಿರು ಪ್ಯಾಂಟ್ ಮತ್ತು ಬೂಟುಗಳನ್ನು ಧರಿಸಿದ್ದರು.
ಮೊದಲ ಚಿತ್ರದಲ್ಲಿ ಎಡ್ ವೆಸ್ಟ್‌ವಿಕ್ ತನ್ನ ಮೊಣಕಾಲುಗಳ ಮೇಲೆ ಕುಳಿತು ಆಮಿ ಜಾಕಸನ್ ಅವರಿಗೆ ತಮ್ಮ ಪ್ರೇಮ ನಿವೇದನೆ ಮಾಡುತ್ತಿದ್ದಾರೆ. ಮುಂದಿನ ಚಿತ್ರದಲ್ಲಿ ಇಬ್ಬರು ಅಪ್ಪಿಕೊಂಡು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಮೂರನೇ ಫೋಟೋದಲ್ಲಿ ಆಮಿ ಜಾಕ್ಸನ್ ಮತ್ತು ಎಡ್ ವೆಸ್ಟ್‌ವಿಕ್ ಒಬ್ಬರನ್ನೊಬ್ಬರು ಖುಷಿಯಿಂದ ತಬ್ಬಿಕೊಂಡಿದ್ದಾರೆ.

ಜ್ಯಾಕ್ ಪೀಟರ್ ವೆಸ್ಟ್‌ವಿಕ್ ಒಬ್ಬ ಇಂಗ್ಲಿಷ್ ನಟ ಮತ್ತು ಸಂಗೀತಗಾರ, ಗಾಸಿಪ್ ಗರ್ಲ್‌ನಲ್ಲಿ ಚಕ್ ಬಾಸ್ ಪಾತ್ರಕ್ಕಾಗಿ ಮತ್ತು ವೈಟ್ ಗೋಲ್ಡ್ ಟಿವಿ ಸರಣಿಯಲ್ಲಿ ವಿನ್ಸೆಂಟ್ ಸ್ವಾನ್ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ.
ಆಮಿ ಜಾಕ್ಸನ್ ಮುಂದಿನ ಚಿತ್ರ
ಆಮಿ ಜಾಕ್ಸನ್ ತನ್ನ ಮುಂಬರುವ ಆಕ್ಷನ್ ಥ್ರಿಲ್ಲರ್ ಚಿತ್ರ 'ಕ್ರಾಕ್' ಅನ್ನು ಘೋಷಿಸಿದ ಕೇವಲ ಒಂದು ತಿಂಗಳ ನಂತರ ಈ ಎಂಗೇಜ್ ಸುದ್ದಿ ಬಂದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ, 23 ಫೆಬ್ರವರಿ 2024 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಕ್ರಾಕ್ ಬಿಡುಗಡೆ ಎಂದು ಘೋಷಿಸಿದ್ದಾರೆ. ಕ್ರಾಕ್ ಚಿತ್ರದಲ್ಲಿ ಆಮಿ ಜಾಕ್ಸನ್ ಜೊತೆಗೆ, ವಿದ್ಯುತ್ ಜಮ್ವಾಲ್, ಅರ್ಜುನ್ ರಾಂಪಾಲ್ ಮತ್ತು ನೋರಾ ಫತೇಹಿ ಕೂಡ ನಟಿಸಿದ್ದಾರೆ. ಆದಿತ್ಯ ದತ್ ನಿರ್ದೇಶನದ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಕ್ರಾಕ್ ಒಂದು ಥ್ರಿಲ್ಲರ್ ಚಿತ್ರವಾಗಿದ್ದು, ಇದನ್ನು ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಪ್ರಸ್ತುತಪಡಿಸುತ್ತಿದೆ. ಆಕ್ಷನ್ ಹೀರೋ ಫಿಲ್ಮ್ಸ್ ಮತ್ತು ಪಿಜೆಡ್ ಪಿಕ್ಚರ್ಸ್ ನಿರ್ಮಿಸಿದೆ. ವಿದ್ಯುತ್ ಜಮ್ವಾಲ್, ಪರಾಗ್ ಸಾಂಘ್ವಿ ಮತ್ತು ಆಕ್ಷನ್ ಹೀರೋ ಫಿಲ್ಮ್ಸ್ ಮತ್ತು ಟೀಮ್ ನಿರ್ಮಿಸಿದ್ದಾರೆ. ಆದಿ ಶರ್ಮಾ ಮತ್ತು ಆದಿತ್ಯ ಚೌಕ್ಸೆ ಸಹ-ನಿರ್ಮಾಣ ಮಾಡಿದ್ದಾರೆ.


Click it and Unblock the Notifications











