Amy Jackson: ಹೊಸ ಫೋಟೋ ಹಾಕಿ ಸಕತ್ ಟ್ರೋಲ್‌ಗೆ ಒಳಗಾದ ನಂತರ ಆಮಿ ಜಾಕ್ಸನ್ ಹೇಳಿದ್ದು ಹೀಗೆ!

ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ್ದ ಕನ್ನಡದಲ್ಲಿ ಸುದೀಪ್‌ಗೆ ನಾಯಕಿಯಾಗಿ ಮಿಂಚಿದ್ದ ನಟಿ ಆಮಿ ಜಾಕ್ಸನ್ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾರೆ. ಅದು ಟ್ರೋಲ್‌ಗಳ ಮೂಲಕ. ಹೌದು... ನಟಿ ಕೆಲ ದಿನಗಳ ಹಿಂದೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದರು. ಅದನ್ನು ನೋಡಿದ ಅಭಿಮಾನಿಗಳು ಹೌಹಾರಿದ್ದರು.

ಹೌದು.. ಆಮಿ ಜಾಕ್ಸನ್ ಹಂಚಿಕೊಂಡಿದ್ದ ಪೋಟೋಗಳಲ್ಲಿ ಗುರುತೇ ಸಿಗದಷ್ಟು ಬದಲಾಗಿದ್ದರು. ಅವರ ಹಳೆಯ ಫೋಟೋಗಳಿಗೂ ಈ ಹೊಸ ಲುಕ್‌ಗೂ ಭಾರಿ ವ್ಯತ್ಯಾಸವಿತ್ತು. ಅದರಲ್ಲೂ ನಟಿಯನ್ನು ಐರಿಶ್ ನಟ ಸಿಲಿಯನ್ ಮರ್ಫಿ ಅವರ ಪೀಕಿ ಬ್ಲೈಂಡರ್ಸ್‌ನ ಪಾತ್ರಕ್ಕೆ ಹೋಲಿಸಿ ಸಕತ್ ಟ್ರೋಲ್ ಮಾಡಿದ್ದರು.

The Villain actress Amy Jackson reacts after getting trolled over her new look

ಟ್ರೋಲ್‌ಗೆ ಆಘಾತ ವ್ಯಕ್ತಪಡಿಸಿದ ನಟಿ!

ಈ ಟ್ರೋಲ್‌ಗಳ ಬಗ್ಗೆ ಮೌನ ಮುರಿದಿರುವ ನಟಿ ಆಮಿ ಜಾಕ್ಸನ್ ತಮ್ಮ ಆಘಾತವನ್ನು ಹೊರಹಾಕಿದ್ದಾರೆ. ಸಂವೇದನೆ ಕಳೆದುಕೊಂಡ ಇಂತಹ ಕಾಮೆಂಟ್‌ಗಳಿಂದ ತುಂಬಾ ದುಃಖವಾಗಿದೆ ಎಂದು ಹೇಳಿದ್ದಾರೆ. ಭಾರತದಲ್ಲಿ ಅದರಲ್ಲು ಮುಖ್ಯವಾಗಿ ಪುರುಷರು ಇಂತಹ ಟ್ರೋಲ್‌ ಮಾಡುತ್ತಿರುವ ಬಗ್ಗೆ ಹೆಚ್ಚು ಅಸಮಾಧಾನ ಹೊರಹಾಕಿದ್ದಾರೆ.

ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ಆಮಿ ಜಾಕ್ಸನ್ , "ನಾನು ನಟಿ, ನಾನು ನನ್ನ ಕೆಲಸವನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತೇನೆ. ಕಳೆದ ತಿಂಗಳಿನಿಂದ, ಯುಕೆಯಲ್ಲಿ ಹೊಸ ಪ್ರಾಜೆಕ್ಟ್‌ನ ಚಿತ್ರೀಕರಣ ಮಾಡುತ್ತಿದ್ದೇನೆ. ಹಾಗಾಗಿ ನಾನು ನಿರ್ವಹಿಸುತ್ತಿರುವ ಪಾತ್ರಕ್ಕಾಗಿ ನಾನು ಸ್ಲಿಮ್ ಆಗಿದ್ದೇನೆ. ನನ್ನ ಪಾತ್ರಕ್ಕೆ ನನ್ನನ್ನು ಸಂಪೂರ್ಣವಾಗಿ ಒಪ್ಪಿಸಬೇಕಾಗಿತ್ತು" ಎಂದು ಹೇಳಿದ್ದಾರೆ.

The Villain actress Amy Jackson reacts after getting trolled over her new look

"ಹೊಸ ಚಲನಚಿತ್ರಕ್ಕಾಗಿ ತಮ್ಮ ಲುಕ್ ಅನ್ನು ಹೆಚ್ಚು ಬದಲಿಸಬೇಕಾಗಿತ್ತು. ಅದಕ್ಕಾಗಿ ನನ್ನನ್ನು ಹೆಚ್ಚು ಪ್ರಶಂಸಿಸಿದ್ದಾರೆ. ಒಬ್ಬ ಮಹಿಳೆ ತನ್ನ ಸೌಂದರ್ಯದ ಆದರ್ಶಗಳಿಗೆ ಹೊಂದಿಕೆಯಾಗದಂತೆ, ವಿಭಿನ್ನ ಹೇರ್‌ಸ್ಟೈಲ್ ಮತ್ತು ಮೇಕ್ಅಪ್ ಮಾಡಿದ ಕ್ಷಣ, ನಿಮ್ಮನ್ನು ಟ್ರೋಲ್ ಮಾಡುವ ಹಕ್ಕನ್ನು ಹೊಂದಿದ್ದಾರೆಂದು ಅವರು ಭಾವಿಸುತ್ತಾರೆ" ಎಂದು ಕಿಡಿಕಾರಿದ್ದಾರೆ.

ಟ್ರೋಲ್‌ಗೆ ಒಳಗಾಗಿದ್ದ ಆಮಿ ಫೋಟೋ!

ಕಳೆದ ವಾರ, ಆಮಿ ಜಾಕ್ಸನ್ ಗೆಳೆಯ ಎಡ್ ವೆಸ್ಟ್‌ವಿಕ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದರು. ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ತಕ್ಷಣವೇ ವೈರಲ್ ಆಗಿದ್ದವು. ಪೀಕಿ ಬ್ಲೈಂಡರ್ಸ್‌ನಲ್ಲಿ ಸಿಲಿಯನ್ ನಿರ್ವಹಿಸಿದ ಜನಪ್ರಿಯ ಪಾತ್ರವಾದ ಥಾಮಸ್ ಶೆಲ್ಬಿಗೆ ಅವರನ್ನು ಹೋಲಿಕೆ ಮಾಡಲಾಗಿತ್ತು.

ನೆಟ್ಟಿಗರೊಬ್ಬರು "ನೀವು ಓಪನ್‌ಹೈಮರ್‌ನಲ್ಲಿ ಅದ್ಭುತವಾಗಿದ್ದೀರಿ" ಎಂದು ವ್ಯಂಗ್ಯಭರಿತವಾಗಿ ಕಾಮೆಂಟ್ ಮಾಡಿದ್ದರು. "ಸಿಲಿಯನ್ ಮರ್ಫಿ ಆಕೆಯ ಐಡಿಯನ್ನು ಹ್ಯಾಕ್ ಮಾಡಿದ್ದಾರೆ" ಎಂದು ಇನ್ನೊಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. ಆಮಿ ಜಾಕ್ಸನ್ ಇಲ್ಲಿದ್ದಾಗ ಹೆಗಿದ್ದರು ವಾಪಸ್ ತಮ್ಮ ದೇಶಕ್ಕೆ ಹೋಗಿ ಹೀಗಾಗಿದ್ದಾರೆ ಎಂದು ಗೇಲಿ ಮಾಡಲಾಗಿತ್ತು.

ಆಮಿ ಜಾಕ್ಸನ್ ಎಡ್ ವೆಸ್ಟ್‌ವಿಕ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.ಕಳೆದ ವರ್ಷ ಜೂನ್‌ನಲ್ಲಿ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಎಡ್ ವೆಸ್ಟ್‌ವಿಕ್ ಮತ್ತು ಆಮಿ ಜಾಕ್ಸನ್ ತಮ್ಮ ಸಂಬಂಧವನ್ನು ದೃಢಪಡಿಸಿದರು. ಆಕೆ ಈ ಮೊದಲು ಜಾರ್ಜ್ ಪನಾಯೊಟೌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅವರಿಗೆ ಒಂದು ಗಂಡು ಮಗುವಿದೆ.

ನಟಿ ಕನ್ನಡ, ತೆಲುಗು, ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ಶಂಕರ್‌ರಂತ ಜೊತೆ ಎರಡು ಬಾರಿ ಕೆಲಸ ಮಾಡಿದ್ದಾರೆ. ವಿಕ್ರಮ್ ನಟನೆಯ ' ಐ' ಮತ್ತು ರಜನಿಕಾಂತ್ ನಟನೆಯ '2.O' ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ನಟ ಆರ್ಯ ಜೊತೆಗೆ ಮದ್ರಾಸಿಪಟ್ಟಣಂ ಸಿನಿಮಾದಲ್ಲಿ, ಧನುಷ್ ಜೊತೆಗೂ ಸಿನಿಮಾ ಮಾಡಿದ್ದಾರೆ. ಇನ್ನು, ಎಕ್ ದೀವಾನಾ ಥಾ, ಸಿಂಗ್ ಈಸ್ ಬ್ಲಿಂಗ್, ಮತ್ತು ಫ್ರೀಕಿ ಅಲಿ ಸೇರಿದಂತೆ ಹಲವಾರು ಬಾಲಿವುಡ್ ಚಿತ್ರಗಳಲ್ಲಿ ಆಮಿ ನಟಿಸಿದ್ದಾರೆ.

More from Filmibeat

English summary
The Villain actress Amy Jackson reacts after getting trolled over her new look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X