ಪ್ರಿಯಾಂಕಾ ಚೋಪ್ರಾ ನಟನೆಯ ಸಿನಿಮಾ ಆಸ್ಕರ್‌ಗೆ ಹತ್ತಿರ
ಪ್ರಿಯಾಂಕಾ ಚೋಪ್ರಾ, ರಾಜ್‌ಕುಮಾರ್ ರಾವ್, ಆದರ್ಶ್ ಗೌರವ್ ನಟಿಸಿರುವ 'ದಿ ವೈಟ್ ಟೈಗರ್' ಸಿನಿಮಾವು ಚಿತ್ರಕತೆ ರೂಪಾಂತರ (ಅಡಾಪ್ಟೆಡ್ ಸ್ಕ್ರೀನ್‌ಪ್ಲೇ) ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿದೆ.
ಅರವಿಂದ್ ಅಡಿಗ ಬರೆದಿರುವ 'ದಿ ವೈಟ್ ಟೈಗರ್' ಪುಸ್ತಕವನ್ನು ರಮಿನ್ ಬಹ್ರಾನಿ ಅವರು ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದರು. ಇದೀಗ ಬೆಸ್ಟ್ ಅಡಾಪ್ಟೆಟ್ ಸ್ಕ್ರೀನ್‌ಪ್ಲೇ ವಿಭಾಗದಲ್ಲಿ ಅಂತಿಮ ಹಂತಕ್ಕೆ 'ದಿ ವೈಟ್ ಟೈಗರ್' ಆಯ್ಕೆಯಾಗಿದೆ.
'ದಿ ವೈಟ್ ಟೈಗರ್' ಜೊತೆಗೆ ಇದೇ ವಿಭಾಗದಲ್ಲಿ 'ದಿ ಫಾದರ್', 'ನೋಮಡ್‌ಲ್ಯಾಂಡ್', 'ಒನ್ ನೈಟ್ ಇನ್ ಮಯಾಮಿ' ಸಿನಿಮಾಗಳು ಸಹ ಇವೆ.

'ದಿ ವೈಟ್ ಟೈಗರ್' ಸಿನಿಮಾವು ಆಸ್ಕರ್‌ನ ಅಂತಿಮ ಸುತ್ತಿಗೆ ಆಯ್ಕೆ ಆದ ವಿಷಯವನ್ನು ಪ್ರಿಯಾಂಕಾ ಚೋಪ್ರಾ ಅವರೇ ಘೋಷಿಸಿದರು. ಅವರು ಇಂದು 93ನೇ ಆಸ್ಕರ್‌ನ ಅಂತಿಮ ಸುತ್ತಿಗೆ ಆಯ್ಕೆಯಾದ ಸಿನಿಮಾಗಳು, ನಟರ ಪಟ್ಟಿಯನ್ನು ತಮ್ಮ ಪತಿ ನಿಕ್ ಜೋನಸ್ ಜೊತೆಗೂಡಿ ಘೋಷಿಸಿದರು.
Recommended Video
'ದಿ ವೈಟ್ ಟೈಗರ್' ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿರುವುದರ ಜೊತೆಗೆ ಬಂಡವಾಳ ಸಹ ಹೂಡಿದ್ದಾರೆ. ಏಪ್ರಿಲ್ 26 ರಂದು ಆಸ್ಕರ್ ಪ್ರಶಸ್ತಿ ವಿತರಣೆ ನಡೆಯಲಿದೆ.


Click it and Unblock the Notifications











