twitter
    For Quick Alerts
    ALLOW NOTIFICATIONS  
    For Daily Alerts

    ಪ್ರಿಯಾಂಕಾ ಚೋಪ್ರಾ ನಟನೆಯ ಸಿನಿಮಾ ಆಸ್ಕರ್‌ಗೆ ಹತ್ತಿರ

    |

    ಪ್ರಿಯಾಂಕಾ ಚೋಪ್ರಾ, ರಾಜ್‌ಕುಮಾರ್ ರಾವ್, ಆದರ್ಶ್ ಗೌರವ್ ನಟಿಸಿರುವ 'ದಿ ವೈಟ್ ಟೈಗರ್' ಸಿನಿಮಾವು ಚಿತ್ರಕತೆ ರೂಪಾಂತರ (ಅಡಾಪ್ಟೆಡ್ ಸ್ಕ್ರೀನ್‌ಪ್ಲೇ) ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿದೆ.

    ಅರವಿಂದ್ ಅಡಿಗ ಬರೆದಿರುವ 'ದಿ ವೈಟ್ ಟೈಗರ್' ಪುಸ್ತಕವನ್ನು ರಮಿನ್ ಬಹ್ರಾನಿ ಅವರು ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದರು. ಇದೀಗ ಬೆಸ್ಟ್ ಅಡಾಪ್ಟೆಟ್ ಸ್ಕ್ರೀನ್‌ಪ್ಲೇ ವಿಭಾಗದಲ್ಲಿ ಅಂತಿಮ ಹಂತಕ್ಕೆ 'ದಿ ವೈಟ್ ಟೈಗರ್' ಆಯ್ಕೆಯಾಗಿದೆ.

    'ದಿ ವೈಟ್ ಟೈಗರ್' ಜೊತೆಗೆ ಇದೇ ವಿಭಾಗದಲ್ಲಿ 'ದಿ ಫಾದರ್', 'ನೋಮಡ್‌ಲ್ಯಾಂಡ್', 'ಒನ್‌ ನೈಟ್ ಇನ್ ಮಯಾಮಿ' ಸಿನಿಮಾಗಳು ಸಹ ಇವೆ.

    The White Tiger Movie Is In Oscars Final Race In Best Adopted Screenplay Category

    'ದಿ ವೈಟ್ ಟೈಗರ್' ಸಿನಿಮಾವು ಆಸ್ಕರ್‌ನ ಅಂತಿಮ ಸುತ್ತಿಗೆ ಆಯ್ಕೆ ಆದ ವಿಷಯವನ್ನು ಪ್ರಿಯಾಂಕಾ ಚೋಪ್ರಾ ಅವರೇ ಘೋಷಿಸಿದರು. ಅವರು ಇಂದು 93ನೇ ಆಸ್ಕರ್‌ನ ಅಂತಿಮ ಸುತ್ತಿಗೆ ಆಯ್ಕೆಯಾದ ಸಿನಿಮಾಗಳು, ನಟರ ಪಟ್ಟಿಯನ್ನು ತಮ್ಮ ಪತಿ ನಿಕ್ ಜೋನಸ್ ಜೊತೆಗೂಡಿ ಘೋಷಿಸಿದರು.

    Recommended Video

    Kichcha Sudeep's 25Y Celebration : ಬೆಳ್ಳಿಹಬ್ಬದ ಸಂಭ್ರಮದಲ್ಲಿ ಶಿವಣ್ಣ,ರವಿಚಂದ್ರನ್ ಬಗ್ಗೆ ಕಿಚ್ಚ ಹೇಳಿದ್ದೇನು

    'ದಿ ವೈಟ್ ಟೈಗರ್' ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿರುವುದರ ಜೊತೆಗೆ ಬಂಡವಾಳ ಸಹ ಹೂಡಿದ್ದಾರೆ. ಏಪ್ರಿಲ್ 26 ರಂದು ಆಸ್ಕರ್ ಪ್ರಶಸ್ತಿ ವಿತರಣೆ ನಡೆಯಲಿದೆ.

    English summary
    The White Tiger Movie Is In Oscar's Final Race In Best Adopted Screenplay Category. Movie directed by Ramin Bahrani.
    Wednesday, March 17, 2021, 15:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X