'ಕೆಜಿಎಫ್ 2' ಎದುರು ಸೋಲುತ್ತಿದೆ ಹೊಸ ಹಾಲಿವುಡ್ ಸಿನಿಮಾ!

ಭಾರತೀಯ ಸಿನಿಮಾಗಳು ನೂರಾರು ಕೋಟಿ ಬಾಚುವುದೆಂದರೆ ಅದು ಅಸಾಧ್ಯ ಎಂಬಂತಾ ಕಾಲವೊಂದಿತ್ತು. ನೂರು-ಸಾವಿರ ಕೋಟಿ ಬಾಕ್ಸ್ ಆಫೀಸ್ ಗಳಿಕೆ ಕೇವಲ ಹಾಲಿವುಡ್ ಸಿನಿಮಾಗಳಿಗಷ್ಟೆ ಸಾಧ್ಯ ಎನ್ನಲಾಗುತ್ತಿತ್ತು ಆದರೆ ಈಗದು ಸುಳ್ಳಾಗಿದೆ.

ಜಗದ್‌ವಿಖ್ಯಾತ ಎಂಸಿಯುನ 'ಥಾರ್' ಸಿನಿಮಾ ಜುಲೈ 07 ರಂದು ಬಿಡುಗಡೆ ಆಗಿದ್ದು, ಕಲೆಕ್ಷನ್ ನಿರೀಕ್ಷಿತ ಮಟ್ಟದಲ್ಲಿಲ್ಲ. ಕನ್ನಡದ 'ಕೆಜಿಎಫ್ 2' ಗಳಿಕೆಗೆ ಹೋಲಿಸಿದರೆ ಹಿಂದೆ ಬಿದ್ದಿದೆ ಸಿನಿಮಾ.

ಹ್ಯಾಮ್ಸ್‌ವರ್ತ್ ನಟನೆಯ 'ಥಾರ್; ಲವ್ ಆಂಡ್ ಥಂಡರ್' ಸಿನಿಮಾ ಜುಲೈ 7 ರಂದು ಬಿಡುಗಡೆ ಆಗಿದ್ದು, ಎರಡು ದಿನಕ್ಕೆ ವಿಶ್ವದಾದ್ಯಂತ ಗಳಿಸಿರುವುದು 48.6 ಮಿಲಿಯನ್ ಡಾಲರ್. ಭಾರತೀಯ ರುಪಾಯಿ ಲೆಕ್ಕದಲ್ಲಿ ಸರಿಸುಮಾರು 337 ಕೋಟಿ.

Thor Love And Thunder Movie Collects 48.6 Million Dolor World Wide In Two Days

'ಕೆಜಿಎಫ್ 2' ಸಿನಿಮಾ ಮೊದಲ ವಾರದಲ್ಲಿ ಬರೋಬ್ಬರಿ 730 ಕೋಟಿ ಗಳಿಸಿತ್ತು. ಈಗಿನ ಕಲೆಕ್ಷನ್ ನೋಡಿದರೆ ವಿಶ್ವದಾದ್ಯಂತ ಅಭಿಮಾನಿಗಳಿರುವ 'ಥಾರ್' ಸಿನಿಮಾ ಮೊದಲ ವಾರ ಕೆಜಿಎಫ್ 2 ಕಲೆಕ್ಷನ್ ಅನ್ನು ಹಿಂದಿಕ್ಕುವುದು ಅನುಮಾನ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸಿನಿಮಾದ ಬಗ್ಗೆ ಋಣಾತ್ಮಕ ವಿಮರ್ಶೆಗಳು ಹೆಚ್ಚಾಗಿ ಕೇಳಿ ಬರುತ್ತಿವೆ.

'ಥೋರ್; ಲವ್ ಆಂಡ್ ಥಂಡರ್' ಸಿನಿಮಾವು ಭಾರತದಲ್ಲಿ ಬಿಡುಗಡೆ ಆದ ದಿನ 18.6 ಕೋಟಿ ರುಪಾಯಿ ಗಳಿಸಿತ್ತು. ಆ ಮೂಲಕ ಭಾರತದಲ್ಲಿ ಮೊದಲ ದಿನ ಅತಿ ಹೆಚ್ಚು ಹಣ ಗಳಿಸಿದ ಐದನೇ ಹಾಲಿವುಡ್ ಸಿನಿಮಾ ಎನಿಸಿಕೊಂಡಿತು. ಈ ವಾರಾಂತ್ಯದಲ್ಲಿ 23 ಕೋಟಿ ಹಣವನ್ನು ಈ ಸಿನಿಮಾ ಗಳಿಸುವ ನಿರೀಕ್ಷೆ ಇದೆ. ಕೆಜಿಎಫ್ 2 ಸಿನಿಮಾಕ್ಕೆ ಹೋಲಿಸಿದರೆ ಈ ಸಂಖ್ಯೆ ಬಹಳ ಕಡಿಮೆ.

ಆದರೆ ವಿಶ್ವದಾದ್ಯಂತ ಈ ವಾರಾಂತ್ಯದಲ್ಲಿ ಸುಮಾರು 77 ಮಿಲಿಯನ್ ಡಾಲರ್ ಅನ್ನು ಥೋರ್ ಸಿನಿಮಾ ಗಳಿಸಲಿದೆ. ಭಾರತೀಯ ರುಪಾಯಿ ಗಣನೆಯಲ್ಲಿ ಈ ಮೊತ್ತ ಸುಮಾರು 610 ಕೋಟಿ ರುಪಾಯಿಗಳಾಗುತ್ತದೆ.

ಭಾರತದಲ್ಲಿ 'ಥೋರ್; ಲವ್ ಆಂಡ್ ಥಂಡರ್' ಸಿನಿಮಾವು ಇಂಗ್ಲೀಷ್, ಹಿಂದಿ, ತೆಲುಗು,ತಮಿಳು, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಆಸ್ಕರ್ ವಿಜೇತ ಟೈಕಾ ವೈಟಿಟಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಕ್ರಿಸ್‌ ಹ್ಯಾಮ್ಸ್‌ವರ್ತ್ ಥಾರ್ ಪಾತ್ರದಲ್ಲಿ, ಕ್ರಿಸ್ಟಿಯನ್ ಬೇಲ್ ವಿಲನ್ ಗಾಡ್ ಬುಚರ್ ಗೊರ್ ಪಾತ್ರದಲ್ಲಿ ನಟಿಸಿದ್ದಾರೆ.

More from Filmibeat

English summary
Hollywood movie Thor Love and Thunder collects 48.6 million dolor in last two days of its release. Movie collects 18 crore rs on its opening day in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X