twitter
    For Quick Alerts
    ALLOW NOTIFICATIONS  
    For Daily Alerts

    ನಾಲ್ಕು ದಿನ ಸತತ 96 ಗಂಟೆ ಪ್ರದರ್ಶನಗೊಳ್ಳಲಿದೆ ಈ ಹೊಸ ಸಿನಿಮಾ!

    |

    ಮಾರ್ನಿಂಗ್, ಮ್ಯಾಟಿನಿ, ಫಸ್ಟ್ ಶೋ, ಸೆಕೆಂಡ್ ಶೋ ಇದು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳುವ ಕಾಮನ್ ಪ್ಯಾಟರ್ನು. ಆದರೆ ಇತ್ತೀಚೆಗೆ ಇದು ಬದಲಾಗಿದೆ. ಹೊಸ ಸಿನಿಮಾ ಬಿಡುಗಡೆ ಆದರೆ ದಿನಕ್ಕೆ ಐದು ಶೋ ಸಹ ಹಾಕಲಾಗುತ್ತಿದೆ. ಕೆಲವು ಕಡೆ ಆರು ಸಹ.

    ಆದರೆ ಇದೀಗ ಹಾಲಿವುಡ್ ಸಿನಿಮಾ ಒಂದು ನಾಲ್ಕು ದಿನಗಳ ಕಾಲ ಸತತ 96 ಗಂಟೆ ತಮ್ಮ ಸಿನಿಮಾವನ್ನು ಬ್ಯಾಕ್‌-ಟು-ಬ್ಯಾಕ್ ಪ್ರದರ್ಶನ ಮಾಡಲಿದೆ. ಸಿನಿಮಾ ಮುಗಿಸಿ ಪ್ರೇಕ್ಷಕರು ಚಿತ್ರಮಂದಿರದಿಂದ ಹೊರಗೆ ಹೋಗಲು ಬೇಕಾಗುವ ಸಮಯದ ಹೊರತಾಗಿ ಸತತವಾಗಿ ಸಿನಿಮಾ ಪ್ರದರ್ಶನ ಆಗುತ್ತಲೇ ಇರುತ್ತದೆ!

    ಈ ರೀತಿ ಸತತವಾಗಿ ಪ್ರದರ್ಶನವಾಗಲಿರುವ ಸಿನಿಮಾ ಹಾಲಿವುಡ್‌ನ ಮಾರ್ವೆಲ್ ಸಿನೆಮ್ಯಾಟಿಕ್ ಯೂನಿವರ್ಸ್‌ನ ಹೊಸ ಸಿನಿಮಾ 'ಥೊರ್; ಲವ್ ಆಂಡ್ ಥಂಡರ್'. ಈ ಸಿನಿಮಾ ಜುಲೈ 7 ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದ್ದು, ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿ ಸೂಪರ್ ವೈರಲ್ ಆಗಿದೆ.

    ಸತತ 96 ಗಂಟೆ ಸಿನಿಮಾ ಪ್ರದರ್ಶನಗೊಳ್ಳಲಿದೆ

    ಸತತ 96 ಗಂಟೆ ಸಿನಿಮಾ ಪ್ರದರ್ಶನಗೊಳ್ಳಲಿದೆ

    'ಥೊರ್; ಲವ್ ಆಂಡ್ ಥಂಡರ್' ಸಿನಿಮಾವು ಬಿಡುಗಡೆ ಆದ ದಿನದಿಂದ ಮುಂದಿನ ನಾಲ್ಕು ದಿನಗಳ ವರೆಗೆ ಸತತವಾಗಿ 96 ಗಂಟೆಗಳ ಕಾಲ ಪ್ರದರ್ಶನ ಕಾಣಲಿದೆ. ಆದರೆ ಈ ಸರಣಿ ಪ್ರದರ್ಶನ ಕೆಲವು ಆಯ್ದ ಚಿತ್ರಮಂದಿರಗಳಲ್ಲಿ ಮಾತ್ರ ಇರಲಿದೆ. ಜುಲೈ 7 ರಿಂದ ಜುಲೈ 10 ರವರೆಗೆ ಈ ಮ್ಯಾರಾಥಾನ್ ಪ್ರದರ್ಶನ ಇರಲಿದೆ.

    ನಾಲ್ಕು ದಿನಕ್ಕೆ 48 ಶೋ!

    ನಾಲ್ಕು ದಿನಕ್ಕೆ 48 ಶೋ!

    'ಥೊರ್: ಲವ್ ಆಂಡ್ ಥಂಡರ್' ಸಿನಿಮಾದ ಒಟ್ಟು ಅವಧಿ 2 ಗಂಟೆಗಳಾಗಿದ್ದು ಸತತವಾಗಿ 24 ತಾಸು ಸಿನಿಮಾ ಓಡಿಸಿದರೆ ದಿನಕ್ಕೆ 12 ಶೋ ಪ್ರದರ್ಶನ ಮಾಡಬಹುದಾಗಿದೆ. ಅಲ್ಲಿಗೆ ನಾಲ್ಕು ದಿನಕ್ಕೆ ಬರೋಬ್ಬರಿ 48 ಶೋ ಪ್ರದರ್ಶನಗೊಳ್ಳಲಿದೆ. ಚಿತ್ರಮಂದಿರ ಸ್ವಚ್ಛತೆ, ಪ್ರೇಕ್ಷಕರ ಆಗಮನ ನಿರ್ಮಗಮನದ ಸಮಯ ಹಿಡಿದರೆ ಒಂದೆರಡು ಶೋಗಳ ಸಂಖ್ಯೆ ಕಡಿಮೆ ಆಗುವ ಸಾಧ್ಯತೆ ಇದೆ.

    ನಾಲ್ಕನೇ 'ಥೊರ್' ಸಿನಿಮಾ

    ನಾಲ್ಕನೇ 'ಥೊರ್' ಸಿನಿಮಾ

    'ಥೊರ್: ಲವ್ ಆಂಡ್ ಥಂಡರ್' ಸಿನಿಮಾ ಥೊರ್ ಸಿನಿಮಾ ಸರಣಿಯ ನಾಲ್ಕನೇ ಸಿನಿಮಾ ಆಗಿದೆ. 'ಅವೇಂಜರ್ಸ್: ಎಂಡ್‌ಗೇಮ್' ಬಳಿಕ ಥೊರ್‌ ಕತೆ ಏನಾಯಿತು ಎಂಬುದನ್ನು ಈ ಸಿನಿಮಾ ಒಳಗೊಂಡಿದೆ. ಅಲ್ಲದೆ ಈ ಸಿನಿಮಾದಲ್ಲಿ ಗಾರ್; ದಿ ಗಾಡ್ ಬುಚರ್ ವಿಲನ್ ಆಗಿದ್ದು, ದೇವರುಗಳನ್ನು ಕೊಲ್ಲುವುದೇ ಈತನ ಕೆಲಸವಾಗಿದೆ. ಥೊರ್ ಸಹ ಮಿಂಚಿನ ದೇವರಾಗಿರುವ ಕಾರಣ ಅವನನ್ನು ಕೊಲ್ಲುವ ಪ್ರಯತ್ನವನ್ನು ಗಾರ್ ಮಾಡಲಿದ್ದಾನೆ. ಬಲಶಾಲಿ ವಿಲನ್ ಗಾರ್‌ ನಿಂದ ಥೊರ್ ಹೇಗೆ ತಪ್ಪಿಸಿಕೊಳ್ಳುತ್ತಾನೆ ಎಂಬುದೇ 'ಥೊರ್; ಲವ್ ಆಂಡ್ ಥಂಡರ್' ಕತೆ.

    ಥೊರ್‌ಗೆ ಹಳೆ ಗರ್ಲ್‌ಫ್ರೆಂಡ್ ಮತ್ತೆ ಸಿಕ್ಕಿದ್ದಾಳೆ

    ಥೊರ್‌ಗೆ ಹಳೆ ಗರ್ಲ್‌ಫ್ರೆಂಡ್ ಮತ್ತೆ ಸಿಕ್ಕಿದ್ದಾಳೆ

    'ಥೊರ್: ಲವ್ ಆಂಡ್ ಥಂಡರ್' ಸಿನಿಮಾದಲ್ಲಿ ಕ್ರಿಸ್ ಹ್ಯಾಮ್ಸ್‌ವರ್ತ್‌ ಹನ್ನೊಂದನೇ ಬಾರಿ ಥೊರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಟೈಕಾ ವೈಯೀಟಿ ನಿರ್ದೇಶನ ಮಾಡಿದ್ದಾರೆ. ಇದು ಇವರಿಗೆ ಎರಡನೇ ಥೊರ್ ಸಿನಿಮಾ ಈ ಮೊದಲು, 'ಥೊರ್: ರ್ಯಾಗ್ನೊರಾಕ್' ಸಿನಿಮಾವನ್ನು ಇವರೇ ನಿರ್ದೇಶಿಸಿದ್ದರು. ಈಗ ಬಿಡುಗಡೆ ಆಗಲಿರುವ 'ಥೊರ್' ಸಿನಿಮಾದಲ್ಲಿ ಕೆಲವು ಅಚ್ಚರಿಗಳಿವೆ ಈ ಸಿನಿಮಾದಲ್ಲಿ. ಥಾರ್‌ನ ಹಳೆಯ ಗರ್ಲ್‌ಫ್ರೆಂಡ್ ಜೇನ್ ಫಾಸ್ಟರ್ ಈ ಸಿನಿಮಾದಲ್ಲಿ ಮತ್ತೆ ಕಾಣಿಸಿಕೊಂಡಿತ್ತು, ಆಕೆ ಲೇಡಿ ಥಾರ್ ಆಗಿದ್ದಾಳೆ. ಈ ಸಿನಿಮಾದಲ್ಲಿ 'ಗಾರ್ಡಿಯನ್ಸ್ ಆಫ್‌ ದಿ ಗ್ಯಾಲೆಕ್ಸಿ'ಯ ಸ್ಟಾರ್ ಲಾರ್ಡ್ ಪಾತ್ರಧಾರಿ ಕ್ರಿಸ್ ಪ್ಯಾಟ್ ಸಹ ಇದ್ದಾರೆ. ಇನ್ನೂ ಕೆಲವು ಅಚ್ಚರಿಗಳು ಸಿನಿಮಾದಲ್ಲಿವೆ.

    English summary
    New Marvel movie Thor: Love and Thunder will be screened continuously for 96 hours from July 07 to July 10. Movie releasing on July 07 in India.
    Friday, July 1, 2022, 12:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X