ಆಸ್ಕರ್ ಕಣದಲ್ಲಿ ಭಾರತದ ಸಾಕ್ಷ್ಯ ಚಿತ್ರ ; ಇತಿಹಾಸ ಸೃಷ್ಟಿಸುತ್ತಾ To Kill a Tiger..?

ಎಲ್ಲರ ಕಣ್ಣೀಗ ಮಾರ್ಚ್ 10ರ ಮೇಲಿದೆ. ಯಾಕೆಂದರೆ ಅವತ್ತು 96ನೇ ಆವೃತ್ತಿಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಲಾಸ್ ಏಂಜಲೀಸ್ ನ ಡಾಲ್ಬಿ ಚಿತ್ರಮಂದಿರದಲ್ಲಿ ನಡೆಯಲಿದೆ. ಇನ್ನೂ ಆಸ್ಕರ್ ಪ್ರಶಸ್ತಿಗೆ ವಿಶ್ವಮಾನ್ಯತೆ ಇರುವುದು, ಆ ಪ್ರಶಸ್ತಿಯತ್ತ ಪ್ರತಿ ವರ್ಷ ಭಾರತೀಯ ಚಿತ್ರರಂಗ ಆಸೆಕಂಗಳಿಂದ ನೋಡುವುದು ಎಲ್ಲರಿಗೂ ಗೊತ್ತಿರುವುದೇ. ಈ ಬಾರಿಯೂ ಕೂಡ ಇಂಥಹದ್ದೇ ವಾತಾವರಣ ಇದೆ. ನಿಜಾ.. ಮಲಯಾಳಂನ '2018' ಸಿನಿಮಾ ಆಸ್ಕರ್ ರೇಸ್ ನಿಂದ ಹೊರ ಬಿದ್ದಿದೆ. ಆದರೆ ಸಮಾಧಾನದ ಸಂಗತಿ ಎಂದರೆ ಕೆನಡಾದ ಟೊರೆಂಟೊದಲ್ಲಿ ನೆಲೆಸಿರುವ ಭಾರತದ ದೆಹಲಿ ಮೂಲದ ನಿಶಾ ಪಹೂಜಾ ನಿರ್ದೇಶನದ To Kill a Tiger ಸಾಕ್ಷ್ಯ ಚಿತ್ರ 2024ರ ಆಸ್ಕರ್ ನ ಅತ್ಯುತ್ತಮ ಡಾಕ್ಯುಮೆಂಟ್ರಿ ಚಿತ್ರ ವಿಭಾಗಕ್ಕೆ ನಾಮ ನಿರ್ದೇಶನಗೊಂಡಿದೆ.

ಜಾರ್ಖಂಡ್ ನಲ್ಲಿ 13 ವರ್ಷದ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಸುತ್ತ ಮುತ್ತ ನಡೆಯುವ ಕಥೆಯಲ್ಲಿ, ನ್ಯಾಯಕ್ಕಾಗಿ ಹೋರಾಡುವ ತಂದೆಯ ಭಾವನಾತ್ಮಕವಾದ ಪ್ರಯಾಣ ಇದೆ. ಪ್ರಕರಣವನ್ನ ಮುಚ್ಚಿ ಹಾಕಲು ಇಡೀ ಊರು ಹಾಗೂ ಆ ಊರಿನ ಮುಖಂಡರು ಮಾಡುವ ರಾಜಕೀಯದ ಕಥನವೂ ಇಲ್ಲಿದೆ. ಕಾರ್ನಿಲಿಯಾ ಪ್ರನ್ಸಿಪೆ ಮತ್ತು ಡೇವಿಡ್ ಒಪ್ಪೆನ್‌ಹೀಮ್ ಈ ಸಾಕ್ಷ್ಯ ಚಿತ್ರವನ್ನ ನಿರ್ಮಿಸಿದ್ದಾರೆ.

To Kill A Tiger gets nominated for oscar..

ಬಾಬಿ ವೈನ್ : ದಿ ಪೀಪಲ್ಸ್ ಪ್ರೆಸಿಡೆಂಟ್, ದ ಎರ್ಟನಲ್ ಮೆಮೊರಿ, ಫೋರ್ ಡಾಟರ್ಸ್ ಮತ್ತು 20 ಡೇಸ್ ಇನ್ ಮರಿಯೊಪಾಲ್ ಜೊತೆ ಶಾ ಪಹೂಜಾ ನಿರ್ದೇಶನದ To Kill a Tiger ಸಾಕ್ಷ್ಯಚಿತ್ರ ಪ್ರಶಸ್ತಿಗಾಗಿ ಸೆಣಸಲಿದೆ. ಭವಿಷ್ಯದ ಫಲಿತಾಂಶ ಹೇಗಾದರೂ ಇರಲಿ, ಆದರೆ ಈ ಹಿಂದೆ ಟೊರೆಂಟೊ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಗಮನ ಸೆಳೆದಿದ್ದ To Kill a Tiger ಸಾಕ್ಷ್ಯ ಚಿತ್ರ ಆಸ್ಕರ್ ಗೆ ಆಯ್ಕೆಯಾಗುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ಯಕ್ಕೆ ಸದ್ದು ಮಾಡ್ತಿದೆ. ಭಾರತೀಯ ಕಲಾವಲಯದಲ್ಲಿ ಕೂಡ ಪುಳಕ ಹಾಗೂ ಸಂತಸ ಈ ಮೂಲಕ ಮನೆ ಮಾಡಿದೆ.

To Kill A Tiger gets nominated for oscar..

ಎಲ್ಲಿ, ಯಾವತ್ತು ನಡೆಯಲಿದೆ ಪ್ರಶಸ್ತಿ ಪ್ರದಾನ ಸಮಾರಂಭ..!

96ನೇ ಆವೃತ್ತಿಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 10ರಂದು ಆಯೋಜನೆಗೊಂಡಿದೆ. ಲಾಸ್ ಏಂಜಲೀಸ್ ನಲ್ಲಿ ನಡೆಯಲಿರುವ ಈ ಸಮಾರಂಭದ ನಿರೂಪಣೆಯನ್ನ ಸತತ ಎರಡನೇ ವರ್ಷ ಜಿಮ್ಮಿ ಕಿಮ್ಮೆಲ್ ವಹಿಸಿಕೊಂಡಿದ್ದಾರೆ. ಒಟ್ಟು ನಾಲ್ಕನೇ ಬಾರಿ ಇವರು ಕಾರ್ಯಕ್ರಮ ನಡೆಸಿಕೊಡ್ತಿರೋದು ಇವರ ಹೆಗ್ಗಳಿಕೆ.

More from Filmibeat

English summary
Indian documentary feature film To Kill a Tiger gets nominated for 96th Academy awards -.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X