'ಟಾಮ್ ಅಂಡ್ ಜೆರ್ರಿ' ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ

'ಟಾಮ್ ಅಂಡ್ ಜೆರ್ರಿ' ಸೀರಿಸ್ ಬಗ್ಗೆ ಕೇಳದವರೇ ಇಲ್ಲ. ಪುಟಾಣಿ ಮಕ್ಕಳಿಂದ ಹಿಡಿದು ವೃದ್ಧರು ಕೂಡ ತುಂಬಾ ಇಷ್ಟ ಪಟ್ಟು ನೋಡುವ ಕಾಮಿಡಿ ಸೀರಿಸ್. ಟಾಮ್ ಮತ್ತು ಜೆರಿ ಎರಡು ಪಾತ್ರಗಳನ್ನಿಟ್ಟುಕೊಂಡು ಹೆಣೆದಿರುವ ಕಥೆ ವಿಶ್ವ ಪ್ರಸಿದ್ಧಿ ಪಡೆದಿದೆ.

ಇದೀಗ ಇದೇ ಟಾಮ್ ಮತ್ತು ಜೆರ್ರಿಯ ಪಾತ್ರವನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಹಾಲಿವುಡ್ ನ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಟಾಮ್ ಅಂಡ್ ಜೆರ್ರಿ ಭಾರತದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಹೌದು, ನಿರೀಕ್ಷೆಯ ಸಿನಿಮಾ ಭಾರತದಲ್ಲಿ ಫೆಬ್ರವರಿ 19ರಂದು ರಿಲೀಸ್ ಆಗುತ್ತಿದೆ.

ವಿಶೇಷ ಎಂದರೆ ಇಂಗ್ಲಿಷ್ ಸಿನಿಮಾ ಹಿಂದಿ ಜೊತೆಗೆ ತೆಲುಗು ಮತ್ತು ತಮಿಳಿನಲ್ಲೂ ಡಬ್ ಆಗಿ ತೆರೆಗೆ ಬರುತ್ತಿದೆ. ಸಹಜ ದೃಶ್ಯ ಮತ್ತು ಟಾಮ್ ಅಂಡ್ ಜೆರ್ರಿ ಆನಿಮೇಶನ್ ಎರಡರ ಮಿಶ್ರಣ ಈ ಸಿನಿಮಾದಲ್ಲಿ ನೋಡಬಹುದು. ಬೆಕ್ಕು ಮತ್ತು ಇಲಿಯ ಆಟವನ್ನು ತೆರೆಮೇಲೆ ನೋಡಿ ಎಂಜಾಯ್ ಮಾಡಲು ಚಿತ್ರಪ್ರೇಕ್ಷಕರು ಕಾರತರದಿಂದ ಕಾಯುತ್ತಿದ್ದಾರೆ.

Tom And Jerry movie set to release on February 19th in India

ಟಾಮ್ ಅಂಡ್ ಜೆರ್ರಿ ಸಿನಿಮಾದಲ್ಲಿ ಯಾವ ಕಥೆ ಇರಲಿದೆ ಎನ್ನುವ ಕುತೂಹಲ ಅಭಿಮಾನಿಗಲ್ಲಿದೆ. ನ್ಯೂಯಾರ್ಕ್ ನಗರದ ಐಷಾರಾಮಿ ಹೋಟೆಲ್ ವೊಂದರಲ್ಲಿ ಅದ್ದೂರಿ ಮದುವೆಗೆ ಸಿದ್ಧತೆ ನಡೆದಿರುತ್ತೆ. ಆ ಮದುವೆಗೆ ಇಲಿಯೊಂದು ತುಂಬಾ ಕಾಟಕೊಡುತ್ತಿರುತ್ತೆ. ಇಲಿಯನ್ನು ಕಾಟ ತಪ್ಪಿಸಲು ಬೆಕ್ಕನ್ನು ನೇಮಿಸಲಾಗುತ್ತಿದೆ. ಅಲ್ಲಿ ಇಬ್ಬರ ನಡುವೆ ನಡೆಯುವ ಕಾದಾಟ ನೋಡುಗರಲ್ಲಿ ನಗೆ ತರಿಸುತ್ತೆ.

ದೊಡ್ಡ ಮಟ್ಟದಲ್ಲಿ ತಯಾರಾಗಿರುವ ಟಾಮ್ ಅಂಡ್ ಜೆರ್ರಿ ಲಾಕ್ ಡೌನ್ ಬಳಿಕ ರಿಲೀಸ್ ಆಗುತ್ತಿರುವುದು ವಿಶೇಷ. ಈಗಾಗಲೇ ಭಾರತದಲ್ಲಿ ವಿಜಯ್ ನಟನೆಯ ಮಾಸ್ಟರ್ ಸಿನಿಮಾ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಶೇ. 50 ಆಸನದಲ್ಲೇ ಸಿನಿಮಾ ಪ್ರದರ್ಶನವಾಗುತ್ತಿದ್ದು, ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಒಂದೊಂದೇ ಸಿನಿಮಾಗಳು ಧೈರ್ಯವಾಗಿ ಚಿತ್ರಮಂದಿರದ ಅಂಗಳಕ್ಕೆ ಕಾಲಿಡುತ್ತಿವೆ.

Recommended Video

Sudeep's look as Bhargav Bakshi in Upendra's Kabzaa : ರಾಜಮೌಳಿ ತಂದೆ ಗರಡಿಯಲ್ಲಿ ತಯಾರಾಗಿದೆ "ಕಬ್ಜ"ದ ಕಥೆ

More from Filmibeat

English summary
Tom And Jerry movie set to release on February 19th in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X