ಬೆಳ್ಳಿತೆರೆ ಮೇಲೆ ಬೆಕ್ಕು-ಇಲಿ ಆಟ: ಭಾರತಕ್ಕೂ ಬರುತ್ತಿದೆ ಟಾಮ್ ಆಂಡ್ ಜೆರ್ರಿ

ಟಾಮ್ ಆಂಡ್ ಜೆರ್ರಿ ಯಾರಿಗೆ ಗೊತ್ತಿಲ್ಲ, ಬೆಕ್ಕು-ಇಲಿಯ ಆಟ ವಿಶ್ವವನ್ನೇ ಅಭಿಮಾನಿಯನ್ನಾಗಿಸಿಕೊಂಡಿದೆ. ವಯಸ್ಸಿನ ಭೇದವಿಲ್ಲದೆ ಟಾಮ್ ಆಂಡ್ ಜೆರ್ರಿಯನ್ನು ಇಷ್ಟಪಡುತ್ತಾರೆ ಜನ.

1945 ರಲ್ಲಿ ವಿಲಿಯಮ್ ಹನ್ನಾ ಮತ್ತು ಜೋಸೆಫ್ ಬಾರ್ಬೆರಾ ಸೃಷ್ಟಿಸಿದ ಟಾಮ್ (ಬೆಕ್ಕು) ಜೆರ್ರಿ (ಇಲಿ) 80 ವರ್ಷವಾದರೂ ಜನಪ್ರಿಯತೆಯ ಉತ್ತುಂಗದಲ್ಲಿಯೇ ಇದೆ.

ಟಿವಿಗಳಲ್ಲಿ ಕೋಟ್ಯಂತರ ಮಂದಿ ಟಾಮ್ ಮತ್ತು ಜೆರ್ರಿಯ ಜಗಳಗಳನ್ನು ನೋಡಿ ನಕ್ಕಿದ್ದಾರೆ. ಟಾಮ್ ಆಂಡ್ ಜೆರ್ರಿಯ 15 ಸಿನಿಮಾಗಳು ಈವರೆಗೆ ಬಂದಿವೆ. ಈಗ ಮತ್ತೊಂದು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದೆ.

ಹೊಸ ಸಿನಿಮಾ ಬಿಡುಗಡೆ ಆಗಲಿದೆ

ಹೊಸ ಸಿನಿಮಾ ಬಿಡುಗಡೆ ಆಗಲಿದೆ

ಟಾಮ್ ಆಂಡ್ ಜೆರ್ರಿಯ ಟಿವಿ ಶೋ ನಲ್ಲಿ ಮನುಷ್ಯರೂ ಸಹ ಅನಿಮೇಷನ್‌ಗಳಾಗಿಯೇ ಇರುತ್ತಿದ್ದರು. ಆದರೆ ಈಗ ಬಿಡುಗಡೆ ಆಗಲಿರುವ ಹೊಸ 'ಟಾಮ್ ಆಂಡ್ ಜೆರ್ರಿ' ಸಿನಿಮಾದಲ್ಲಿ ನಿಜವಾದ ನಟರು ಅಭಿನಯಿಸಿದ್ದಾರೆ. ಟಾಮ್ ಆಂಡ್ ಜೆರ್ರಿ ಮಾತ್ರವೇ ಅನಿಮೇಷನ್‌ನಲ್ಲಿರಲಿವೆ.

ಹೋಟೆಲ್ ಒಂದರಲ್ಲಿ ಮಾಡುವ ಅವಾಂತರದ ಕತೆ

ಹೋಟೆಲ್ ಒಂದರಲ್ಲಿ ಮಾಡುವ ಅವಾಂತರದ ಕತೆ

ಟಾಮ್ ಅಂಡ್ ಜೆರ್ರಿ ಹೋಟೆಲ್ ಒಂದಕ್ಕೆ ಸೇರಿಕೊಂಡು ಅಲ್ಲಿ ಕೆಲವರೊಂದಿಗೆ ಗೆಳೆತನ ಬೆಳೆಸುವ, ಹೋಟೆಲ್‌ನಲ್ಲಿಯೂ ತಮ್ಮ ದುಶ್ಮನಿಯಿಂದ ಹಲವಾರು ಅವಾಂತರಗಳನ್ನು ಸೃಷ್ಟಿಸುವ ಕತೆಯನ್ನು ಹೊಸ ಟಾಮ್ ಆಂಡ್ ಜೆರ್ರಿ ಸಿನಿಮಾ ಹೊಂದಿರಲಿದೆ.

ಮಾರ್ಚ್ 5 ಕ್ಕೆ ಬಿಡುಗಡೆ ಆಗಲಿದೆ

ಮಾರ್ಚ್ 5 ಕ್ಕೆ ಬಿಡುಗಡೆ ಆಗಲಿದೆ

ಈ ಮೊದಲು ಟಾಮ್ ಆಂಡ್ ಜೆರ್ರಿ ಸಿನಿಮಾದ ಬಿಡುಗಡೆಯನ್ನು 2020, ಏಪ್ರಿಲ್ 16 ಕ್ಕೆ ನಿಗದಿಪಡಿಸಲಾಗಿತ್ತು. ಕೊರೊನಾ ಕಾರಣ ಡಿಸೆಂಬರ್‌ಗೆ ಮುಂದೂಡಲಾಯಿತು. ಈಗ ಮತ್ತೆ ಬಿಡುಗಡೆ ಮುಂದೂಡಲಾಗಿದ್ದು, ಮಾರ್ಚ್ 5 ರಂದು ಬಿಡುಗಡೆ ಆಗಲಿದೆ. ಭಾರತದಲ್ಲಿಯೂ ಹಿಂದಿ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

Recommended Video

ಗೊಳಾಡುತ್ತಿದ್ದಾರೆ ಒಂದು ಕಾಲದ ಸ್ಟಾರ್ ನಟ | Filmibeat Kannada
ಭಾರತೀಯ ಮೂಲದ ನಟರು ನಟಿಸಿದ್ದಾರೆ

ಭಾರತೀಯ ಮೂಲದ ನಟರು ನಟಿಸಿದ್ದಾರೆ

ಟಾಮ್ ಆಂಡ್ ಜೆರ್ರಿ ಸಿನಿಮಾವನ್ನು ಟಿಮ್ ಸ್ಟೋರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಭಾರತೀಯ ಮೂಲದ ಪಲ್ಲವಿ ಶಾರ್ದಾ ನಟಿಸಿದ್ದಾರೆ ಜೊತೆಗೆ ಮೈಕಲ್ ಪೀನಾ, ಹ್ಯಾಂಗೋವರ್ ಸಿನಿಮಾದ ಲೆಸ್ಲಿ ಚಾವ್ ಖ್ಯಾತಿಯ ಕೆನ್ ಜೋಂಗ್ ಸಹ ಇದ್ದಾರೆ. ಟಾಮ್ ಆಂಡ್ ಜೆರ್ರಿಯ ಗೆಳತಿಯ ಪಾತ್ರದಲ್ಲಿ ಗ್ರೇಸ್ ಮೊರ್ಟೇಜ್ ನಟಿಸಿದ್ದಾರೆ.

More from Filmibeat

English summary
Tom And Jerry movie will release on March 05, 2021 world wide. Movie will release in India in Hindi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X