ಪ್ರಸಿದ್ಧ 'ಟಾಮ್ ಅಂಡ್ ಜೆರ್ರಿ' ಸೀರಿಸ್ ನಿರ್ದೇಶಕ 'ಆಸ್ಕರ್' ವಿಜೇತ ಜೆನಿ ಡಿಚ್ ನಿಧನ

ಪ್ರಸಿದ್ದ 'ಟಾಮ್ ಅಂಡ್ ಜೆರ್ರಿ' ಸೀರಿಸ್ ಯಾರಿಗೆ ತಾನೆ ಗೊತ್ತಿಲ್ಲ. ಕಾರ್ಟೂನ್ ಪ್ರಿಯರಿಗೆ ತುಂಬ ಇಷ್ಟವಾಗಿರುವ ಸೀರಿಸ್ ಇದು. ಪುಟಾಣಿ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ತುಂಬ ಖುಷಿಯಿಂದ ನೋಡುತ್ತಿದ್ದ ಕಾಮಿಡಿ ಸೀರಿಸ್ ಟಾಮ್ ಅಂಡ್ ಜೆರ್ರಿ. ಇಡೀ ವಿಶ್ವವನ್ನೆ ಸೆಳೆದಿದ್ದ ಟಾಮ್ ಅಂಡ್ ಜೆರ್ರಿ ಸೀರಿಸ್ ನ ನಿರ್ದೇಶಕ ಜೆನಿ ಡಿಚ್, ನಿಧನರಾಗಿದ್ದಾರೆ.

Recommended Video

Who is Joker Joaquin Phoenix Revealed | FILMIBEAT KANNADA

95 ವರ್ಷದ ಜಿನಿ ಡಿಚ್ ನಿಧನಹೊಂದಿದ ಸುದ್ದಿಯನ್ನು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಜೆನಿ ಡಿಚ್ ವಾಸವಿದ್ದ ಪ್ರೇಗ್ ನಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ನಿಧನರಾಗಿರುವ ಬಗ್ಗೆ ವರದಿಯಾಗಿದೆ. ಆದರೆ ಅವರ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಮುಂದೆ ಓದಿ...

ಟಾಮ್ ಅಂಡ್ ಜೆರ್ರಿ ರೋಚಕ ಪಯಣ

ಟಾಮ್ ಅಂಡ್ ಜೆರ್ರಿ ರೋಚಕ ಪಯಣ

ಟಾಮ್ ಅಂಡ್ ಜೆರ್ರಿ ಅನಿಮಲ್ ಕಾರ್ಟೂನ್ ಇದಾಗಿದ್ದು, ಟಾಮ್ (ಬೆಕ್ಕು) ಮತ್ತು ಜೆರ್ರಿ (ಇಲಿ) ಎರಡು ಪಾತ್ರಗಳ ನಡುವಿನ ರೋಚಕ ಪಯಣ ಇದಾಗಿದೆ. ಅಮೆರಿಕನ್ ಆನಿಮೇಟೆಡ್ ಕಾಮಿಡಿ ಸೀರಿಸ್ ವಿಶ್ವದಾದ್ಯಂತ ಪ್ರಸಿದ್ಧಿಗಳಿಸಿದೆ.

95 ವರ್ಷದ ಜೆನಿ ಡಿಚ್

95 ವರ್ಷದ ಜೆನಿ ಡಿಚ್

ಜೆನಿ ಡಿಚ್ ಆಗಸ್ಟ್ 8 1924ರಲ್ಲಿ ಅಮೆರಿಕದ ಚಿಕಾಗೊದಲ್ಲಿ ಜನಿಸಿದ್ದಾರೆ. ನಂತರ ಪ್ರೇಗ್ ಗೆ ಪಯಣ ಬೆಳೆಸಿದ ಜೆನಿ ಡಿಚ್ ಆನಂತರ ಅಲ್ಲಿಯೆ ನೆಲೆಸುತ್ತಾರೆ. ಅಲ್ಲಿಯೆ ಭಾವಿ ಪತ್ನಿ ಡೆಂಕಾ ಅವರನ್ನು ಭೇಟಿಯಾಗುತ್ತಾರೆ. ಜೆನಿ ಅವರಿಗೆ ಇಬ್ಬರು ಪತ್ನಿಯರಿದ್ದಾರೆ ಮತ್ತು ಮೂರು ಮಕ್ಕಳು ಇದ್ದಾರೆ. ಮೂರು ಮಕ್ಕಳು ಸಹ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ.

13 ಎಪಿಸೋಡ್ ನಿರ್ದೇಶನ ಮಾಡಿರುವ ಡಿಚ್

13 ಎಪಿಸೋಡ್ ನಿರ್ದೇಶನ ಮಾಡಿರುವ ಡಿಚ್

1940 ರಿಂದ 1967 ರವರೆಗೆ ಟಾಮ್ ಅಂಡ್ ಜೆರ್ರಿಯನ್ನು 8 ಜನ ನಿರ್ದೇಶಕರು ನಿರ್ದೇಶನ ಮಾಡಿದ್ದಾರೆ. 1961 ರಿಂದ 1962 ರವರೆಗೆ 13 ಎಪಿಸೋಡ್ ಅನ್ನು ಡಿಚ್ ನಿರ್ದೇಶನ ಮಾಡಿದ್ದಾರೆ. ಕಾರ್ನೂನ್ ಆರ್ಟಿಸ್ಟ್, ಸಿನಿಮಾ ನಿರ್ದೇಶಕ, ಅನಿಮೇಶನ್ ನಿರ್ದೇಶಕ ಜೆನಿ ಡಿಚ್ ವಿಶ್ವದ ಗಮನ ಸೆಳೆದಿದ್ದಾರೆ.

ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ

ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ

1960ರಲ್ಲಿ ಜೆನಿ ಡಿಚ್ ನಿರ್ದೇಶನದ ಮುನ್ರೋ ಕಿರುಚಿತ್ರ ಅತ್ಯುತ್ತಮ ಅನಿಮೇಟೆಡ್ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಇನ್ನೂ 1964ರಲ್ಲಿ ಹಿಯರ್ಸ್ ನುಡ್ನಿಕ್ ಮತ್ತು ಹೌ ಟು ಅವೈಡ್ ಫ್ರೆಂಡ್ಶಿಪ್ ಚಿತ್ರ ಎರಡು ಬಾರಿ ನಾಮ ನಿರ್ದೇಶನಗೊಂಡಿತ್ತು. ಜೆನಿ ಡಿಚ್ ಮಾಡಿರುವ ಜೀವಮಾನಸಾಧನೆ ನೋಡಿ 2004 winsore MCCAY award ನೀಡಲಾಗಿದೆ.

More from Filmibeat

English summary
Famous Tom And Jerry series director Gene Deitch dies at 95.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X